ಲಾಲ್ ಬಾಗ್ ನಲ್ಲಿ ಮತ್ತೊಂದು ಮಾಸ್ಟರ್ ಪ್ಲಾನ್

ಸಸ್ಯಕಾಶಿ ಲಾಲ್ ಬಾಗ್ ಸಿಲಿಕಾನ್ ಮಂದಿಯ ಫೇವರೇಟ್ ಸ್ಪಾಟ್.. ಇಲ್ಲಿಗೆ ನಿತ್ಯ ಏನಿಲ್ಲಾ ಅಂದ್ರೂ ನೂರಾರು ಪ್ರವಾಸಿಗರು ವಿಸಿಟ್​ ಕೊಡ್ತಾನೆ ಇರ್ತಾರೆ. ಹೀಗೆ ಬಂದೋರು ಪಾರ್ಕಿಂಗ್​ ಪ್ಲೇಸ್​ನಲ್ಲಿ ತಮ್ಮ ವಾಹನಗಳನ್ನ ಪಾರ್ಕ್ ಮಾಡಿ ಆಮೇಲೆ ತಗೊಂಡು ಹೋದ್ರೆ ಪರ್ವಾಗಿಲ್ಲ. ಕೆಲವರು ಬೆಳಗ್ಗೆ ವೆಹಿಕಲ್ಸ್​ ನಿಲ್ಸಿದ್ರೆ ಸಂಜೆ ಬಂದು ತಗೊಂಡು ಹೋಕ್ತಿದ್ದಾರಂತೆ. ಇಂಟ್ರೆಸ್ಟಿಂಗ್​ ಅಂದ್ರೆ, ಯಾವ್ದಾದರು ಕೆಲಸ ಇದರೆ ಇಲ್ಲೇ ಗಾಡಿಯನ್ನ ಪಾರ್ಕ್​ ಮಾಡಿ ಮುಗಿಸ್ಕೊಂಡು ಬರ್ತಿದರು. ಇನ್ಮುಂದೆ ಇದಕ್ಕೆಲ್ಲಾ ಬ್ರೇಕ್​ ಬೀಳಲಿದೆ.

ಲಾಲ್ ಬಾಗ್ ನಲ್ಲಿ ವಾಹನಗಳ ಸುರಕ್ಷತೆ ಮತ್ತು ಆದಾಯ ಸೋರಿಕೆ ತಡೆಯಲು ತೋಟಗಾರಿಕೆ ಇಲಾಖೆ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಇಷ್ಟು ದಿನ ವಾಹನಗಳ ನಿಲುಗಡೆಗೆ ಮಾತ್ರ ಶುಲ್ಕ ತೆರಬೇಕಿತ್ತು. ಇದನ್ನೇ ಬಂಡವಾಳ ಮಾಡ್ಕೊಂಡು ಕೆಲವ್ರು ಬೆಳಗ್ಗೆಯಿಂದ ಸಂಜೆ ವರೆಗೂ ತಮ್ಮ ಗಾಡಿಯನ್ನ ಇಲ್ಲೇ ನಿಲ್ಲಿಸಿ ಕೆಲಸ ಮುಗಿಸ್ಕೊಂಡು ಬರ್ತಿದ್ರು. ಹೀಗಾಗಿ ಇದಕ್ಕೆಲ್ಲಾ ಕಡಿವಾಣ ಹಾಕಲೆಂದೇ ಗಂಟೆಯ ಆಧಾರದ ಮೇಲೆ ಶುಲ್ಕ ವಿಧಿಸೋಕೆ ಪ್ಲಾನ್​ ಮಾಡಿದೆ.

ಇಲಾಖೆಯ ಈ ನಿರ್ಧಾರಕ್ಕೆ ಸಾರ್ವಜನಿಕರು ಗರಂ ಆಗಿದ್ದು ಯಾರೋ ಮಾಡೋ ತಪ್ಪಿಗೆ ನಮ್ಗೆಲ್ಲಾ ಯಾಕೆ ಬರೆ ಹಾಕ್ತೀರಾ ಅಂತಾ ಕಿಡಿಕಾರ್ತಿದ್ದಾರೆ. ಈಗಾಗಲೇ ಬಾಷ್ ಸಂಸ್ಥೆ 2.50 ಕೋಟಿ ರೂ ವೆಚ್ಚದಲ್ಲಿ ಸುಮಾರು ಐದು ಎಕರೆ ಪ್ರದೇಶದಲ್ಲಿ ಸ್ಮಾರ್ಟ್ ಪಾರ್ಕಿಂಗ್ ಸಿದ್ಧಪಡಿಸಿದೆ.  ಇದರಲ್ಲಿ ಸುಮಾರು 150 ಕ್ಕೂ ಹೆಚ್ಚು ಕಾರುಗಳು, 350 ಕ್ಕೂ ಹೆಚ್ಚು ದ್ವಿಚಕ್ರ ಹಾಗೂ 30 ಕ್ಕೂ ಹೆಚ್ಚು ಬಸ್‌ಗಳನ್ನ ಏಕಕಾಲದಲ್ಲಿ ನಿಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಪಾರ್ಕ್ಂಗೆ ಶುಲ್ಕಕ್ಕೆ ಕಂಪ್ಯೂಟರ್ ಬಿಲ್ ನೀಡಲು ತೀರ್ಮಾನಿಸಲಾಗಿದ್ದು, ಇಲಾಖೆಯ ಈ ಪ್ಲಾನ್​ ಯಾವ ರೀತಿ ಸಕ್ಸಸ್ ಆಗುತ್ತೆ ಕಾದು ನೋಡ್ಬೇಕಿದೆ.

Recommended For You

Leave a Reply

Your email address will not be published. Required fields are marked *