ಮಂಡ್ಯದಲ್ಲಿ ಸಚಿವ ಜಮ್ಮೀರ್ ಮಹಮ್ಮದ್ ವಿರುದ್ಧ ತಿರುಗಿಬಿದ್ದಿದ್ದು ಯಾರು ಅಂತ ನೋಡಿ..!

X
TV5 Kannada27 March 2019 5:56 AM GMT
ಬೆಂಗಳೂರು: ಮಂಡ್ಯಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್-ಜೆಡಿಎಸ್ ಇನ್ನಿಲ್ಲದ ಪ್ರಯ್ನ ಮಾಡುತ್ತಿರುವಾಗಲೇ ಮಂಡ್ಯ ಅತೃಪ್ತ ನಾಯಕರ ಮನವೊಲಿಸುವಂತೆ ಸಿಎಂ ಕುಮಾರಸ್ವಾಮಿ ಸಚಿವ ಜಮ್ಮೀರ್ ಅಹಮ್ಮದ್ ಕೊಟ್ಟಿದ್ದರು.
ಮಂಡ್ಯ ಭಾಗದ ಮಾಜಿ ಕೈ ಶಾಸಕರನ್ನು ಮನವೊಲಿಸುವಂತೆ ಜಮ್ಮೀರ್ಗೆ ಸಿಎಂ ಸೂಚಿಸಿದ್ದರು. ಅವರ ಸೂಚನೆ ಮೇರೆಗೆ ತನ್ನ ಆಪ್ತ ಅತೃಪ್ತ ಸ್ನೇಹಿತರ ಮನವೊಲಿಸಲು ಮುಂದಾಗಿದ್ದ ಜಮ್ಮೀರ್, ಅತೃಪ್ತರ ಬಳಿ ಹೋಗಿದ್ದಾಗ ಜಮ್ಮೀರ್ ಮೇಲೆ ತಿರುಗಿಬಿದ್ದಾರೆ.
ಸದ್ಯ ನಮ್ಮ ಜಿಲ್ಲೆಯಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಈ ಹೋರಾಟ ನಮಗೆ ಅನಿವಾರ್ಯ, ದಯವಿಟ್ಟು ಈ ವಿಷಯದಲ್ಲಿ ನೀನು ಮಧ್ಯ ಪ್ರವೇಶ ಮಾಡಬೇಡ ಎಂದು ಗರಂ ಆಗಿದ್ದ ಅತೃಪ್ತ ನಾಯಕರು. ಇದೀಗ ಜಮ್ಮೀರ್ ಪ್ರಯತ್ನ ಸಾಧ್ಯವಾಗದೆ ಇರುವುದಕ್ಕೆ ಸಿಎಂ ಕುಮಾರಸ್ವಾಮಿ ಮತ್ತಷ್ಟು ತಲೆ ಕೆಡೆಸಿಕೊಂಡಿದ್ದಾರೆ.
Next Story