ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕೆಂಡ ಕಾರಿದ್ದೇಕೆ ಗೊತ್ತಾ..?

ಸಿದ್ದರಾಮಯ್ಯ ನಿವಾಸಕ್ಕೆ ಸಚಿವ ರೇವಣ್ಣ, ಶಾಸಕಿ ಅನಿತಾ ಕುಮಾರಸ್ವಾಮಿ ಬಳಿಕ ಪ್ರಜ್ವಲ್ ವಿಸಿಟ್ ಹಾಕಿದ್ದಾರೆ. ಮೈತ್ರಿ ಅಭ್ಯರ್ಥಿಗಾಗಿ ಪ್ರಚಾರಕ್ಕೆ ಬನ್ನಿ ಅಂತ ಕರೀತಿದ್ದಾರೆ. ಈ ಮಧ್ಯೆ ತುಮಕೂರು ಸೇರಿ ಹಲವೆಡೆ ಉಂಟಾಗಿರೋ ಭಿನ್ನಮತ ಶಮನಕ್ಕೆ ಕಾಂಗ್ರೆಸ್ ಟೀಮ್ ಮುಂದಾಗಿದೆ.

ಸಂಸತ್ ಚುನಾವಣೆ ಕರ್ನಾಟಕದ ಮಟ್ಟಿಗೆ ಮೂರೂ ಪಕ್ಷಗಳಿಗೂ ತುಂಬಾನೆ ಇಂಪಾರ್ಟೆಂಟ್​​. ಮತ್ತೊಮ್ಮೆ ಮೋದಿ ಅಂತ ಬಿಜೆಪಿ ಕಮಲ ಬಾವುಟ ಹಿಡಿತು ಮತದಾರರ ಬಳಿಗೆ ಜೋಳಿಗೆ ಹಿಡೀತಿದೆ. ಕಾಂಗ್ರೆಸ್​ ಕೂಡ ಮೋದಿ ಕಡೆಗಾಣಿಸಿ ರಾಹುಲ್ ಗಾಂಧಿಯನ್ನ ಪ್ರತಿಷ್ಠಾಪಿಸಬೇಕು ಅಂತ ಹಾತೊರೆಯುತ್ತಿದೆ. ಇದ್ರ ಮಧ್ಯೆ ಪ್ರಾದೇಶಿಕ ಪಕ್ಷ ಜೆಡಿಎಸ್​ಗೆ ಅಸ್ವಿತ್ವ ಸಾಬೀತು ಮಾಡೋ ಪರೀಕ್ಷೆ.

ಈ ಪೈಕಿ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ಪಕ್ಷದಿಂದ ಪರೀಕ್ಷೆಗೆ ಒಳಪಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್​, ಉಪಮುಖ್ಯಮಂತ್ರಿ ಪರಮೇಶ್ವರ್​ಗೆ ಇಲ್ಲದ ಸತ್ಯಶೋಧನೆಗೆ ಬಿದ್ದಿದ್ದಾರೆ. ಪಕ್ಷ ಮತ್ತು ರಾಜ್ಯದ ಮತದಾರನ ಮನಸಿನಲ್ಲಿ ನನ್ನ ಆಡಳಿತಾವಧಿಯ ಸಾಧನೆ ಎಷ್ಟು ಅನ್ನೋದೇ ಆ ಸತ್ಯಶೋಧನೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯ ಸಾಧನೆ ಜೊತೆಗೆ ಹೊಸ ಇತಿಹಾಸ ಸೃಷ್ಟಿಯೂ ಇವರ ಮುಂದಿರೋ ಸವಾಲು. ಹೀಗಾಗಿ, ಜೆಡಿಎಸ್​ ಜೊತೆ ಜೊತೆಗೆ ಕಾಂಗ್ರೆಸ್ ಪಕ್ಷದಿಂದಲೂ ಹೆಚ್ಚಿನ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳೋ ಜರೂರತು ಇವ್ರ ಮೇಲಿದೆ.

ಅದ್ರಲ್ಲೂ ಮಂಡ್ಯ, ಹಾಸನ ಮತ್ತು ತುಮಕೂರು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ಕಂಡ್ರೆ ಸ್ವತಃ ಸಿದ್ರಾಮಯ್ಯಹಾಗೂ ಸಿಎಂ ಹೆಚ್ಡಿಕೆ ಗೆದ್ದಂತೆಯೇ ಸರಿ. ಈ ಕಾರಣಕ್ಕೆ ಸಿದ್ದರಾಮಯ್ಯ ಮನೆಗೆ ದಳಪತಿಗಳು ಬಿಟ್ಟೂಬಿಡದೆ ಎಡತಾಕುತ್ತಿದ್ದಾರೆ.

ಮೊನ್ನೆ  ಹಾಸನ ಕ್ಷೇತ್ರಕ್ಕೆ ಬನ್ನಿ. ಪ್ರಜ್ವಲ್ ಬೆಂಬಲಿಸುವಂತೆ ಜಿಲ್ಲಾ ಕಾಂಗ್ರೆಸ್​ ಮುಖಂಡರಿಗೆ ಮೈತ್ರಿ ಧರ್ಮ ಪಾಲನೆ ಸಂಬಂಧ ಕಿವಿಮಾತು ಹೇಳಿ ಅಂದಿದ್ದರು. ಈ ಟೈಮ್ನಲ್ಲೂ ವಿರೋಧಿ ಬಿಜೆಪಿ ಅಭ್ಯರ್ಥಿಯನ್ನ ಮೆಟ್ಟಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್​ ಗೆಲುವಿನ ಚಿಂತೆಯೇ ಹೆಚ್ಚಿತ್ತು.

ಮೊನ್ನೆ ರಾತ್ರಿ ಜೆಡಿಎಸ್ ಶಾಸಕ ಅನಿತಾ ಕುಮಾರಸ್ವಾಮಿ ಸರದಿ. ಸಿದ್ದರಾಮಯ್ಯರನ್ನ ಭೇಟಿಯಾಗಿ ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ನೀವ್ ಹಾಜರಿರಬೇಕು ಅಂತ ಕೋರಿಕೊಂಡಿದ್ದರು. ಆಗಲೂ ಸಿದ್ದರಾಮಯ್ಯ ನಕ್ಕು ಸುಮ್ಮನಾಗಿದ್ದರು.

ಇವತ್ತು ಬೆಳಗ್ಗೆ ಸಿದ್ದರಾಮಯ್ಯ ಮನೆ ಹುಡುಕಿ ಬಂದೋದು ಪ್ರಜ್ವಲ್ ರೇವಣ್ಣ. ಹಾಸನಕ್ಕೆ ಬನ್ನಿ ಸಾರ್​, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಗೆ ಬುದ್ಧಿ ಹೇಳಿ. ಮೈತ್ರಿ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡಿ ಅಂತ ರಿಕ್ವೆಸ್ಟ್ ಮಾಡಿದ್ದಾರಂತೆ.

ಇದನ್ನ ಟ್ವಿಟರ್​ನಲ್ಲಿ ಪ್ರಕಟಿಸಿದ ಸಿದ್ದರಾಮಯ್ಯ ಪ್ರಜ್ವಲ್ ರೇವಣ್ಣಗೆ ಆಶೀರ್ವಾದ ಮಾಡಿರುವೆ. ಗೆದ್ದು ತಾತಾನ ರೀತಿ ರಾಜಕಾರಣ ಮಾಡಲಿ. ಹಾಸನ ಕ್ಷೇತ್ರವನ್ನ ಅಭಿವೃದ್ಧಿ ಮಾಡಲಿ ಅಂತ ರಿಯಾಕ್ಟ್ ಮಾಡಿದ್ದಾರೆ.

ಅಲ್ಲಿಗೆ ಸಿದ್ದರಾಮಯ್ಯರೇ ಈಗಲೂ ಸ್ಟ್ರಾಂಗ್​. ಮೈತ್ರಿಗೆ ಕಿಂಗ್​ಮೇಕರ್ ಅನ್ನೋದನ್ನ ಸಮನ್ವಯ ಸಮಿತಿ ಅಧ್ಯಕ್ಷರು ಸಾಬೀತು ಮಾಡಿದ್ದಾರೆ. ಆದ್ರೆ ಮುಂದೆ ಯಾವ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗ್ತಾರೆ ಅನ್ನೋದು ಕೂಡ ಇಂಪಾರ್ಟೆಂಟ್​. ಸಿದ್ದರಾಮಯ್ಯ ಹೋದ ಕಡೆ ಒಂದು ಪ್ರಬಲ ಸಮುದಾಯ ಮತಗಳೇ ನಿರ್ಣಾಯಕವಾಗಲಿದೆ ಅನ್ನೋದು ಸುಳ್ಳೇನಲ್ಲ.

ಅಂದ್ ಹಾಗೆ ಸಿದ್ದರಾಮಯ್ಯ ತವರಲ್ಲೇ ದೋಸ್ತಿಗಳ ನಡುವೆ ಸಮನ್ವಯ ಮೂಡದಿರೋದು ಕಾಂಗ್ರೆಸ್ ನಾಯಕರನ್ನ ಚಿಂತೆಗೀಡು ಮಾಡಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್ ಮೈತ್ರಿಯಾದರೂ ಸಿದ್ದು- ಸಚಿವ ಜಿಟಿಡಿ ಮುನಿಸು ಮಾತ್ರ ಇನ್ನೂ ದೂರವಾಗಿಲ್ಲ..! ನಿನ್ನೆ ಮೈತ್ರಿ ಅಭ್ಯರ್ಥಿ ಸಿ.ಹೆಚ್​.ವಿಜಯಶಂಕರ್ ನಾಮಪತ್ರ ಸಲ್ಲಿಸುವಾಗಲೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ ಕಾಣರಲಿಲ್ಲ. ಸಂಸತ್ ಚುನಾವಣೆಯಿಂದ ಅಂತರ ಕಾಯ್ದುಕೊಂಡಿರೋ ಜಿಟಿಡಿ, ಒಂದ್ ಸಲವೂ ಅಭ್ಯರ್ಥಿ ವಿಜಯಶಂಕರ್ ಅವರನ್ನ ಭೇಟಿಯಾಗದಿರೋದೇ ಅಚ್ಚರಿ. ಹೀಗಾಗಿ ಮೈಸೂರು ಉಸ್ತುವಾರಿ ಸಚಿವರ ನಡೆ ಕುತೂಹಲವಾಗಿದೆ

ಮತ್ತೊಂದ್ ಇಂಪಾರ್ಟೆಂಟ್ ಅಂತಂದ್ರೆ.. ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಸಂವಾದ ನಡೆಸಿದ್ರು. ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಸಂವಾದ ನಡೆಸಿಕೊಟ್ರು. ಈ ಟೈಮ್ನಲ್ಲಿ ಬಿಜೆಪಿಯ ಆಪರೇಷನ್ ಕಮಲ ವಿರುದ್ಧ ಕೆಂಡಕಾರಿದ್ರು.

ಇದೆಲ್ಲದ್ರ ಮಧ್ಯೆ ತುಮಕೂರು ಭಿನ್ನಮತ ಶೀಘ್ರ ಶಮನವಾಗುತ್ತೆ. ರಾತ್ರಿ ಅಥವಾ ಬೆಳಗ್ಗೆ ಮುದ್ದಹನುಮೇಗೌಡ ಮತ್ತು ಕೆ.ಎನ್​.ರಾಜಣ್ಣ ಜೊತೆ ಮಾತುಕತೆ ನಡೆಸ್ತೀವಿ. ಬಂಡಾಯ ಶಮನಗೊಳಿಸಿ ದೇವೇಗೌಡರ ಗೆಲುವಿಗೆ ಒಟ್ಟಿಗೆ ದುಡೀತಿವಿ ಅಂತ ಕೆಪಿಸಿಸಿ ಅಧ್ಯಕ್ಷರು ಬೆಂಗಳೂರಲ್ಲಿ ರಿಯಾಕ್ಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಮೂಲೆಗುಂಪು, ಫುಲ್ ವೀಕ್ ಆದ್ರು ಅಂತಿದ್ದವರೇ ಇದೀಗ ಸಿದ್ದರಾಮಯ್ಯ ಫುಲ್ ಸ್ಟ್ರಾಂಗ್ ಅನ್ನೋ ಹಾಗಾಗಿದೆ. ಅದ್ರಲ್ಲೂ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಸಮನ್ವಯ ಸಮಿತಿ ಅಧ್ಯಕ್ಷರ ರಣತಂತ್ರ ಮತ್ತು ಪ್ರಚಾರ ತುಂಬಾನೆ ಇಂಪಾರ್ಟೆಂಟ್. ಈ ಕಾರಣಕ್ಕೆ ಕಿಂಗ್​​ಮೇಕರ್​ ಸಿದ್ದು, ಟಗರು ಸ್ಟ್ರಾಂಗ್ ಅಂತೆಲ್ಲಾ ವಿರೋಧಿಗಳು ಮಾತಾಡ್ತಿದ್ದಾರೆ. ಮೊದಲನೇ ಹಂತದ ನಾಮಿನೇಷನ್ ಮುಗಿದಿದ್ದು ಎರಡನೇ ಹಂತದ ಉಮೇದುವಾರಿಕೆ ಮಾತ್ರ ಬಾಕಿಯಿದೆ..

Recommended For You

Leave a Reply

Your email address will not be published. Required fields are marked *