‘ಅವರಿಬ್ಬರೂ ಒಗ್ಗೂಡುವುದರಲ್ಲಿ ಆಶ್ಚರ್ಯ ಪಡಬೇಕಿಲ್ಲ’- ಮಾಜಿ ಸಿಎಂ ಪುತ್ರ

ಮಂಡ್ಯ: ಜಿ.ಡಿ ದೇವೇಗೌಡ ಮತ್ತು ನಮ್ಮ ತಂದೆ (ಸಿದ್ದರಾಮಯ್ಯ) ರಾಜಕೀಯದಲ್ಲಿ ಸ್ನೇಹಿತರಾಗಿದ್ದರು ಎಂದು  ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ, ಶಾಸಕ ಡಾ. ಯತೀಂದ್ರ ಹೇಳಿದರು.

ನಗರದ ಕಾವೇರಿ ಉದ್ಯಾನವದಲ್ಲಿಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಪತ್ರಿಮೆಗೆ ಮಾಲಾರ್ಪಣೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಡಾ. ಯತೀಂದ್ರ,  ಜಿ.ಡಿ ದೇವೇಗೌಡ ಮತ್ತು ನಮ್ಮ ತಂದೆ (ಸಿದ್ದರಾಮಯ್ಯ) ರಾಜಕೀಯದಲ್ಲಿ ಸ್ನೇಹಿತರಾಗಿದ್ದರು ಎಂದರು.

ನಂತರ ರಾಜಕೀಯ ಸನ್ನಿವೇಶ ಬೇರೆ ಆದಾಗ ಬೇರೆ ಬೇರೆ ಪಕ್ಷದಿಂದ ಸ್ಪರ್ಧೆ ಮಾಡಿದ್ದರು ರಾಜಕೀಯ ಹೋರಾಟ ಬೇರೆ, ವೈಯಕ್ತಿಕ ಸಂಬಂಧ ಬೇರೆ ಹಾಗಾಗಿ ಅವರಿಬ್ಬರೂ ಒಗ್ಗೂಡುವುದರಲ್ಲಿ ಆಶ್ಚರ್ಯ ಪಡಬೇಕಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇನ್ನು ನಮ್ಮ ಗುರಿ ಮೈತ್ರಿ ಅಭ್ಯರ್ಥಿಯನ್ನ ಗೆಲ್ಲಿಸಿ, ಕೋಮುವಾದಿ ಪಕ್ಷ ಸೋಲಿಸುವುದು ಅದಕ್ಕಾಗಿ ಏನೆಲ್ಲ ಮಾಡಬೇಕೋ, ಅದನ್ನು ನಾವು ಮಾಡುತ್ತೇವೆ. ಮಳವಳ್ಳಿ ತಾಲೂಕಿನ ಹಲವೆಡೆ ಪ್ರಚಾರ ಮಾಡುತ್ತಿದ್ದೇನೆ. ನಾವು ನಿಖಿಲ್ ಪರ ಪ್ರಚಾರ ಮಾಡುತ್ತಿದ್ದೇವೆ ಎಂದು ಶಾಸಕ ಡಾ.ಯತೀಂದ್ರ ತಿಳಿಸಿದರು.

Recommended For You

Leave a Reply

Your email address will not be published. Required fields are marked *