‘ಯಶ್- ದರ್ಶನ್ ದುಡಿಯುವ ಬಾಡಿಗೆ ಜೋಡು ಎತ್ತುಗಳು’

ರಾಯಚೂರು: ಸುಮಲತಾ ಅಂಬರೀಷ್‌ಗೆ ಬೆಂಬಲ ನೀಡುತ್ತಿರುವ ಯಶ್ ಮತ್ತು ದರ್ಶನ್‌ ದುಡಿಯುವ ಬಾಡಿಗೆ ಜೋಡಿ ಎತ್ತುಗಳು ಎಂದು ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ರಾಯಚೂರಿನಲ್ಲಿ ಹೇಳಿದ್ದಾರೆ.

ಮಂಡ್ಯ ಜನರ ಕಷ್ಟ ಸುಖಗಳಿಗೆ ಸಿನಿಮಾದವರು ಭಾಗಿಯಾಗಿಲ್ಲ. ಮಂಡ್ಯದ ಕನಕನ ಮರಡಿಯಲ್ಲಿ ಬಸ್ ಕಾಲುವೆಗೆ ಬಿದ್ದಾಗ ಎಲ್ಲಿ ಹೋಗಿದ್ದರು..? ಇಂದು ಚುನಾವಣೆ ಬಂದಿವೆ ಅಂದ್ರೆ ಅವರು ಬಾಡಿಗೆ ಎತ್ತುಗಳು ಎಂದು ಯಶ್ ಮತ್ತು ದರ್ಶನ್ ವಿರುದ್ಧ ನಾಡಗೌಡ ಹರಿಹಾಯ್ದಿದ್ದಾರೆ.

ಸಿನಿಮಾ ಹೆಸರಲ್ಲಿ ಗೆಲ್ಲೋಕ್ಕೆ ಇದು, ತಮಿಳುನಾಡು, ಆಂಧ್ರ ಪ್ರದೇಶ ಅಲ್ಲ. ಸಿನಿಮಾ ನಟರನ್ನು ನೋಡಲು ಜನ ಬರ್ತಾರೆ ವಿನಃ ಓಟ್ ಹಾಕೋದಿಲ್ಲ . ಸುಮಲತ ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋದಾಗ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.

Recommended For You

Leave a Reply

Your email address will not be published. Required fields are marked *