ನಿರ್ಮಲಾ ಸೀತಾರಾಮನ್‌ ಸಂವಾದ – ನಾಯಕ ಯಾರು..?

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು, ಬೆಂಗಳೂರು ನಗರ, ನೆಲಮಂಗಲ ಮತ್ತು ತುಮಕೂರಿನಲ್ಲಿ ಸಂವಾದ ನಡೆಸಿದರು.

ಬೆಂಗಳೂರಿನ ಎಸ್‌ಜೆಆರ್‌ಸಿ ಕಾಲೇಜು, ನೆಲಮಂಗಲದ ಬಸವೇಶ್ವರ ಮಹಿಳಾ ಕಾಲೇಜು ಮತ್ತು ತುಮಕೂರು ಎಸ್‌ಐಟಿ ಕಾಲೇಜಿನಲ್ಲಿ ಎಂಜಿನಿಯರ್‌ಗಳು, ವೈದ್ಯರು, ವಕೀಲರು, ಉದ್ಯಮಿಗಳ ಜೊತೆ ಸಂವಾದ ನಡೆಸಿದರು. ವಿರೋಧ ಪಕ್ಷಗಳಲ್ಲಿ ಮೋದಿಗೆ ಸಮಾನರಾದ ನಾಯಕರಿಲ್ಲ ಎಂದ ಅವರು, ಮಹಾಘಟಬಂಧನ್‌ನಲ್ಲಿ ನಾಯಕರು ಯಾರು..? ಎಂದು ಪ್ರಶ್ನಿಸಿದರು.

ಎರಡು ಬಾರಿಗೆ ಪಾಕ್‌ಗೆ ತಕ್ಕ ಪಾಠ ಕಲಿಸಿದ್ದೇವೆ. ಸೈನಿಕರಿಗೆ ಸ್ವಾತಂತ್ರ್ಯ ಕೊಡದೇ ಹೋಗಿದ್ದರೆ ಬಾಲಾಕೋಟ್‌ನಂಥ ದಾಳಿ ಸಾಧ್ಯವಾಗ್ತಿರಲಿಲ್ಲ ಎಂದಿದ್ದಾರೆ.

Recommended For You

Leave a Reply

Your email address will not be published. Required fields are marked *