ಈಶ್ವರಪ್ಪಗೆ ಬುಡಬುಡಿಕೆ ಎಂದು ಸಚಿವ ರೇವಣ್ಣ ತಿರುಗೇಟು

ಈಶ್ವರಪ್ಪ ನಂಥವರನ್ನು ನಮ್ಮೂರಿನ ಶಿವನೇ ನುಂಗುತ್ತಾನೆ, ಈಶ್ವರಪ್ಪ ಅವನು ಏನು ಅಂತ ಎಲ್ಲರಿಗೂ ಗೊತ್ತಿದೆ ಎಂದು ಏಕವಚನದಲ್ಲೇ ಈಶ್ಚರಪ್ಪನಿಗೆ ಲೋಕಪಯೋಗಿ ಸಚಿವ ಹೆಚ್​.ಡಿ ರೇವಣ್ಣ ಹೇಳಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ನಿಂಬೆಹಣ್ಣು ಸಹಿತ ರೇವಣ್ಣನನ್ನೇ ನುಂಗುತ್ತೇನೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೇ ನೀಡಿದ ಅವರು,  ಅವನು ಒಂದು ರೀತಿ ಬುಡುಬುಡುಕೆ ಇದ್ದ ಹಾಗೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಯಾರೂ ಈಶ್ಚರಪ್ಪನ ಹೆಸರು ಹೇಳ್ತಾರಾ? ಅವನಿಗೆ ಮಾನ ಮಾರ್ಯಾದೆ ಇದ್ರೆ ಯಡಿಯೂರಪ್ಪ ಕಾಲಿಗೆ ಬೀಳಲಿ, ಇಂಥ ಈಶ್ವರಪ್ಪ ನಂಥವರನ್ನು ನಾನೂ ಎಷ್ಟೋ ಜನ ನೋಡಿದ್ದೇನೆ ಎಂದು ಕಿಡಿಕಾರಿದರು.

ಅಧಿಕಾರ ಇದ್ದಾಗ ಹಾಸನ ಜಿಲ್ಲೆಗೆ ಬಿಜೆಪಿ ಕೊಡುಗೆ ಏನು? ಸಮ್ಮಿಶ್ರ ಸರಕಾರ ಹಾಸನಕ್ಕೆ ಹಲವು ಯೋಜನೆ ಕೊಟ್ರೆ, ಇದು ಹಾಸನ ಬಜೆಟ್ ಅಂತಾರೆ, ಆದರೂ ಯಾವ ಮುಖ ಹೊತ್ತು ಮತ ಕೇಳುತ್ತಾರೋ ಗೊತ್ತಿಲ್ಲ, ದೇವೇಗೌಡರು ಹಾಸನ ಜಿಲ್ಲೆಗೆ ಅವರದೇ ಕೊಡುಗೆ ನೀಡಿದ್ದಾರೆ, ಹೀಗಾಗಿ 8 ವಿಧಾನಸಭಾ ಕ್ಷೇತ್ರಗಳ ಜನರು ಪ್ರಜ್ವಲ್ ಗೆಲ್ಲಿಸೋ ತೀರ್ಮಾನ ಮಾಡಿದ್ದಾರೆ ಎಂದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.