‘ಮೈತ್ರಿ ಸರ್ಕಾರ 5 ವರ್ಷ ಪೂರ್ಣವಾಗೋದು ಸಿದ್ದರಾಮಯ್ಯ ಕೈಯಲಿದೆ’- ಜಿ.ಟಿ ದೇವೇಗೌಡ

ಮೈಸೂರು: ಸಿದ್ದರಾಮಯ್ಯ-ಜಿ.ಟಿ ದೇವೇಗೌಡ ಒಂದಾಗಲ್ಲ, ಅವರು ಒಟ್ಟಾಗಿ ಮಾತಾಡಲ್ಲ, ಪ್ರಚಾರಕ್ಕೆ ಬರೋಲ್ಲ ಎಂಬ ಆತಂಕ ಇತ್ತು ಎಂದು ಮೈಸೂರು ಜಿಲ್ಲಾ ಉಸ್ತುವರಿ ಸಚಿವ ಜಿ.ಟಿ ದೇವೇಗೌಡ ಹೇಳಿದರು.

ಮೈಸೂರಿನಲ್ಲಿಂದು ಜಂಟಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ-ಜಿ.ಟಿ ದೇವೇಗೌಡ ಒಂದಾಗಲ್ಲ, ಅವರು ಒಟ್ಟಾಗಿ ಮಾತಾಡಲ್ಲ, ಪ್ರಚಾರಕ್ಕೆ ಬರೋಲ್ಲ ಎಂಬ ಆತಂಕ ಇತ್ತು. ಪ್ರಚಾರದ ವೇಳೆ ಹೆಸರು ಹಾಕಿಸಿಲ್ಲ, ಮಾಡಿಲ್ಲ ಎಂಬುದು ಗೊತ್ತಾಯಿತು. ಆಗ ನಾನು, ಸಿದ್ದರಾಮಯ್ಯನವರು ಒಂದೂವರೆ ಗಂಟೆ ಮಾತುಕತೆ ನಡೆಸಿದ್ದೇವು ಎಂದರು.

ಇನ್ನು ನಾವು ಈ ಹಿಂದೆ ಇದೇ ಕಡಕೊಳದಲ್ಲಿ ಪ್ರಚಾರ ಮಾಡಿದ್ವಿ. ನಮ್ಮ ಮೈತ್ರಿ ಸರ್ಕಾರ 5 ವರ್ಷ ಪೂರ್ಣವಾಗೋದು ಸಿದ್ದರಾಮಯ್ಯ ಅವರ ಕೈ ಯಲ್ಲಿದೆ. ಅದಕ್ಕಾಗಿಯೇ ನಾವು ಸಿದ್ದರಾಮಯ್ಯ ಅವರು ಕೊಟ್ಟ ಒಳ್ಳೆಯ ಯೋಜನೆಯನ್ನು ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಬಳಿಕವು ಮುಂದುವರೆಸಿದ್ದೇವೆ ಸಚಿವ ಜಿ.ಟಿ ದೇವೇಗೌಡ ತಿಳಿಸಿದರು.

ಸದ್ಯ ಬಿಜೆಪಿಯಿಂದ ಯಾವುದೇ ಭರವಸೆಗಳನ್ನು ಈಡೇರಿಸುವ ಕೆಲಸವಾಗಿಲ್ಲ, ಅವರಿಂದ ಬಡವರಿಗೆ ರೈತರಿಗೆ ಕೆಲಸವಾಗಿಲ್ಲ, ಬಿಜೆಪಿಯನ್ನ ಸೋಲಿಸುವ ಸಲುವಾಗಿ ದೇವೆಗೌಡ ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಪಕ್ಷಗಳು ಒಂದಾಗಿವೆ ಎಂದು ನುಡಿದರು.

ಅಲ್ಲದೇ ಯಾವುದೇ ಮುಖಂಡರನ್ನು ಕರೆದಿಲ್ಲ ಎಂಬುದನ್ನು ಬದಿಗಿಟ್ಟು ಕೆಲಸ ಮಾಡಿ, ನಾವು ದೇಶಕ್ಕಾಗಿ ಮಾತನಾಡದವರು ಒಟ್ಟಾಗಿದ್ದೇವೆ. ನೀವು ಕೂಡ ವೈಯುಕ್ತಿಕ ಹಿತಾಸಕ್ತಿ ಬದಿಗೊತ್ತಿ ಮೈತ್ರಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿ ಎಂದು ಕರೆ ಕೊಟ್ಟರು.

ಕೆಲವರು ನಾವು ಒಂದಾಗಿ ಬರುವುದನ್ನು ಪ್ರಶ್ನೆ ಮಾಡಿದ್ದರು. ನೀವು ಹೇಗೆ ಒಂದಾಗಿ ಬರುತ್ತೀರಿ ಎಂದು ಕೇಳಿದ್ದರು ಅಂತವರಿಗೆ ಮೈತ್ರಿ ಸರ್ಕಾರದಲ್ಲಿ ನಮಗೆ ಸಿಕ್ಕಿರುವ ಅಧಿಕಾರದ ಬಗ್ಗೆ ತಿಳಿಸಿದ್ದೇನೆ ಇದರಿಂದ ಎಲ್ಲರು ಒಟ್ಟಾಗಿ ಮೈತ್ರಿ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು  ಅದುವಲ್ಲದೇ, ಈ ಕ್ಷೇತ್ರದಲ್ಲಿ ಜಿ.ಟಿ. ದೇವೆಗೌಡ, ಸಿದ್ದರಾಮಯ್ಯ ಒಂದಾದ್ರು. ಈ ಮೂಲಕ ಕ್ಷೇತ್ರದಲ್ಲಿ ಹೆಚ್ಚು ಮತಗಳಿಂದ ಗೆಲ್ಲಿಸಿದ್ರಿ ಎಂಬ ಸಂದೇಶ ಕೊಡಿ ಸಚಿವ ಜಿ.ಟಿ.ದೇವೆಗೌಡ ಮನವಿ ಮಾಡಿಕೊಂಡರು.

ಜಿ.ಟಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಪ್ರತಿ ಸ್ಪರ್ಧಿಯಾಗಿ ಚಾಮುಂಡೇಶ್ವರಿ ಕ್ಷೇತ್ರದ ಕಣದಲ್ಲಿದ್ದರು. ಇಲ್ಲಿ ಜೆಡಿಎಸ್-ಕಾಂಗ್ರೆಸ್​​​ ನೇರನೇರಾ ಸ್ಪರ್ಧೆಗೆ ಇಳಿದಿದ್ದರು. ಈ ಕ್ಷೇತ್ರದಲ್ಲಿ ಜಿ.ಟಿ ದೇವೇಗೌಡರು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೋಲಿಸಿ ವಿಜಯ ಪತಾಕೆ ಹಾರಿಸಿದ್ದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.