Top

ಯೋಗರಾಜ್ ಭಟ್ಟರ 'ಪಂಚತಂತ್ರ' ಸಿನಿಮಾದ ಕಂಪ್ಲೀಟ್ ರಿವ್ಯೂ..!

ಯೋಗರಾಜ್ ಭಟ್ಟರ ಪಂಚತಂತ್ರ ಸಿನಿಮಾದ ಕಂಪ್ಲೀಟ್ ರಿವ್ಯೂ..!
X

ಬೆಂಗಳೂರು: ಸ್ಯಾಂಡಲ್​ವುಡ್​ ವಿಕಟ ಕವಿ, ಬೆಳ್ಳಿತೆರೆಯ ಮೇಲೆ ಸದ ಹೊಸ ಕಿರಣಗಳನ್ನು ಮೂಡಿಸುವ ರವಿ, ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ರಾಜ್ಯಾದ್ಯಂತ ತೆರೆಕಂಡಿದೆ. ಪೋಸ್ಟರ್, ಟೀಸರ್, ಸಾಂಗ್ಸ್, ಟ್ರೈಲರ್​​ಗಳಿಂದ ಕುತೂಹಲ ಕೆರಳಿಸಿದ್ದ ಪಂಚತಂತ್ರ ಸಿನಿಮಾ ನಿರೀಕ್ಷೆ ಮೂಡಿಸಿದಂತೆ ಮೂಡಿಬಂದಿಯಾ..? ಸಿನಿಮಾದ ಕಥೆ ಏನು, ಭಟ್ಟರ ಹೊಸ ಫಾರ್ಮುಲದ ಕವನವೇನು.? ಸಿನಿಮಾ ನೋಡಿದ ಮಂದಿ ಹೇಳಿದ್ದೇನು..? ಬನ್ನಿ ಎಲ್ಲವನ್ನು ಸಂಕ್ಷಿಪ್ತವಾಗಿ ನೋಡೋಣ..

ತುಂಟತನ, ಪೊಲಿ ಮಾತು ಅದ್ರ ಜೊತೆಗೆ ನವಿರಾದ ಪ್ರೀತಿ ಪ್ರೇಮ, ಅದಕ್ಕೊಂದು ಫ್ಲಾಶ್ ಬ್ಯಾಕಿನ ಜೊತೆ ಬೆಸೆದಿರುವ ಸೆಂಟಿಮೆಂಟು.. ಕಣ್ಣಿಗೆ ಹಬ್ಬದಂತ ವಿಶ್ಯುವಲ್ಸು , ಮನಸಿಗೆ ತಂಪೆರೆಯೋ ಮ್ಯೂಸಿಕ್.. ಇವೆಲ್ಲದ್ರ ಜೊತೆಗೆ ಒಂದೊಳೆ ತಿಳಿ ಸಂದೇಶ.. ಸಂದೇಶದ ಜೊತೆಗೆ ಒಂದು ಜೀವನದ ಉಪದೇಶ.. ಇದು ಯೋಗರಾಜ್ ಭಟ್ ಮೂವಿಸ್ ತೇರಿ. ಎಸ್​​​ ನಾವು ನಿಮಗೆ ಭಟ್ಟರ ಪಂಚತಂತ್ರದ ಕಥೆಯನ್ನು ಹೇಳ್ತಿವಿ ಕೇಳ್ರಿ..

ಯುವ ಸಿನಿ ಪ್ರಿಯರನ್ನ ಸೆಳೆಯುವ ಭಟ್ಟರ ಪಂಚತಂತ್ರ..!

ರಂಜನೆಯ ಜೊತೆ ಜೀವನ ಸತ್ಯ ಹೇಳೋ ಹೊಸ ಮಂತ್ರ..!

ಓಲ್ಡ್​ ಏಜ್ v/s ಟೀನೇಜ್ ಕಾರ್ ರೇಸ್ ಮಸ್ತೋ ಮಸ್ತ್​​​..!!

ಭಟ್ರ ಕಾಮಿಡಿ ಪಂಚ್​​​​ಗೆ ನೋಡುಗ ಆಗ್ತಾನೆ ಸುಸ್ತೋ ಸುಸ್ತ್​..!

ಪಂಚತಂತ್ರ ಸ್ಟೋರಿಲೈನ್

ಯೋಗರಾಜ್ ಭಟ್ ಸ್ಟೈಲ್​ನಲ್ಲೆ ಪಂಚತಂತ್ರದ ಒಂದೆಳೆ ಕಥೆಯನ್ನು ಹೇಳಿಬಿಡ್ತಿವಿ ಕೇಳಿ. ರಾಮಣ್ಣ ಅನ್ನೋ ಕಾಂಪ್ಲೆಕ್ಸ್. ಆ ಕಾಂಪ್ಲೆಕ್ಸ್ ಮುಂದೆ ಒಂದು ಗ್ಯಾರೆಜು.. ಗ್ಯಾರೆಜ್ ಒಳಗೆ ಫುಲ್ ಟೇನೇಜ್​​ಗಳು, ರಾಮಣ್ಣನ ಕಾಂಪ್ಲೆಕ್ಸ್​ನಲ್ಲಿ ಫುಲ್ ಓಲ್ಡ್ ಒಲ್ಟ್​​ಟೇಜ್​​ಗಳು. ರಾಮಣ್ಣನ ಮಗಳು ಸಾಹಿತ್ಯಳಿಗೂ ಗ್ಯಾರೇಜ್​ನ ಸೂಪರ್ ಹೀರೋ ಕಾರ್ತಿಕ್​ಗೂ ಲವೋ ಲವ್​​​​​..​​ಕದ್ದು ಮುಚ್ಚಿ ಇಬ್ರು ಶೃಂಗಾರದ ಹೊಂಗೆ ಮರದಲ್ಲಿ ನೇತಾಡ್ತಿರಾರೆ.. ಅವರ್ ಲವ್​ಗೆ ತಂದೆ ರಾಮಣ್ಣನೇ ವಿಲನ್​.. ಇದ್ರ ಜೊತೆಗೆ ಆಗಾಗ ಟೇನೇಜ್ ವರ್ಸಸ್ ಓಲ್ಡ್​ ಏಜ್ ನಡುವೆ ಸಂಪ್ರದಾಯಕ ವಾರ್.. ಕೊನೆಗೆ ಅದು ಚಾಲೆಂಜ್​​​​​​ಗೆ ತಿರುಗಿ, ಆ ಚಾಲೆಂಜ್ ಕಾರ್​ ರೇಸ್ ಆಗಿ, ರೇಸ್​​ನ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚಾಗಿ, ಕೊನೆಗೆ ಯಾರ ಗೆಲ್ಲುತ್ತಾರೆ ಅನ್ನೋದೆ ಪಂಚತಂತ್ರದ ಸ್ಪೆಷಲ್ ಸ್ಟೋರಿ ಲೈನ್​​​.

ಪಂತಂತಂತ್ರ ಆರ್ಟಿಸ್ಟ್ ಪರ್ಫಾರ್ಮೆನ್ಸ್​

ಯೋಗರಾಜ್ ಭಟ್ ಸಿನಿಮಾದಲ್ಲಿ ನಟಿಸಿದ್ರೆ ಸಾಕು ಮುಂದೆ 10 ಸಿನಿಮಾದಲ್ಲಿ ಅವಕಾಶಗಳನ್ನು ಗೆಟ್ಟಿಸಿಕೊಳ್ಳಬಹುದು.. ಅಷ್ಟರ ಮಟ್ಟಿಗೆ ಪ್ರತಿ ಪಾತ್ರವೂ ರಿಜಿಸ್ಟರ್ ಆಗುತ್ತವೆ.. ಪಂಚತಂತ್ರದಲ್ಲಿ ಬರೋ ಆಲ್​ ಮೋಸ್ಟ್ ಎಲ್ಲಾ ಪಾತ್ರಗಳಿಗೂ ಜೀವಬಂದಿದೆ.. ನಾಯಕ ವಿಹಾನ್​ ಗೌಡರಿಗೆ ಎರಡನೇ ಸಿನಿಮಾ ಆದ್ರು ನಟನೆಯಲ್ಲಿ ಓಕೆ ಅನ್ನಿಸಿಕೊಳ್ಳುತ್ತಾರೆ.. ಇನ್ನು ನಾಯಕ ನಟಿ ಸೋನಾಲ್ ನೋಡುಗರಿಗೆ ಇಷ್ಟವಾಗುತ್ತಾರೆ, ಅದ್ಭುತವಾಗಿ ನಟಿಸಿದ್ದಾರೆ..

ಈ ಸಿನಿಮಾದ ಮತ್ತೊಬ್ಬ ಹೀರೋ ರಂಗಯಣ ರಘು.. ಲೀಲಾಜಾಲವಾಗಿ ರಾಮಣ್ಣ ಪಾತ್ರದಲ್ಲಿ ಪ್ರವೇಶ ಮಾಡಿದ್ದಾರೆ.. ಇನ್ನುಳಿದಂತೆ ಬಾಲು , ಅಕ್ಷತ ಗೌಡ , ದೀಪಕ್ ಶೆಟ್ಟಿ , ಕರಿಸುಬ್ಬು, ರಾಜು ಬೆಳವಾಡಿ ಸೇರಿದಂತೆ ಅನೇಕರು ಪ್ರೇಕ್ಷಕರ ಮನಸಿನಲ್ಲಿ ಉಳಿಯುತ್ತಾರೆ..

ಪಂಚತಂತ್ರ ಪ್ಲಸ್ ಪಾಯಿಂಟ್ಸ್

ಪಂಚತಂತ್ರ ಸಿನಿಮಾದ ಪ್ಲಸ್ ಪಾಯಿಂಟ್ ಎಡಿಟಿಂಗ್​.. ಮಧುತುಂಬಕೆರೆ ಅಚ್ಚುಕಟ್ಟಾಗಿ ಕತ್ತರಿ ಪ್ರಯೋಗ ಮಾಡಿದ್ದಾರೆ.. ಯೋಗರಾಜ್ ಭಟ್ಟರ ಸಾಹಿತ್ಯ ಪ್ಲಸ್ ಸಂಭಾಷಣೆ ಪ್ರೇಕ್ಷಕರಿಗೆ ಮಸ್ತ್ ಮನೋರಂಜನೆ ಕೊಡುತ್ತೆ.. ಎಲ್ಲಾ ಡೈಲಾಗ್​ನಲ್ಲಿಯೂ ಹೊಸ ತನವಿದೆ, ಭಟ್ಟರ ಶೈಲಿ ಇದೆ, ಜೊತೆಗೆ ಜೀವನ ಸಂದೇಶವಿದೆ. ಹರಿಕೃಷ್ಣರ ಮ್ಯೂಸಿಕ್, ಸುಜ್ಞಾನ್ ಕ್ಯಾಮೆರಾ ನೋಡೋ ಕಣ್ಣಿಗೆ ಕೇಳೋ ಕಿವಿಗಳಿಗೆ ತಂಪೆರೆಯುತ್ತದೆ.

ಪಂಚತಂತ್ರ ಶಕ್ತಿಯೇ ಸೆಕೆಂಡ್ ಆಫ್​​​​.. ಸೆಕೆಂಡ್ ಆಫ್​​ನಲ್ಲಿ ಬರೋ ಕಾರ್ ರೇಸ್, ಸಸ್ಪೆನ್ಸ್​​​​​​ ಸಿಕ್ವೇನ್ಸ್ ಹಾಗೂ ಕಾಮಿಡಿ ನೋಡುಗರನ್ನು ಸೀಟಿನ ತುದಿಯಲ್ಲಿ ತಂದು ನಿಲ್ಲಿಸುತ್ತದೆ.

ಪಂಚತಂತ್ರ ಮೈನಸ್ ಪಾಯಿಂಟ್ಸ್

ಮೊದಲಾರ್ಧದಲ್ಲಿ ಅಷ್ಟರ ಮಟ್ಟಕ್ಕೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತ ಕಂಟೆಂಟ್ ಇಲ್ಲ.. ಯೋಗರಾಜ್ ಭಟ್ ಸಿನಿಮಾ ಅಂದ್ರೆ ಅಂದು ವಿಶ್ಯುವಲ್ ಬ್ಯೂಟಿ.. ಫಸ್ಟ್ ಆಫ್​​ನಲ್ಲಿ ಅಷ್ಟರ ಮಟ್ಟಿಗೇನು ಅದ್ಭುತವೆನಿಸುವ ದೃಶ್ಯ ಕಾವ್ಯವಿಲ್ಲ.. ಅಲ್ಲಲ್ಲಿ ಸಿಜಿ ಎಡವಟ್ಟು ಕಾಣುತ್ತದೆ. ಪೋಲಿತನದ ಮಾತುಗಳು ಕುಟುಂಬ ಸಮೇತ ಕುಳಿತು ನೋಡಿದಾಗ ಮುಜುಗರ ಅನಿಸಬಹುದು. ಭಾವನಾತ್ಮಕ ವಿಚಾರಗಳು ಕಡಿಮೆ ಇವೆ.

TV5 ರೇಟಿಂಗ್: 3.5/5

ಪಂಚತಂತ್ರ ಫೈನಲ್ ​ ಸ್ಟೇಟ್​ಮೆಂಟ್​

ಯೋಗರಾಜ್ ಭಟ್ಟರ ಸಿನಿಮಾವೆಂದ್ರೆ ಕೊಟ್ಟ ದುಡಿಗೆ ಮೋಸವಿರೋದಿಲ್ಲ.. ಸಿನಿಮಾದ ಪ್ರತಿಕ್ಷಣ ,ಪ್ರತಿ ಮಾತು ಮನೋರಂಜನೆಯಿಂದಲೇ ಕೂಡಿರುತ್ತದೆ. ಪಂಚತಂತ್ರದಲ್ಲಿಯೂ ಮನೋರಂಜನೆಯ ಮೃಷ್ಠಾನ್ನವೇ ಅಡಗಿದೆ.. ಇದು ಸಂಪೂರ್ಣ ಯುಥ್ಸ್​​​​​​​​​​​ಅನ್ನು ಫೋಕಸ್ ಮಾಡಿಕೊಂಡು ಬೆಸೆದಿರುವ ಸಿನಿಮಾ.. ಅದ್ರಲ್ಲೂ ಕಾಲೇಜು ಹುಡ್ಗರಿಗಂತು ಹೇಳಿ ಮಾಡಿಸಿದಂತಹ ಸಿನಿಮಾ.. ರೇಸ್​ ಗೆಲ್ಲೋದು ಮುಖ್ಯವಲ್ಲ ; ಜೀವನ , ಪ್ರೀತಿ, ಸಂಬಂಧಗಳನ್ನು ಗೆಲ್ಲಬೇಕು ಅನ್ನೋ ಸಂದೇಶದ ಜೊತೆಗೆ ಹೀರೋ ರೇಸ್​​​ನಲ್ಲಿ ಗೆದ್ನಾ ಸೋತ್ನಾ ಅನ್ನೋ ಹುಳವನ್ನು ಪ್ರೇಕ್ಷಕರಿಗೆ ಬಿಡ್ತಾರೆ ಭಟ್ಟರು.. ಸೋ ಫೈನಲಿ ಪಕ್ಕ ಅಂದ್ರೆ ಪಕ್ಕಾ ಪೈಸ ವಸೂಲ್ ಸಿನಿಮಾ ಪಂಚತಂತ್ರ..

ಶ್ರೀಧರ್ ಶಿವಮೊಗ್ಗ_ಎಂಟರ್​​​​ಟೈನ್ಮೆಂಟ್​ ಬ್ಯೂರೋ_ಟಿವಿ5

Next Story

RELATED STORIES