ಸಮ್ಮಿಶ್ರ ಸರ್ಕಾರ ಉಳಿದಿರೋದೇ ನನ್ನಿಂದ ಎಂದು ಪರೋಕ್ಷವಾಗಿ ಹೇಳಿದ ಸಿದ್ದರಾಮಯ್ಯ

ಮೈಸೂರು: ಮೈಸೂರಿನ ಇಲವಾಲದಲ್ಲಿ ಪ್ರಚಾರದ ವೇಳೆ ಭಾಷಣ ಮಾಡುವಾಗ ಮಾಜಿ ಸಿಎಂ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರ ಉಳಿದಿರುವುದೇ ತಮ್ಮಿಂದ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ನಾನು, ಮುಖ್ಯಮಂತ್ರಿಗಳು ಮಾಡಿದ ಕೆಲಸಗಳು ಹೊಳೆಯಲ್ಲಿ ಹುಣಸೆಹಣ್ಣು ತೇಯ್ದಂತೆ ಆಗಿ ಹೋಯ್ತು. ನಾನು 5 ವರ್ಷ ಒಳ್ಳೆಯ ಯೋಜನೆಗಳನ್ನು ತಂದಿದ್ದೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ ಏನೂ ಕೆಲಸ ಮಾಡಲಿಲ್ಲ.

ನಾನು ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಶಾದಿ ಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದೆ. ಆದ್ರೆ ಚಾಮುಂಡೇಶ್ವರಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಪ್ರಯೋಜನ ಆಗಲಿಲ್ಲ. ಹೊಳೆಯಲ್ಲಿ ಹುಣಸೇಹಣ್ಣು ತೇಯ್ದಂತೆ ಆಯ್ತು ಎಂದು ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ನಮಗೆ 80 ಸೀಟ್, ಬಿಜೆಪಿಯವರಿಗೆ 104 ಸೀಟ್ ಕೊಟ್ಟರು. ಇವತ್ತು ಬಿಜೆಪಿ 104ಸೀಟು ಗೆದ್ದು ಸರ್ಕಾರದ ಅಸ್ಥಿರತೆಗೆ ಸದಾ ಪ್ರಯತ್ನಿಸುತ್ತಿದೆ. ಪ್ರತಿದಿನ ನಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಸಾಹಸವಾಗಿದೆ. ನಾನು ನಮ್ಮ 80 ಜನ ಎಂಎಲ್ಎಗಳನ್ನು ಹಿಡಿದಿಟ್ಟುಕೊಳ್ಳದಿದ್ದರೆ, ಸರ್ಕಾರ ಏನಾಗುತ್ತಿತ್ತೋ ಏನೋ ಎನ್ನುವ ಮೂಲಕ ಸಮ್ಮಿಶ್ರ ಸರ್ಕಾರ ಉಳಿದಿರುವುದು ನನ್ನಿಂದ ಎಂದು ಪರೋಕ್ಷವಾಗಿ ಹೇಳಿದ್ದಾರೆ.

Recommended For You

Leave a Reply

Your email address will not be published. Required fields are marked *