ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ ನಟ ದರ್ಶನ್

ಸಿನಿಮಾ ನಟರನ್ನು ನೋಡಲು ಜನ ಬರ್ತಾರೆ ಓಟ್ ಹಾಕಲ್ಲ ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿರುಗೇಟು ನೀಡಿದ್ದಾರೆ.

ಮಂಡ್ಯದ ಮದ್ದೂರಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಭಾನುವಾರ ಮಾತನಾಡಿದ ಅವರು, ನಮ್ಮನ್ನು ನೋಡಲು ಜನ ಬರ್ತಾರೆ, ಆದರೆ ಆ ಜನ ಓಟ್ ಹಾಕಲ್ಲ ಅಂತಾರೆ. ನೀವು ಈಗ ನನ್ನ ನೋಡಲು ಬಂದಿದ್ದೀರಾ, ಇಲ್ಲ ಓಟ್ ಹಾಕಲು ಬಂದಿದ್ದೀರಾ ಎಂದು ಜನರನ್ನು ದರ್ಶನ್ ಪ್ರಶ್ನೆ ಮಾಡಿದರು. ಇನ್ನೂ ಇದೇ ವೇಳೆ ದರ್ಶನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾವು ಓಟ್ ಹಾಕಲು ಬಂದಿದ್ದೇವೆ ಎಂದು ಕೂಗಿ ಜನರು ಹೇಳಿದರು.

ಒಂದು ಜೋಡೆತ್ತು ತೆಗೆದುಕೊಳ್ಳು ಒಂದುವರೆ ಲಕ್ಷ ಬೇಕು, ಹಸು ತಗೊಳ್ಳಕ್ಕೆ 70ಸಾವಿರ ಬೇಕು, ನಾಯಿ ತಗೋತೀನಿ ಅಂದರು, 20ಸಾವಿರ ಬೇಕೆ ಬೇಕು, ಅಂತದ್ರಲ್ಲಿ ನಮ್ಮ ಮತಗಳನ್ನ 500-1000ಕ್ಕೆ ಮಾರಿಕೊಂಡು ನಾವು ಪ್ರಾಣಿಗಳಿಗಿಂದ ಕೀಳಾಗೋದು ಬೇಡ, ಈ ಬಾರಿ ಅಭಿಮಾನ ಪಕ್ಕಕ್ಕಿಟ್ಟು ಸ್ವಾಭಿಮಾನಕ್ಕಾಗಿ ಮತಚಲಾಯಿಸೋಣ, ಸುಮಮ್ಮನಿಗೆ ಮತಹಾಕಿ ಒಂದು ಬಾರಿ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.