‘400, 500 ರೂಪಾಯಿ ಕೊಟ್ಟರೆ ಜನ ಸೇರಿಸೋದು ದೊಡ್ಡದಲ್ಲ’

ಬೆಂಗಳೂರು: ಬೆಂಗಳೂರಿನಲ್ಲಿ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಜ್ವಲ್ ಚುನಾವಣಾ ಪ್ರಚಾರದ ತಯಾರಿ ಬಗ್ಗೆ ಹೇಳಿದ್ದಾರೆ.

ಸಿದ್ದರಾಮಯ್ಯನವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಎಲ್ಲೆಲ್ಲಿ ಪ್ರಚಾರಕ್ಕೆ ಬರುತ್ತೇನೆ ಅಂತ ತಿಳಿಸಿದ್ದಾರೆ. ನಾವು ಸಣ್ಣವರಿದ್ದಾಗಿಂದಲೂ ನಾನು ಸಿದ್ದರಾಮಯ್ಯನವರನ್ನು ನೋಡಿಕೊಂಡು ಬೆಳೆದವರು. ನಮ್ಮ ಮನೆಯವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ . ಹೀಗಾಗಿ ಅವರನ್ನು ಭೇಟಿಯಾಗಿದ್ದೇನೆ . ಕಡೂರು, ಅರಕಲಗೂಡು, ಅರಸಿಕೆರೆ ಹಾಸನಕ್ಕೆ ಸಿದ್ದರಾಮಯ್ಯ ಪ್ರಚಾರಕ್ಕೆ ಬರ್ತೀನಿ ಅಂತ ಹೇಳಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೇ, ನಾನೆಂದು ಟೀಕೆಯ ರಾಜಕಾರಣ ಮಾಡಲ್ಲ. 400,500 ರೂಪಾಯಿ ಕೊಟ್ಟರೆ ಜನ ಸೇರಿಸೋದು ದೊಡ್ಡದಲ್ಲ. ಹಾಗೇನಾದರೂ ದುಡ್ಡು ಕೊಟ್ಟರೆ ನಾವು ಹಾಸನ ಜಿಲ್ಲೆ ತುಂಬ ಜನ ಸೇರಿಸ್ತೇವೆ ಎಂದು ಹೇಳಿದ್ದಾರೆ.

Recommended For You

Leave a Reply

Your email address will not be published. Required fields are marked *