‘ಚರ್ಚೆಗೆ ಮೋದಿ ಕರೆದ್ರೆ ಇಲ್ಲೊಬ್ಬ ನಾನ್ ಬರ್ತೀನಿ ಅಂದ ಹೋಗೋ ಮೂದೇವಿ ನೀನ್ ಬೇಡ’- ಸಿದ್ದರಾಮಯ್ಯ

ಮೈಸೂರು: ನರೇಂದ್ರ ಮೋದಿಯನ್ನ ಚರ್ಚೆಗೆ ಕರೆದ್ರೆ ರಾಮದಾಸ್ ನಾನ್ ಬರುತ್ತೇನೆ ಎನ್ನುತ್ತಾನೆ ಅದಕ್ಕೆ ನಾನು ಹೇಳ್ದೆ ಹೋಗೋ ಮೂದೇವಿ ನೀನ್ ಬೇಡ ಅಂತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರದ ಸಭೆಯಲ್ಲಿ ಹೇಳಿದರು.

ಮೈಸೂರು ಜಿಲ್ಲೆ ಕಡಕೋಳದಲ್ಲಿಂದು ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೋದಿ ಬಹಿರಂಗ ಚರ್ಚೆಗೆ ಎಲ್ಲದರು ಬರಲಿ ನಾನು ಸಿದ್ದ. ಮೋದಿ ಪಾರ್ಲಿಮೆಂಟ್​ಗೂ ಬರಲ್ಲ, ಮಾಧ್ಯಮಗಳ ಕೈಗೂ ಸಿಗಲ್ಲ, ಮೋದಿ ಪುಕ್ಕಲ ಎಂದರು.

ಇನ್ನು ಮಸೀದಿಯಲ್ಲಿ ನಮಾಜ್ ಶುರುವಾಗಿದ್ದು ಕೇಳಿ ಸಿದ್ದರಾಮಯ್ಯ ಎರಡು ನಿಮಿಷಗಳ ಕಾಲ ಭಾಷಣ ಸ್ಥಗಿತಗೊಳಿಸಿದರು. ನಮಾಜ್​ ಮುಗಿದ ಬಳಿಕ ಮತ್ತೆ ಮಾತು ಶುರು ಮಾಡಿದ ಅವರು, ನಮಗೆ ಬಿಜೆಪಿಯ ಪ್ರತಾಪ್ ಸಿಂಹ ವಿರೋಧಿ. ಮಂಡ್ಯದಲ್ಲಿ ಸುಮಲತಾ ನಮ್ಮ ವಿರೋಧಿ ಅಲ್ಲ, ಬಿಜೆಪಿ ವಿರೋಧಿಗಳು ಎಂದು ಸಿದ್ದರಾಮಯ್ಯ ಹೇಳಿದರು.

ಅದಕ್ಕೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ, ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ, ಮೈಸೂರಿನಲ್ಲಿ ಸಿ.ಹೆಚ್ ವಿಜಯ್ ಶಂಕರ್​​ಗೆ ಮತ ಹಾಕಿ. ನಮ್ಮ ಮೇಲಿನ ಅಭಿಮಾನ ಇದ್ರೆ ಮೈತ್ತಿ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಮನವಿ ಮಾಡಿಕೊಂಡರು.

ಅಷ್ಟೇ ಅಲ್ಲದೇ, ನಮ್ಮ ಟಾರ್ಗೆಟ್ ಮೋದಿಯಲ್ಲ, ಕೋಮುವಾದಿ ಬಿಜೆಪಿ. ಸುಳ್ಳು ಹೇಳೋ ಮೋದಿ ಬಗ್ಗೆ ನನ್ನ ಬಳಿ ಏನು ಕೇಳಬೇಡಿ. ಅವರಿಗೆ ನಾನು, ದೇವೆಗೌಡರು, ಕುಮಾರಸ್ವಾಮಿ ಟೀಕೆ ಮಾಡೋದು ಬಿಟ್ಟು ಬೇರೆನು ಗೊತ್ತಿದೆ ಎಂದು ತಿಳಿಸಿದರು.

ಸದ್ಯ ನಾನು, ದೇವೆಗೌಡರು ಜೊತೆಯಾದ ಮೇಲೆ ಪರಿಸ್ಥಿತಿ ಉತ್ತಮವಾಗಿದೆ ಅದರಿಂದ ಒಳ್ಳೆಯ ಫಲಿತಾಂಶ ಬರುತ್ತದೆ. ಬಿಜೆಪಿಯವರು ರಾಮಮಂದಿರ ಕಟ್ಟುತ್ತೇವೆ ಎಂದು ಹೇಳಿ ಎಷ್ಟು ವರ್ಷವಾಯ್ತು. ಈಗಲೂ ಅವರು ಅದನ್ನೆ ಜಪ ಮಾಡ್ತಾ ಇದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಡಾ. ಬಿ.ಆರ್ ಅಂಬೇಡ್ಕರ್ ಪರಿನಿರ್ವಾಣ ದಿನದಂದೇ ಅದನ್ನ ಧ್ವಂಸ ಮಾಡಿದ್ದರು. ಬಿಜೆಪಿಯವರು ಬಾಬ್ರಿ ಮಸೀದಿ ಹೊಡೆದು ಹಾಕಿದ್ರು. ಅಂದಿನಿಂದಲು ರಾಮಮಂದಿರ ಕಟ್ಟುತ್ತೇವೆ ಎಂದು ಹೇಳುತ್ತ ಬಂದರು. ಮೋದಿ ಅಧಿಕಾರಕ್ಕೆ ಬಂದು ಐದು ವರ್ಷವಾಯ್ತು. ಯಾಕೆ ಇನ್ನು ರಾಮಮಂದಿರ ಕಟ್ಟಿಲ್ಲ, ಪ್ರತಿ ಚುನಾವಣೆಯಲ್ಲಿ ರಾಮಮಂದಿರ ಕಟ್ಟುತ್ತೇವೆ ಎಂದು ಸುಳ್ಳು ಹೇಳುತ್ತೀರಿ. ನಿಮ್ಮಲ್ಲಿ ಸತ್ಯ ಇದ್ದರೆ ರಾಮ ಮಂದಿರ ಕಟ್ಟಿ ಇದಕ್ಕೆಲ್ಲ ಅದ್ಯಾವನೋ ಸಿಂಹ ಉತ್ತರ ಕೊಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ಮಾತನಾಡಿದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.