​ಶಾಸಕ ಮುನಿರತ್ನ ಮಾತಿಗೆ ಸುಮಲತಾ ಅಂಬರೀಶ್ ಕೊಟ್ಟ ಉತ್ತರ ನೋಡಿ..!

ಮಂಡ್ಯ: ಅಂಬರೀಶ್ ಸಮಾಧಿ ಸ್ಥಳ ಗುರುತಿಸಿದ್ದು ನಿಖಿಲ್ ಕುಮಾರಸ್ವಾಮಿ ಎಂಬ ಕಾಂಗ್ರೆಸ್ ಶಾಸಕ ಮುನಿರತ್ನ ಹೇಳಿಕೆ ವಿಚಾರವಾಗಿ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದು, ಮುನಿರತ್ನಗೆ ನೈತಿಕತೆ ಇಲ್ಲ. ಭ್ರಷ್ಟಾಚಾರ, ಹಣದಿಂದ ಚುನಾವಣೆ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುನಿರತ್ನಗೆ ನೈತಿಕತೆ ಇಲ್ಲ. ಭ್ರಷ್ಟಾಚಾರ, ಹಣದಿಂದ ಚುನಾವಣೆ ಮಾಡ್ತಾರೆ. ಸಾವಿನ ಹೆಸರಲ್ಲಿ ರಾಜಕಾರಣ ಹೇಸಿಗೆ ವಿಚಾರವಾಗಿದ್ದು ಚುನಾವಣೆ ಲಾಭಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಪರ ಡಿ.ಕೆ ಶಿವಕುಮಾರ್ ಬ್ಯಾಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಸುಮಲತಾ, ನಿಖಿಲ್ ಬೆಂಗಳೂರಿನಿಂದ ಸ್ಪರ್ಧಿಸಬಹುದಿತ್ತು. ಅಂಬರೀಶ್ ಬಿಟ್ಟು ಮಾತಡೋಕೆ ಜೆಡಿಎಸ್​ನವರಿಗೆ ವಿಷ್ಯವೇ ಇಲ್ವಾ? ಟೀಕೆ ಸಹಿಸ್ತೇನೆ ಆದ್ರೆ, ಜನ ಸಹಿಸಲ್ಲ ಎಂದು ತಿಳಿಸಿದ್ದಾರೆ.

ಮಾರ್ಚ್ 25ರಂದು ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಮುನ್ನಿರತ್ನ ಹಾಗೂ ಸಚಿವ ಡಿಕೆ ಶಿವಕುಮಾರ್ ನಿಖಿಲ್ ಪರ ಪ್ರಚಾರ ಮಾಡಿದ್ದರು.

Recommended For You

Leave a Reply

Your email address will not be published. Required fields are marked *