24 ಗಂಟೆ ಮೊಬೈಲ್ ಬಳಸುತ್ತೀರ ನಿಮಗೊಂದು ಶಾಕಿಂಗ್ ನ್ಯೂಸ್ ..!

ದಿನದ 24 ಗಂಟೆಗಳ ಕಾಲ ಕೂಡ ಕೆಲವರಿಗೆ ಮೊಬೈಲ್​ ಬಳಸುವಷ್ಟು ಕ್ರೇಜ್​​ ಇರುತ್ತಾದೆ. ಇಂತಹವರಿಗೆ ಈಗೊಂದು ಶಾಕಿಂಗ್ ಸುದ್ದಿ ಕಾದಿದೆ .

ಕೆಲವರು ತಡರಾತ್ರಿಯ ವರೆಗೂ ಮೊಬೈಲ್ ಬಳಸುತ್ತಾರೆ ಇದರಿಂದ ಆಗುವಂತಹ ಅನಾಹುತಗಳ ಬಗ್ಗೆ ತಿಳಿದುಕೊಂಡರೇ ನೀವು ಫೋನ್ ಬಳಸುವಾಗ ಸಾಕಷ್ಟು ಎಚ್ಚರವನ್ನು ವಹಿಸುತ್ತೀರಾ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪೋನ್ ಬಳಸುತ್ತಾರೆ ಅಂತವರಿಗಾಗಿಯೇ ಈ ಸ್ಟೋರಿ.

24 ಗಂಟೆ ಮೊಬೈಲ್ ಬಳಸುವುದರಿಂದ ಹಾಗುವ ದುಷ್ಪರಿಣಾಮಗಳು

ಮಕ್ಕಳಾಗಿರಬಹುದು ಅಥವಾ ದೊಡ್ಡವರಿರಬಹುದು ಸದಾ ಮೊಬೈಲ್ ಪೋನ್ ಗೆ ಅಂಟಿಕೊಂಡಿರುವುದರಿಂದ ಒಳಿತಿಗಿಂತ ಕೆಡುಕೇ ಹೆಚ್ಚುಗುತ್ತಾದೆ.

1) ಜ್ಞಾಪಕ ಶಕ್ತಿ ನಷ್ಟ, ಏಕಾಗ್ರತೆ ಕುಸಿತ, ಅಜೀರ್ಣ, ನಿದ್ರಾಹೀನತೆ, ತಲೆನೋವು, ತಲೆಸುತ್ತು, ಹೃದಯದ ಬಡಿತದಲ್ಲಿ ಏರುಪೇರು ಸೇರಿದಂತೆ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಉಂಟಾಗುತ್ತದೆ.

2) ಪೋಷಕರು ಮೊಬೈಲ್ ಫೋನ್ ಬಳಕೆಗೆ ಕಡಿವಾಣ ಹಾಕಿ ಮಕ್ಕಳನ್ನು ಮೊಬೈಲ್ ಗಳಿಂದ ಹೊರಬರುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಮತ್ತು ಗೇಮ್ ಆಟವಾಡಲೂ ಮಕ್ಕಳಿಗೆ ಅದಷ್ಟು ಕಡಿಮೆ ಪೋನ್ ಕೊಡಬೇಕು.

3) ಇನ್ನೋಂದು ಮುಖ್ಯವಾದ ಅಂಶವೆಂದರೇ  ಸ್ಮಾರ್ಟ್‌ಫೋನ್‌ಗಳಲ್ಲಿ ಎಲ್ಲ ಬಗೆಯ ಅಪ್ಲಿಕೇಶನ್, ವಿಡಿಯೊಗಳು ಲಭ್ಯವಿರುವುದರಿಂದ ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳು ಇಂದು ಅಡ್ಡದಾರಿ ಹಿಡಿಯುವಂತಾಗಿದೆ  ಅದ್ದರಿಂದ ಪೋಷಕರು ಎಚ್ಚರವಹಿಸಬೇಕು.

4) ಕೆಲವರು ಅತಿಯಾಗಿ ಮೊಬೈಲ್​​​​ ಬಳಸಿ ಕಣ್ಣಿಗೆ ಬೇನೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ. ಆದರಲೂ ಚಿಕ್ಕ ಮಕ್ಕಳಿಗೆ ಅದಷ್ಟು ಬೇಗನೆ ಈ ಕಾಯಿಲೆಗಳು ಕಾಣಿಸಿಕೊಳ್ಳುತ್ತಾವೆ.

5) ರಾತ್ರಿ ಮೊಬೈಲ್​ ಬಳಕೆಯಿಂದ ನಿದ್ದೆಗೆಡುವ ಜನರು ಆ್ಯಸಿಡಿಟಿ, ನರಗಳ ಸೆಳೆತ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ.

6) ಯುವಜನತೆಯಂತೂ ಪಬ್​​ಜಿ ಗೇಮ್​, ಟಿಕ್​ಟಾಕ್​ನಂತಹವುಗಳ ಮೋಡಿಯಿಂದ ದಿನ 6-8 ಗಂಟೆ ಮೊಬೈಲ್​ನಲ್ಲೇ ಕಳೆಯುವ ಖಯಾಲಿ ಬೆಳೆಸಿಕೊಳ್ಳುತ್ತಿದ್ದು, ಇದು ಕೂಡ ಆರೋಗ್ಯಕ್ಕೆ ಹಾನಿಕರ ಎಂದು ಸಂಶೋಧನೆಯು ಅಭಿಪ್ರಾಯಪಟ್ಟಿದೆ.

7) ಮೊಬೈಲ್ ಫೋನ್ ಸಂಕೇತಗಳಿಂದ ಅಥವಾ ತುರ್ತು ಸೇವೆಗಳು ಬಳಸುವ ಸಂಕೇತಗಳಿಂದ ಮೆದುಳಿನ ಕಾರ್ಯನಿರ್ವಹಣೆ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಪುರಾವೆ ಇಲ್ಲವೆಂದು ಸಂಶೋಧಕರು ಪತ್ತೆಹಚ್ಚಿದ್ದಾರೆ.

8)  ಹೃದಯದ ಕಾಯಿಲೆಗಳು ಕ್ಯಾನ್ಸರ್, ಆರ್ಥೈಟಿಸ್, ಆಲ್ಜೀಮರ್ ಕಾಯಿಲೆಗಳು ಬರುವ ಸಾಧ್ಯತೆಯನ್ನು ಹೆಚ್ಚಿಸುವುದಲ್ಲದೆ ವ್ಯಕ್ತಿ ಬೇಗ ವೃದ್ಧನಾಗುವ ಸಾಧ್ಯತೆಯೂ ಇದೆ.

9) ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಅನ್ವಯ ಪ್ರಕಾರ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮೊಬೈಲ್ ಬಳಕೆಯಿಂದ ಶೇ 70 ರಷ್ಟು ಬ್ರೈನ್ ಟ್ಯೂಮರ್ ಕಾಯಿಲೆಗೊಳಗಾಗುತ್ತಾರೆ.

10) ಮೊಬೈಲ್ ಫೋನ್ ಮಾನವನ ಆರೋಗ್ಯಸ್ಥಿತಿಯನ್ನು ಗಣನೀಯವಾಗಿ ಹದೆಗೆಡಿಸುತ್ತದೆ. ಮೊಬೈಲ್ ಫೋನ್ ನಿ೦ದ ಹೊರಹೊಮ್ಮುವ ವಿಕಿರಣಗಳು ಮೆದುಳಿನ ಮೇಲೆ ದುಷ್ಪರಿಣಾಮವನ್ನು೦ಟುಮಾಡುತ್ತವೆ. ಮೊಬೈಲ್ ನ ಅತಿಯಾದ ಬಳಕೆಯು ಮೆದುಳಿನ ಕೋಶಗಳ ಮೇಲೆ ಅದ್ಯಾವ ಮಟ್ಟಿಗೆ ದುಪ್ಪರಿಣಾಮವನ್ನು ಬೀರುತ್ತದೆಯೆ೦ದರೆ, ದೀರ್ಘಕಾಲದ ಸ೦ಭಾಷಣೆಯ ನ೦ತರ ನಿಮಗೆ ತಲೆಸುತ್ತು ಬರಬಹುದು.

ದಿನನಿತ್ಯದ ಜೀವನದಲ್ಲಿ ಮೊಬೈಲ್ ಫೋನ್ ಇಂದು ಅನಿವಾರ್ಯವೆನಿಸಿದೆ. ದೂರದಲ್ಲಿರುವ ಸ್ನೇಹಿತರಿಗೆ, ಬಂಧುಗಳಿಗೆ ತುರ್ತು ಸುದ್ದಿ ಮುಟ್ಟಿಸಲು, ಸಂದೇಶ ತಲುಪಿಸಲು, ವ್ಯವಹಾರ ಮಾತುಕತೆಗೆ ಮೊಬೈಲ್ ಅತ್ಯವಶ್ಯಕವಾಗಿದೆ ಅದನ್ನು ಬಿಟ್ಟು ದಿನದ 24ಗಂಟೆಯು ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಾದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.