ನೆರೆಯ ಆಂಧ್ರ ಪ್ರದೇಶದಲ್ಲಿ ಯಾರಾಗ್ತಾರೆ ಗೊತ್ತಾ ಸಿಎಂ..? TV5 ಸಮೀಕ್ಷೆಯಲ್ಲಿ ಬಹಿರಂಗ

ಹೈದರಾಬಾದ್: ನೆರೆಯ ಆಂಧ್ರ ಪ್ರದೇಶದಲ್ಲಿ ಯಾರಾಗ್ತಾರೆ ಸಿಎಂ..? TV5 ನಿಂದ ಮತ್ತೊಮ್ಮೆ ಅತ್ಯಂತ ವಿಶ್ವಾಸಾರ್ಹ ಸಮೀಕ್ಷೆ ನಡೆದಿದೆ. ಈ ಒಂದು ಸಮೀಕ್ಷೆ ಆಂಧ್ರದಲ್ಲಿ ಸಂಚಲನ ಸೃಷ್ಟಿಸಿದೆ TV5 ಮತದಾನ ಪೂರ್ವ ಸರ್ವೆ. ಮತ್ತೊಮ್ಮೆ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಕುರ್ಚಿಗೆ ಹತ್ತಿರವಿದ್ದಾರೆ. YSR ಕಾಂಗ್ರೆಸ್​ ಜಗನ್ಮೋಹನ್​ ರೆಡ್ಡಿಗಿಂತ ಚಂದ್ರಬಾಬು ನಾಯ್ಡು ಮುಂದಿದ್ದಾರೆ.

ಶೇ.46 ಮತದಾರನ ಪ್ರಕಾರ ಚಂದ್ರಬಾಬು ನಾಯ್ಡು ಸಿಎಂ ಆಗಲು ಸಮರ್ಥರಾಗಿದ್ದಾರೆ. ಶೇ. 42 ಮತದಾರರಿಗೆ ಜಗನ್ಮೋಹನ್ ರೆಡ್ಡಿ ಸಿಎಂ ಆಗಲು ಸಮರ್ಥರಾಗಿದ್ದಾರೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯ ವರದಿಯಲ್ಲಿ ತಿಳಿದು ಬಂದಿದೆ.

ಇನ್ನು ಜನಸೇನಾ ಸ್ಥಾಪಕ ಪವನ್ ಕಲ್ಯಾಣ್ ಪರ ಶೇ.10 ಮತದಾರನ ಅಭಿಮತವಿದೆ. ಶೇ.54 TDP ಯೋಜನೆಗಳು ಉತ್ತಮವೆಂದು ಮತದಾರ ಪ್ರಭು ಅಭಿಪ್ರಾಯವಿದೆ. ಶೇ. 46 YCP ಯೋಜನೆಗಳು ಉತ್ತಮವಾಗಿದೆ ಎಂದು ಮತದಾರರು ಹೇಳುತ್ತಿದ್ದಾರೆ.

1) ಟಿಡಿಪಿ ಪ್ರಕಟಿಸಿರುವ ಯೋಜನೆಗಳು ಮತ್ತು ವೈಸಿಪಿ ಪ್ರಕಟಿಸಿರುವ ಯೋಜನೆಗಳಲ್ಲಿ ಯಾವುವು ಉತ್ತಮವಾಗಿವೆ..?

 1. ಟಿಡಿಪಿ ಯೋಜನೆಗಳು 54% ರಷ್ಟು
 2. ವೈಸಿಪಿ ಯೋಜನೆಗಳು 46% ರಷ್ಟು

2)  ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಲು ಯಾರು ಸಮರ್ಥರು..?

 1. ಚಂದ್ರಬಾಬು ನಾಯ್ಡು 46% ರಷ್ಟು
 2. ಜಗನ್​ 42% ರಷ್ಟು
 3. ಪವನ್​ 10% ರಷ್ಟು
 4. ಇತರರು 02% ರಷ್ಟು

3)  ಅಸೆಂಬ್ಲಿ ಎಲೆಕ್ಷನ್​ನಲ್ಲಿ ಆಯಾ ಪಕ್ಷಗಳಿಗೆ ಬರೋ ಶೇಕಡವಾರು ಮತಗಳೆಷ್ಟು..?

 1. ಟಿಡಿಪಿ 44 ಯಿಂದ 46%
 2. ವೈಸಿಪಿ 41 ಯಿಂದ 43%
 3. ಇತರೆ 8 ಯಿಂದ 10%

4 ) ಶೇಕಡವಾರು ಮತಗಳ ಪ್ರಕಾರ ಆಯಾ ಪಕ್ಷಗಳಿಗೆ ಸಿಗುವ ಅಸೆಂಬ್ಲಿ ಸೀಟುಗಳೆಷ್ಟು..?

 1. ಟಿಡಿಪಿ 105 + – 10
 2. ವೈಸಿಪಿ 65 + – 10
 3. ಇತರೆ 03 + – 10

5 ) ಲೋಕಸಭಾ ಚುನಾವಣೆಯಲ್ಲಿ ಆಯಾ ಪಕ್ಷಗಳಿಗೆ ಸಿಗುವ ಮತ ಪ್ರಮಾಣವೆಷ್ಟು..?

 1. ಟಿಡಿಪಿ 46 ಯಿಂದ 48%
 2. ವೈಸಿಪಿ 41ಯಿಂದ 43%
 3. ಇತರೆ 6 ಯಿಂದ 08

6) ಮತ ಗಳಿಕೆ ಪ್ರಮಾಣದ ಪ್ರಕಾರ ಆಯಾ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ಸಿಗೋ ಸೀಟುಗಳೆಷ್ಟು..?

 1. ಟಿಡಿಪಿ 18 + – 02
 2. ವೈಸಿಪಿ 07 + – 02
 3. ಇತರೆ 00 + – 02

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.