Top

ಸಿದ್ದರಾಮಯ್ಯ ದೃಷ್ಠಿಯಲ್ಲಿ ಪ್ರತಾಪ್ ಸಿಂಹ ಒಬ್ಬ ಸಾಮಾನ್ಯ ಅಭ್ಯರ್ಥಿಯಂತೆ..!

ಸಿದ್ದರಾಮಯ್ಯ ದೃಷ್ಠಿಯಲ್ಲಿ ಪ್ರತಾಪ್ ಸಿಂಹ ಒಬ್ಬ ಸಾಮಾನ್ಯ ಅಭ್ಯರ್ಥಿಯಂತೆ..!
X

ಮೈಸೂರು: ನಮ್ಮ ಎರಡು ಪಕ್ಷದ ಗುರಿ ಬಿಜೆಪಿಯನ್ನು ಸೋಲಿಸೋದು ಇದೊಂದೆ ನಮ್ಮ ಗುರಿಯಾಗಿದ್ದು ಬೇರೆನು ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿದ್ದರಾಮಯ್ಯ, ನಾವು ಹಳೆ ಮೈಸೂರು ಭಾಗದಲ್ಲಿ ಸಾಕಷ್ಟು ಸ್ಪರ್ಧೆ ಮಾಡಿದ್ದೇವೆ. ಅದರಲ್ಲಿ ಜೆಡಿಎಸ್-ಕಾಂಗ್ರೆಸ್ ಹೆಚ್ಚು ಎದುರಾಳಿಯಾಗಿ ಸ್ಪರ್ಧೆ ಮಾಡಿವೆ. ಆದರೆ ಹಳೆಯದನ್ನೆಲ್ಲ ಮರೆತು ನಾವು ಒಂದಾಗಬೇಕಿದೆ ಎಂದು ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮೈತ್ರಿ ಪಕ್ಷದ ಮುಖಂಡರಿಗೆ ತಿಳಿಸಿದ್ದಾರೆ.

ಅದುವಲ್ಲದೇ ಮೊನ್ನೆಯದು, ನಿನ್ನೆಯದು, ಹಳೆಯದು ಎಲ್ಲ ಮರೆಯಬೇಕು. ಇದೀಗ ನಾವು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಜಿ.ಟಿ ದೇವೇಗೌಡರಿಗೆ ಎಲ್ಲವನ್ನು ಮರೆಯೋಕೆ ಬಹಿರಂಗವಾಗಿ ಕರೆ ಕೊಟ್ಟಿರಬಹುದಾ ಎಂಬ ಅನುಮಾನ ಮೂಡಿದೆ.

ನಾವು ಈಗ ಒಟ್ಟಾಗಿ ಸಾಮಾನ್ಯ ಅಭ್ಯರ್ಥಿಯನ್ನ ಎದುರಿಸಬೇಕಿದೆ. ಓರ್ವ ಸಾಮಾನ್ಯ ಅಭ್ಯರ್ಥಿ ಎಂದು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

Next Story

RELATED STORIES