ಈ ಬಾರಿ ಮತದಾನದಿಂದ ರಾಹುಲ್ ದ್ರಾವಿಡ್‌ ದೂರ ಉಳಿಯಲು ಕಾರಣ ಏನು ಗೊತ್ತಾ..?

ಟೀಂ ಇಂಡಿಯಾದ ಮಾಜಿ ನಾಯಕ, ಕರ್ನಾಟಕ ಚುನಾವಣೆ ಆಯೋಗದ ಐಕಾನ್‌ ಮತ್ತು ರಾಯಭಾರಿಯಾಗಿದ್ದ ರಾಹುಲ್​ದ್ರಾವಿಡ್​ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗದಂಥ ಪರಿಸ್ಥಿತಿ ಎದುರಾಗಿದೆ.

ವಿಡ್ ಕುಟುಂಬದವರ ಹೆಸರು ಮತದಾನದ ಪಟ್ಟಿಯಿಂದ ಡಿಲೀಟ್

ಇಂದಿರಾನಗರ ನಿವಾಸಿಗಳಾಗಿದ್ದ ದ್ರಾವಿಡ್ ಅವರ ಕುಟುಂಬಕ್ಕೂ ಕೂಡ ಮತದಾನದ ಹಕ್ಕು ಕೈತಪ್ಪಿದೆ. ಏಪ್ರಿಲ್ 18ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕಿರುವ ದ್ರಾವಿಡ್ ಕುಟುಂಬದವರ ಹೆಸರು ಮತದಾನದ ಪಟ್ಟಿಯಿಂದ ಡಿಲೀಟ್ ಆಗಿದ್ದು, ಮತ್ತೆ ಸೇರಿಸಲು ಆಗದಂಥ ಪರಿಸ್ಥಿತಿ ಎದುರಾಗಿದೆ.

ಇಂದಿರಾನಗರದಲ್ಲಿದ್ದ ರಾಹುಲ್​ ಕುಟುಂಬ ಈಗ ಅಶ್ವತ್ಥ್‌ನಗರದ ನಿವಾಸಿಗಳಾಗಿದ್ದಾರೆ. ವಿಳಾಸ ಬದಲಾವಣೆಗಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸರಿಯಾದ ವೇಳೆಗೆ ಫಾರ್ಮ್‌ 6 ಸಲ್ಲಿಸಬೇಕಿತ್ತು. ಆದರೆ, ನಿಗದಿತ ವೇಳೆಯಲ್ಲಿ ಅರ್ಜಿ ಸಲ್ಲಿಸದ ಕಾರಣ ಮತದಾನ ಪಟ್ಟಿಯಿಂದ ರಾಹುಲ್‌ ದ್ರಾವಿಡ್‌ ಹೆಸರು ಮತ್ತೆ ಸೇರ್ಪಡೆಯಾಗಿಲ್ಲ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.