ಧರ್ಮದ ಹೆಸರಿನಲ್ಲಿ ಕಿತ್ತಾಡುವವರ ಮಧ್ಯೆ ಇಂಥವರೂ ಇರ್ತಾರೆ

ಬೆಂಗಳೂರು: ಭಾರತ ಭಾವೈಕ್ಯತೆ ಸಾರುವ ನಾಡೆಂದು ಇಂದು ಮತ್ತೆ ಸಾಬೀತಾಗಿದೆ. ಧರ್ಮದ ಹೆಸರಿನಲ್ಲಿ ಕಿತ್ತಾಡುವವರ ಮಧ್ಯೆ ಎಲ್ಲರೂ ನಮ್ಮವರೇ ಎಂಬ ಸಂದೇಶ ಸಾರಿದ್ದಾರೆ ಈ ಮುಸ್ಲಿಂ ಯುವಕ.

ದೇಶದೆಲ್ಲೆಡೆ ಅದ್ಧೂರಿಯಾಗಿ ರಾಮನವಮಿ ಆಚರಣೆ ಮಾಡಲಾಗುತ್ತಿದೆ. ಶ್ರೀರಾಮನ ದೇಗುಲವನ್ನು ಶುದ್ಧಗೊಳಿಸಿ, ಸಿಂಗರಿಸಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಆದರೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ರಾಮನ ದೇಗುಲದಲ್ಲಿ ನಡೆಯುವ ರಾಮನವಮಿ ಸ್ವಲ್ಪ ವಿಶೇಷವಾಗಿದೆ. ಸದ್ದಾಂ ಹುಸೇನ್(27) ಎಂಬಾತ ರಾಮನವಮಿ ಪ್ರಯುಕ್ತ ದೇಗುಲವನ್ನು ಶುದ್ಧಿಕರಿಸಿದ್ದಾನೆ. ಈತ ಕಳೆದ 3 ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿದ್ದು, ಇಂದು ರಾಮನವಮಿ ಇರುವ ಕಾರಣ ನಿನ್ನೆ ದೇಗುಲದ ಸ್ವಚ್ಛತೆಯಲ್ಲಿ ತೊಡಗಿರುವಾಗ, ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯ ಚಿತ್ರೀಕರಿಸಿದವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ಕೊಟ್ಟ ಸದ್ದಾಮ್, ನಾನು ಕಳೆದ 3 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಕೆಲಸ ನನಗೆ ಖುಷಿ ಕೊಡುತ್ತದೆ. ನನ್ನ ಕೆಲಸಕ್ಕೆ ಹಲವರು ಬೆಂಬಲಿಸಿದ್ದಾರೆ ಎಂದು ಹೇಳಿದ್ದಾನೆ.

Recommended For You

Leave a Reply

Your email address will not be published. Required fields are marked *