Top

ಮಂಡ್ಯದಲ್ಲಿ ಮತ್ತೆ ನಟ ದರ್ಶನ್ ಹಾಗೂ ಯಶ್ ಪೇರೆಡ್​​ಗೆ ಮುಹೂರ್ತ ಫಿಕ್ಸ್ ..!

ಮಂಡ್ಯದಲ್ಲಿ ಮತ್ತೆ ನಟ ದರ್ಶನ್ ಹಾಗೂ ಯಶ್ ಪೇರೆಡ್​​ಗೆ ಮುಹೂರ್ತ ಫಿಕ್ಸ್ ..!
X

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನಲೆ ಸುಮಲತಾ ಅಂಬರೀಶ್ ಪರ ನಟ ದರ್ಶನ್, ಯಶ್ ಚುನಾವಣಾ ಪ್ರಚಾರದ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಏಪ್ರಿಲ್ 2ರಿಂದ ಏ.15ರ ತನಕ ಸುಮಲತಾ ಪರ ಚುನಾವಣಾ ಕಣಕ್ಕಿಳಿಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರತ್ಯೇಕವಾಗಿ ಪ್ರಚಾರ ಹಾಗೂ ರೋಡ್ ಶೋ ನಡೆಸಲಿದ್ದಾರೆ.

ಏಪ್ರಿಲ್ 16ರಂದು ಚುನಾವಣಾ ಪ್ರಚಾರದ ಕಡೆಯ ದಿನವಾಗಿದ್ದು ಆ ದಿನ ಮಂಡ್ಯನಗರದಲ್ಲಿ ಬೃಹತ್ ಸಮಾವೇಶ ನಡೆಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಶಕ್ತಿ ಪ್ರದರ್ಶನ ಮಾಡಲು ಯೋಜನೆ ರೂಪಿಸಿದ್ದಾರೆ.

ಜೆಡಿಎಸ್​​ನವರ ಪ್ರಚಾರಕ್ಕೆ ಸೆಡ್ಡು ಹೊಡೆಯಲು ಮೂವರು ಪ್ರತ್ಯೇಕವಾಗಿ ಪ್ರಚಾರ, ರೋಡ್ ಶೋಗೆ ಮುಂದಾಗಿದ್ದು, ಒಟ್ಟು 13 ದಿನಗಳ ಸಕ್ಕರೆ ನಾಡಿನಲ್ಲಿ ಭರ್ಜರಿ ಪ್ರಚಾರ ನಡೆಸಲು ಇಬ್ಬರು ಸ್ಯಾಂಡಲ್​​ವುಡ್ ಸ್ಟಾರ್​ಗಳು ಹೊಂದಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

Next Story

RELATED STORIES