ಹಾಸನದ ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ ಭವಾನಿ ರೇವಣ್ಣ ವಾಕ್ಸಮರ

ಹಾಸನ: ನಿಮಗೆ ಕೇವಲ ಏಳು ತಿಂಗಳು ಗೂಟದ(ಕೆಂಪು ದೀಪ) ಕಾರು ಬಿಟ್ಟಿರಲು ಆಗಲಿಲ್ಲ, ಅದಕ್ಕಾಗಿ ನೀವು ಪಕ್ಷ ಬದಲಾವಣೆ ಮಾಡುತ್ತಿದ್ದೀರಿ ಎಂದು ಭವಾನಿ ರೇವಣ್ಣ ಎ.ಮಂಜು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಾಸನದ ಹೊಳೆನರಸೀಪುರದಲ್ಲಿ ಪ್ರಚಾರ ಸಭೆಯಲ್ಲಿಂದು ಮಾತನಾಡಿದ ಅವರು, ನಿಮಗೆ ಕೇವಲ ಏಳು ತಿಂಗಳು ಗೂಟದ ಕಾರು ಬಿಟ್ಟಿರಲು ಆಗಲಿಲ್ಲ, ಅದಕ್ಕಾಗಿ ನೀವು ಪಕ್ಷ ಬದಲಾವಣೆ ಮಾಡುತ್ತಿದ್ದೀರಿ. ನಿಮ್ಮ ಹೆಂಡತಿಯೂ, ಮಗನೂ ಕಾಂಗ್ರೆಸ್​ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾರೆ ಎಂದು ಭವಾನಿ ರೇವಣ್ಣ ಗುಡುಗಿದ್ದಾರೆ.

ಇನ್ನು ಕಾಂಗ್ರೆಸ್​​ಗೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದೀರಿ ಮುಂದೆ ಯಾವ ಪಕ್ಷಕ್ಕೆ ಹೋಗುತ್ತಿರಾ(?), ನೀವು ಮಂತ್ರಿಯಾಗಿದ್ದಾಗ ಅಭಿವೃದ್ಧಿ ಮಾಡಲು ಆಗಲಿಲ್ಲವೇ(?) ಎಂದು ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ ಭವಾನಿ ರೇವಣ್ಣ ಪ್ರಶ್ನೆ ಮಾಡಿದ್ದಾರೆ.

ಭವಾಣಿ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಪುತ್ರ. ಇನ್ನು ಚುನಾವಣೆ ಬಹಿರಂಗ ಸಭೆ ಕೊನೆಯ ಎರಡು ದಿನಗಳು ಬಾಕಿ ಇರುವುದರಿಂದ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ.

Recommended For You

Leave a Reply

Your email address will not be published. Required fields are marked *