ಸುಮಲತಾ ಪರ ನಟ ಉಪೇಂದ್ರ ಮತ ಕೇಳಿದ್ದು ಹೀಗೆ..?

ಸುಮಲತಾ ಬಗ್ಗೆ ನನಗೆ ತುಂಬಾ ಗೌರವ ಇದೆ, ಸುಮಲತಾ ನಮ್ಮ ಅತ್ತಿಗೆ ಇದ್ದಂಗೆ ಎಂದು ನಟ ರಿಯಲ್ ಸ್ಟಾರ್ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ರೇಬಲ್ ಸ್ಟಾರ್ ಅಂಬರೀಶ ನನ್ನ ಅಣ್ಣ, ಸುಮಲತಾ ಅಂಬರಿಶ್ ನನಗೆ ಅತ್ತಿಗೆ ಇದ್ದ ಹಾಗೆ ಅವರ ಮೇಲೆ ಅಪಾರ ಗೌರವವನ್ನು ಹೊಂದಿದ್ದೇನೆ ಎಂದು ರೀಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ.

ಅವರಿಗೆ ಚುನಾವಣೆಯಲ್ಲಿ ಒಳ್ಳೆದಾಗುತ್ತೆ. ನಾನು ನಟನಾಗಿ ಮತ ಕೇಳ್ತಾ ಇಲ್ಲ, ನಟನಾಗಿ ಓಟು ಕೇಳಿದರೆ ನಿವೇಲ್ಲಾ ನಗುತ್ತೀರಾ ಇದರಿಂದ. ಒಳ್ಳೆಯ ವಿಚಾರಗಳಿಗೆ ಮತ ಹಾಕಿ ಎಂದು ಕೇಳ್ತಾ ಇದೀನಿ ಎಂದು ತಿಳಿಸಿದರು.

ಇನ್ನು ಇದೇ ಸಂದರ್ಭದಲ್ಲಿ ಸುಂದರವಾದ ಕಲ್ಪನೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ. ದಯವಿಟ್ಟು ಉತ್ತಮ ಪ್ರಜಾಕೀಯ ಪಕ್ಷ ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.