‘ನಿಖಿಲ್ ಎಲ್ಲಿದ್ಯಾಪ್ಪ’ ಟ್ರೋಲ್​​​ ಬಗ್ಗೆ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ..!

ಮಂಡ್ಯ: ನಿಖಿಲ್ ಎಲ್ಲಿದ್ಯಾಪ್ಪ ಅಂದ್ರೆ ನಮ್ಮ ಹೃದಯಲ್ಲಿದ್ದಾನೆ ಅಂತಾ ಹೇಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದವರಿಗೆ ಕೊನೆಗೂ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಉತ್ತರಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್ ನಗರ ವ್ಯಾಪ್ತಿಯಲ್ಲಿಂದು ಪ್ರಚಾರದ ವೇಳೆ ಮಾತನಾಡಿದ ಕುಮಾರಸ್ವಾಮಿ, ನಿಖಿಲ್ ಎಲ್ಲಿದದ್ಯಾಪ್ಪ ಅಂತ ಕೇಳಿದ್ರೆ, ನಿಖಿಲ್​​ ನಮ್ಮ ಹೃದಯಲ್ಲಿದ್ದಾನೆ ಅಂತಾ ಹೇಳಬೇಕು ಎಂದು ಹೇಳಿದ್ದಾರೆ.

ನಿಖಿಲ್ ಎಲ್ಲಿದ್ಯಾಪ್ಪ ಎಂದರೆ ನಮ್ಮ ಹೃದಯದಲ್ಲಿದ್ದಾನೆ ಎನ್ನಬೇಕು, ಇತ್ತೀಚಿನ ದಿನಗಳಲ್ಲಿ ಒಂದು ತಂಡ ಕೆಟ್ಟ ರೀತಿಯಲ್ಲಿ ಈ ರೀತಿ ಬಿಂಬಿಸ್ತಿದ್ದಾರೆ.  ಈ ರೀತಿಯ ಕೆಟ್ಟ ಅಭಿರುಚಿ ಇಟ್ಟು ಕೊಂಡಿರೋದು ಸಮಾಜ ಹಾಳು ಮಾಡುವಂತದ್ದು, ಇಂತಹ ವರ ಬಗ್ಗೆ ನಾವು ಬಹಳ ಎಚ್ಚರಿಕೆ ಯಿಂದ ಇರಬೇಕು ಎಂದರು.

ಇನ್ನು ನಿಖಿಲ್ ಎಲ್ಲಿದ್ಯಾಪ್ಪ, ನಿಖಿಲ್ ಎಲ್ಲಿದ್ಯಾಪ್ಪ ಎಂದು ಸೋಷಿಯಲ್ ಮಿಡಿಯಾಗಳಲ್ಲಿ ಬಹಳ ಚರ್ಚೆ ಯಾಗುತ್ತಿತ್ತು. ಯುವಕರು ಈ ಟ್ರೋಲ್​ಗಳ ಬಗ್ಗೆ ತಲೆ ಕಡೆಸಿಕೊಳ್ಳಬೇಡಿ. ಆ ಟ್ರೋಲ್ ಮಾಡುವರು ಯಾರು(?) ಈ ಬಗ್ಗೆ ಮಾತನಾಡುವವರಿಗೆ, ಟ್ರೋಲ್ ಮಾಡುವ ಯುವಕರಿಗೆ ಹಾಗೂ ವಿರೋಧ ಪಕ್ಷದವರಿಗೆ ಸಿ ಎಂ ಕುಮಾರಸ್ವಾಮಿ ಕೊನೆಗು ಉತ್ತರ ಕೊಟ್ಟಿದ್ದಾರೆ.

ಸದ್ಯ ಸಿಎಂ ಕುಮಾರಸ್ವಾಮಿ ಪ್ರಚಾದಲ್ಲಿ ಸಚಿವ ಸಾ.ರಾ ಮಹೇಶ್ ಹಾಗೂ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಸಿಎಂ ಸಾಥ್ ನೀಡಿದ್ದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.