ಮಂಡ್ಯದಲ್ಲಿ ಸುಮಲತಾಗೆ ಬಿಗ್​ಶಾಕ್​ ಕೊಡಲು ಅಯೋಗ್ಯ ಸಿನಿಮಾದ ಐಡಿಯಾ ಬಳಕೆ..!

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅಲ್ಲದೇ ಅದೇ ಹೆಸರಿನ ಮೂರು ಮಂದಿ ನಾಮಪತ್ರ ಸಲ್ಲಿಕೆ ಮಾಡಿಸುವ ಮೂಲಕ ಸುಮಲತಾಗೆ ದಳಪತಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕನಕಪುರ ಮೂಲದ ಪಿ. ಸುಮಲತಾ, ಕೆ.ಆರ್.ಪೇಟೆ ತಾಲ್ಲೂಕಿನ ಸುಮಲತಾ, ಶ್ರೀರಂಗಪಟ್ಟಣದ ಸುಮಲತಾ ಎಂಬುವವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಸದ್ಯ ಈ ರೀತಿಯಿಂದ ಮಂಡ್ಯ ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡೋಕೆ ಸುಮಲತಾ ಎಂಬ ಹೆಸರಿನ ಮೂರು ಮಂದಿ ಕಣಕ್ಕೆ ಇಳಿಸಲಾಗಿದ್ದು, ಈ ಬೆಳವಣಿಗೆಯಿಂದ ಸುಮಲತಾ ಅಂಬರೀಶ್​ಗೆ ಹೊಸ ತಲೆ ನೋವು ಶುರುವಾಗಿದೆ.

ಅದುವಲ್ಲದೇ ಇತಂಹ ಘಟನೆ 2018ರಲ್ಲಿ ಸ್ಯಾಂಡಲ್​ವುಡ್​ನಲ್ಲಿ ಭರ್ಜರಿ ಸಕ್ಸಸ್ ಕಂಡಿದ್ದ ಅಯ್ಯೋಗ್ಯ ಸಿನಿಮಾದಲ್ಲಿ ಗ್ರಾಮಪಂಚಾಯ್ತಿ ಎಲೆಕ್ಷನ್ ಗೆಲ್ಲಲು ನಾಯಕ ಸತೀಶ್ ನೀನಾಸಂ ತನ್ನ ಎದುರಾಳಿ ಬಜ್ಜೇಗೌಡನ ವಿರುದ್ದ ಅದೇ ಹೆಸರಿನ ಒಂದಷ್ಟು ಮಂದಿಯನ್ನು ಚುನಾವಣೆಯಲ್ಲಿ ನಿಲ್ಲಿಸಿ ಆ ಊರಿನ ಜನರಲ್ಲಿ ಗೊಂದಲ ಸೃಷ್ಟಿಸಿದ ದೃಶ್ಯವಿತ್ತು. ಆ ಒಂದು ಐಡಿಯಾವನ್ನು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪ್ರಯೋಗ ಮಾಡಲು ದಳಪತಿಗಳು ಮುಂದಾಗಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.