ಮೈತ್ರಿಯಾದರೂ ಮುಗಿಯದ ಸಿದ್ದು-ಜಿಟಿಡಿ ಮುನಿಸು..!?

ಮೈಸೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಕೂಡ, ಕೆಲ ಕಾಂಗ್ರೆಸ್, ಜೆಡಿಎಸ್ ನಾಯಕರ ಮುನಿಸು ಹಾಗೇ ಇದೆ. ಮಡಿಕೇರಿ ಮತ್ತು ಮೈಸೂರು ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ ಬೇಕು ಎಂದಿದ್ದ ಸಚಿವ ಜಿ.ಟಿ.ದೇವೇಗೌಡ, ಟಿಕೇಟ್ ಕೈತಪ್ಪಿದ ಕಾರಣ, ಚುನಾವಣೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.

ಅಲ್ಲದೇ, ಮೈತ್ರಿ ಅಭ್ಯರ್ಥಿಯನ್ನು ಕೂಡ ಜಿ.ಟಿ.ದೇವೇಗೌಡರು ಭೇಟಿ ಮಾಡಿಲ್ಲ. ನಿನ್ನೆ ನಾಮಪತ್ರ ಸಲ್ಲಿಕೆ ವೇಳೆಯೂ ಗೈರಾಗಿದ್ದರು. ಇನ್ನು ಜಿಟಿಡಿ ಚುನಾವಣೆ ಬಿಟ್ಟು ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಈ ಎಲ್ಲ ಕಾರಣಗಳಿಂದ ಜಿಟಿಡಿ ಹೀಗೆ ಚುನಾವಣೆಯಿಂದ ದೂರು ಉಳಿಯುತ್ತಾರಾ..? ಲೋಕಸಭೆ ಚುನಾವಣೆಗೆ ಅಡ್ಡಿಯಾಗ್ತಿದೆಯಾ ಚಾಮುಂಡೇಶ್ವರಿ ಕ್ಷೇತ್ರದ ಸೋಲು- ಗೆಲುವು ಎಂಬ ಪ್ರಶ್ನೆ ಉದ್ಭವಿಸಿದೆ.

Recommended For You

Leave a Reply

Your email address will not be published. Required fields are marked *