Top

ನಾನು ಕಳ್ಳೆತ್ತು ಎಂದು ಎಲ್ಲೂ ಹೇಳಿಲ್ಲ: ಸಿಎಂ ಕುಮಾರಸ್ವಾಮಿ

ನಾನು ಕಳ್ಳೆತ್ತು ಎಂದು ಎಲ್ಲೂ ಹೇಳಿಲ್ಲ: ಸಿಎಂ ಕುಮಾರಸ್ವಾಮಿ
X

ನಾನು ಕಳ್ಳೆತ್ತು ಎಂದು ಎಲ್ಲೂ ಹೇಳಿಲ್ಲ, ರಾತ್ರಿ ಬಂದು ಹೊಲ ಮೆಯ್ಯುವ ಎತ್ತುಗಳು ಅಂತಾ ಹೇಳಿದೀನಿ, ನಮ್ಮ ಹಳ್ಳಿ ಕಡೆ ಶೋಕಿಗೆ ಅಂತಾನೇ ಹುಲ್ಲು ಹಾಕಿ ಮೆಯುತ್ತೀರುವ ಎತ್ತುಗಳು ಅಂತಾ ಹೇಳಿದೀನಿ ಅಷ್ಟೇ ಎಂದು ಮುಖ್ಯಮಂತ್ರಿ ಕುಮರಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಬುಧವಾರ ಮಾತನಾಡಿದ ಅವರು, ಜೋಡೆತ್ತು ಅಂತ ನಾನೇನು ಕರೆದಿಲ್ಲ, ಅವರೇ ಹೇಳಿಕೊಂಡಿದ್ದಾರೆ. ಕಳ್ಳೆತ್ತು ಅಂತ ಕೂಡ ನಾನು ಎಲ್ಲೂ ಹೇಳಿಲ್ಲ, ನಾಲ್ಕು ಬಾರಿಯೂ ರಾತ್ರಿ ವೇಳೆ ಬೆಳೆ ತಿನ್ನೋ ಎತ್ತುಗಳು ಅಂತ ಹೇಳಿದ್ದೀನಿ, ಜಾತ್ರೆ ವೇಳೆ ಶೋಗೆ ತರುವ ಎತ್ತುಗಳು ಅಂತ ಹೇಳಿದ್ದೇನೆ ಎಂದು ಹೇಳಿದರು.

ಸಾ.ರ.ಮಹೇಶ್ ಈ ಶೋಕಿ ಎತ್ತು ಕರೆದುಕೊಂಡು ಹೋಗದಿದ್ದಾಗ 15 ಸಾವಿರ ಅಂತರದಿಂದ‌ ಗೆದ್ದಿದ್ದರು, ಈ ಬಾರಿ ಅವರನ್ನು ಕರೆದುಕೊಂಡು ಹೋಗಿ ಕೇವಲ ಒಂದು ಸಾವಿರ ಮತಗಳ ಅಂತರ ಗೆಲುವು ಸಾಧಿಸಿದ್ದಾರೆ. ಯಾರ್ಯಾರು ಅವರಿಗೆ ಕೊಡ್ತಿದ್ದಾರೆ. ಬೆವರು ಸುರಿಸಿ‌ ದುಡಿದಂತ ಹಣವಾ ಅದು, ಫೋನ್ ಕದ್ದಾಲಿಕೆ ನಾನೇಕೆ ಮಾಡಿಸಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಲ್ಲವೇ, ಅವರದ್ದೆ ಕೇಂದ್ರ ಸರ್ಕಾರವಿದೆ, ದೂರು ನೀಡಿ‌ ತನಿಖೆ ಮಾಡಿಸಬಹುದಲ್ಲವೇ, ಗೊತ್ತಿದೆ ನಮಗೆ ಇವರು ಎಷ್ಟರ ಮಟ್ಟಿಗೆ ಚುನಾವಣಾ ಆಯೋಗ ದುರುಪಯೋಗ ಪಡಿಸಿಕೊಳ್ತಿದ್ದಾರೆ ಅಂತ, ಸಿಆರ್‌ಪಿಎಫ್ ಅಲ್ಲ ಅಂದ್ರೆ ಗಡಿ ಕಾಯುವ ಕಮಾಂಡೋಗಳ ಭದ್ರತೆ ನೀಡಲಿ, ಓಟ್ ಯಾರಿಗೆ ಹಾಕಬೇಕೆಂದು ಜನ ಈಗಾಗಲೇ ಡಿಸೈಡ್ ಮಾಡಿದ್ದಾರೆ ಎಂದರು.

ಕರೆಂಟ್ ಕಟ್ ಮಾಡಿದ ವಿಚಾರ, ಅಧಿಕಾರಿಗಳಿಗೆ ಕೇಳಿದಾಗ ಟ್ರಾನ್ಸ್‌ಫಾರ್ಮರ್ ಕೆಟ್ಟು ಹೋಯ್ತು, ಆಗಾಗಿ ಪ್ರಾಬ್ಲಂ ಆಯ್ತು ಅಂತ ಹೇಳಿದ್ದಾರೆ. ಮಗನನ್ನು ಗೆಲ್ಲಿಸಿದ್ರೆ ಮಾತ್ರ ಮಂಡ್ಯ ಜಿಲ್ಲೆ ಅಭಿವೃದ್ಧಿ ಮಾಡ್ತಾರ ಎಂಬ ಸುಮಲತಾ ಪ್ರಶ್ನೆ ವಿಚಾರ, ಅವ್ರನ್ನ ಗೆಲ್ಲಿಸಿದ್ರೆ ಅಭಿವೃದ್ದಿಯಾಗುತ್ತಾ? ಎಂದು ಸುಮಲತಾಗೆ ಸಿಎಂ ಮರು ಪ್ರಶ್ನೆ ಮಾಡಿದರು.

ಮಂಡ್ಯ ಜಿಲ್ಲಾ ರಾಜಕಾರಣದಲ್ಲಿ ಮದೇಗೌಡರು ಹಿರಿಯರು ಅವರ ಸಹಕಾರ, ಆಶೀರ್ವಾದ ಪಡೆಯಲು ಬಂದಿದ್ದೇನೆ. ಹಲವಾರು ಸಲಹೆ ಸೂಚನೆ ಕೂಡ ನೀಡಿದ್ದಾರೆ. ಈಗಾಗಲೇ ಮೈತ್ರಿ ಅಭ್ಯರ್ಥಿ ನಿಖಿಲ್ ಬಂದು ಆಶೀರ್ವಾದ ಪಡೆದಿದ್ದಾನೆ. ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿರುವಂತೆ ನನ್ನ ಬೆಂಬಲವೂ ಇದೆ ಅಂತ ಮಾದೇಗೌಡರು ಹೇಳಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಮುಖ್ಯ ನನಗೆ, ಹಲವಾರು ಯೋಜನೆಗಳಿಗೆ ಈಗಾಗಲೇ ಚಾಲನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿ , ಪಕ್ಷೇತರ ಅಭ್ಯರ್ಥಿ ಅಲ್ಲ ಅವರು, ಅವರ ಭಾಷಣದಲ್ಲಿ ಯಾವುದೇ ನೋವಿನ ಛಾಯೆ ಅವರ‌ ಮುಖದಲ್ಲಿ ಕಾಣ್ತಿಲ್ಲ, ಆಕ್ಷನ್ ಬೇರೆ, ಏನ್ ಕೊಡ್ತಾರೆ ಏನ್ ಕೊಡ್ತಾರೆ ನಿಮಗೆ ಅಂತ ಸುಮಲತಾ ದಾಟಿಯಲ್ಲಿ ವ್ಯಂಗ್ಯ ಮಾಡಿದರು.

ಹಣ ಕೊಟ್ಟರೆ ಪಡೆದು ಮಜಾ ಮಾಡಿ ಅಂತಾರೆ, ತಾಯಿ ಹೃದಯವಿರುವ ಮಹಿಳೆ ಮಾತನಾಡುವ ರೀತಿನ ಇದು ಇದನ್ನ ಬಹಿರಂಗ ಸಭೆಯಲ್ಲಿ ಜನತೆಗೆ ಹೇಳ್ತಿನಿ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಮಜಾ‌ಮಾಡಲು ನಾನು ನೆರವು ನೀಡಲಿಲ್ಲ, ಕುಟುಂಬದ ಬಡತನ ಕಂಡು ಇವರ ಸಂಸ್ಕೃತಿ ಬೇರೆಯವರ ದುಡ್ಡು ಪಡೆದು ಮಜಾ ಮಾಡುವುದು. ಮಂಡ್ಯ ಜನತೆ ಕಷ್ಟ ಪಟ್ಟು ಜೀವನ ಮಾಡುವವರುಮಂಡ್ಯ ಜಿಲ್ಲೆಯ ಜನರ ಹತ್ತಿರ ಬಹಳ ಡ್ರಾಮಾ ನಡೆಯಲ್ಲ ಎಂದರು.

ಕಷ್ಟ ಪಟ್ಟ ಹಣ ಖರ್ಚು ಮಾಡ್ತಿದ್ದಾರ, ಯಾರ್ಯಾರು ಹಣ ಕೊಟ್ಟಿದ್ದಾರೆ ನನಗೆ ಗೊತ್ತಿಲ್ವ, ಜಿಲ್ಲೆಯ ಜನತೆ ಜೊತೆ ಚೆಲ್ಲಾಟವಾಡಲು ಬಂದಿಲ್ಲ, ಕಬ್ಬು ಬೆಳೆಗಾರರ ಬಾಕಿ ಹಣ ಬಿಡುಗಡೆಗೆ ಚುನಾವಣಾ ಆಯೋಗದ ಅನುಮತಿ ಬೇಕು ಅಂತ ಅಧಿಕಾರಿಗಳು ಹೇಳಿದ್ರು, ನಾನು ಚುನಾವಣಾ ಅಧಿಕಾರಿಗಳಿಗೆ ರೈತರ ಹಣ ಬಿಡುಗಡೆ ಮಾಡಿ ಅಂತ ಹೇಳಿದ್ದೇನೆ

ಯಾರದ್ದೋ ಹೆಸರಿನಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಲು ಬಂದಿಲ್ಲ, ನಾನು ರೈತರ ಪರ ಕೆಲಸ ಮಾಡಲು ಬಂದಿದ್ದೇನೆ. ಅಂತ ಜಾಯಮಾನ ನನ್ನದಲ್ಲ, ದುಡ್ಡು ಪಡೆದು ಮಜಾ ಮಾಡಿ ನನಗೆ ಓಟ್ ಮಾಡಿ ಅಂದ್ರೆ ಜನ ಒಪ್ಪುತ್ತಾರ. ನಾನು ಹಳ್ಳಿ ಸುತ್ತುತ್ತೇನೆ ನಿಮ್ಮ ಪರ ಕೆಲಸ ಮಾಡೋ ನಾನು ಬೇಕೊ, ಡ್ರಾಮ ಮಾಡೋರು ಬೇಕೊ ಅಂತ ಕೇಳ್ತೀನಿ ಎಂದರು.

Next Story

RELATED STORIES