ಮಂಡ್ಯದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್ ಕೊಟ್ಟ ರೈತರು..!

ಮಂಡ್ಯ: ಮಂಡ್ಯದಲ್ಲಿ ರಾಜಕೀಯ ಪೈಪೋಟಿಗಿಳಿದ ನಿಖಿಲ್ ಕುಮಾರ್ ಮತ್ತು ಸುಮಲತಾ ಅಂಬರೀಷ್ ಪ್ರಚಾರದ ಭರಾಟೆ ಭಾರಿಯಾಗೇ ಇದೆ. ಮಂಡ್ಯ ಮತದಾರನ ಗಮನ ಸೆಳೆಯುವಲ್ಲಿ ಇಬ್ಬರ ಕಸರತ್ತು ಜೋರಾಗಿದೆ.

ಆದ್ರೆ, ಯಾರು ನಮಗೆ ಬೆಂಬಲಿಸದಿದ್ರೂ ರೈತರ ಬೆಂಬಲ ಇದ್ದೇ ಇರುತ್ತೆ ಅನ್ನೋ ವಿಶ್ವಾಸದಲ್ಲಿದ್ದ ಜೆಡಿಎಸ್‌ಗೆ ರೈತರ ಸಂಘವೇ ಬಿಗ್ ಶಾಕ್ ನೀಡಿದೆ.

ಸುಮಲತಾ ಅಂಬರೀಷ್‌ರನ್ನ ಬೆಂಬಲಿಸಲು ರೈತ ಸಂಘ ತೀರ್ಮಾನಿಸಿದೆ. ರೈತಸಂಘ ಮಂಡ್ಯದಲ್ಲಿ ಬಿಜೆಪಿಗಿಂತ ಹೆಚ್ಚು ಮತ ಬ್ಯಾಂಕ್, ಅಂದರೆ ಒಂದೂವರೆ ಲಕ್ಷದಷ್ಟು ಮತ ಬ್ಯಾಂಕ್ ಹೊಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಲ್ಲಿ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ 78 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು.

ಅಲ್ಲದೇ, ಇತ್ತೀಚೆಗೆ ಸುಮಲತಾ, ರೈತ ನಾಯಕ ದಿ.ಪುಟ್ಟಣ್ಣಯ್ಯ ಪತ್ನಿ ಸುನೀತಾರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು. ಈ ಕಾರಣಕ್ಕಾಗಿ ಸುಮಲತಾಗೆ ಬೆಂಬಲಿಸಲು ರೈತ ಸಂಘದ ಕಾರ್ಯಕರ್ತರು ಒಪ್ಪಿಗೆ ಸೂಚಿಸಿದ್ದು, ಇನ್ನೆರಡು ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಿದ್ದಾರೆ.

Recommended For You

Leave a Reply

Your email address will not be published. Required fields are marked *