ಬಹಿರಂಗವಾಗಿಯೇ ಸಚಿವ ಹೆಚ್.ಡಿ ರೇವಣ್ಣ ನಿಂಬೆಹಣ್ಣು ಕೊಟ್ಟಿದ್ದು ಯಾರಿಗೆ..!

X
TV5 Kannada29 March 2019 11:35 AM GMT
ಹಾಸನ: ಲೋಕಸಭಾ ಚುನಾವಣೆ ಪ್ರಚಾರಕ್ಕೆ ಮೈತ್ರಿ ಪಕ್ಷ ಸಕಲ ಸಿದ್ಧತೆ ಮಾಡಿಕೊಂಡಿದ್ದು, ದೋಸ್ತಿ ಭದ್ರಗೊಳಿಸಲು ನಿಂಬೆಹಣ್ಣು ಮಂತ್ರಿಸಿ ತಂದ್ರಾ ಸಚಿವ ಹೆಚ್.ಡಿ ರೇವಣ್ಣ ಎಂಬ ಕುತೂಹಲ ಕಾಂಗ್ರೆಸ್ ಕಾರ್ಯಕರ್ತ ಸಭೆಯಲ್ಲಿ ಮೂಡಿದೆ.
ಹಾಸನದ ಅರಸೀಕೆರೆಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಜೆಡಿಎಸ್ ಜಂಟಿ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನ ವಶೀಕರಣ ಮಾಡಲು ನಿಂಬೆಹಣ್ಣು ಮಂತ್ರಿಸಿ ತಂದ್ರಾ ರೇವಣ್ಣ? ಕೈ ತುಂಬ ನಿಂಬೆಹಣ್ಣು ಹಿಡಿದುಕೊಂಡು ಜೆಡಿಎಸ್ ನಾಯಕರಾದ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹಾಗೂ ಶಿವಲಿಂಗೇಗೌಡ ಸಭೆಗೆ ಆಗಮಿಸಿದ್ದಾರೆ.
ಹೆಚ್.ಡಿ ರೇವಣ್ಣ ಶಾಸ್ತ್ರೋಕ್ತವಾಗಿ 5 ನಿಂಬೆಹಣ್ಣು ಕೈಯಲ್ಲಿ ಹಿಡಿದು ಆಪ್ತಸಹಾಯಕನಿಗೆ ಅದನ್ನು ವರ್ಗಾವಣೆ ಮಾಡಿದ್ದು, ಸಭೆಯ ವೇದಿಕೆ ಮೇಲೆಯೇ ನಿಂಬೆಹಣ್ಣು ಹಿಡಿದುಕೊಂಡು ಬಂದಿದ್ದಾರೆ. ಆ ಸಂದರ್ಭ ಅಲ್ಲಿದ್ದ ಕೆಲವು ಕೈ ಕಾರ್ಯಕರ್ತ ಅದನ್ನು ನೋಡಿ ಆಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ.
Next Story