Top

ಸಿದ್ರಾಮಣ್ಣ ಇವತ್ತಲ್ಲ, ನಮ್ಮ ಪಕ್ಷದಲ್ಲಿ ಇದ್ದಾಗಿನಿಂದಲೂ ನಮ್ಮ ನಾಯಕರು - ಸಚಿವ ರೇವಣ್ಣ

ಸಿದ್ರಾಮಣ್ಣ ಇವತ್ತಲ್ಲ, ನಮ್ಮ ಪಕ್ಷದಲ್ಲಿ ಇದ್ದಾಗಿನಿಂದಲೂ ನಮ್ಮ ನಾಯಕರು - ಸಚಿವ ರೇವಣ್ಣ
X

ಹಾಸನ: ಸಿದ್ರಾಮಣ್ಣ ಇವತ್ತಲ್ಲಾ, ನಮ್ಮ ಪಕ್ಷದಲ್ಲಿ ಇದ್ದಾಗಿನಿಂದಲೂ ನಮ್ಮ ನಾಯಕರು ಎಂದು ಸಚಿವ ಹೆಚ್.ಡಿ ರೇವಣ್ಣ ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ಜಂಟಿ ಸಭೆಯಲ್ಲಿ ಮಾತನಾಡಿದ ರೇವಣ್ಣ, ಜಿಲ್ಲೆಯಲ್ಲಿ ಮೈತ್ರಿದರ್ಮ ಪಾಲನೆ, ಅಧಿಕಾರ ಹಂಚಿಕೆಗೆ ನಾನು ಬದ್ಧ, ಸಿದ್ರಾಮಣ್ಣ ಇವತ್ತಲ್ಲಾ, ನಮ್ಮ ಪಕ್ಷದಲ್ಲಿ ಇದ್ದಾಗಿನಿಂದಲೂ ನಮ್ಮ ನಾಯಕರು ಎಂದು ತಿಳಿಸಿದ್ದಾರೆ.

ಉಭಯ ಪಕ್ಷಗಳ ಹಿರಿಯ ನಾಯಕರು ಕೈಗೊಂಡಿರುವ ತೀರ್ಮಾನಕ್ಕೆ ನಾವು ಬದ್ಧರಾಗಿರೋಣ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬುದು ಕಾಂಗ್ರೆಸ್ - ಜೆಡಿಎಸ್ ಭಾವನೆಯಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಪಕ್ಷಬೇಧ ಮರೆತು ಕೆಲಸ ಮಾಡೋಣ ಎಂದು ರೇವಣ್ಣ ಒಗ್ಗಟಿ ಮಂತ್ರ ಜಪಿಸಿದರು.

ನಮ್ಮಿಬ್ಬರ ನಡುವೆ ಸಣ್ಣಪುಟ್ಟ ತಪ್ಪಾಗಿದ್ದರೆ ಕ್ಷಮಿಸಿಬಿಡಿ ನಮ್ಮ ಶಾಸಕ ಶಿವಲಿಂಗೇಗೌಡರೂ ಇದನ್ನೇ ಹೇಳಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲೂ ನಾವಿಬ್ಬರೂ ಶಿಸ್ತಿನ ಸಿಪಾಯಿಗಳಂತೆ ದುಡಿಯೋಣ ಎಂದು ನುಡಿದರು.

ಅಲ್ಲದೇ ಹಾಸನ ಜಿಲ್ಲೆಗೆ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಕೊಡುಗೆ ಏನು? ಯಾವ ನೈತಿಕತೆಯಿಂದ ಮತ ಕೇಳುತ್ತಾರೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Next Story

RELATED STORIES