ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಫೈನಲ್

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಫೈನಲ್ ಆಗಿದ್ದು, ಬಿಜೆಪಿಯ ಯುವ ಮುಖಂಡ ತೇಜಸ್ವಿ ಸೂರ್ಯಗೆ ಟಿಕೇಟ್ ನೀಡಲಾಗಿದೆ.

ಮೊದಲು ದಕ್ಷಿಣ ಕ್ಷೇತ್ರದಿಂದ ಪ್ರಧಾನಿ ಮೋದಿ ಸ್ಪರ್ಧಿಸುತ್ತಾರೆಂದು ಹೇಳಲಾಗಿದ್ದು, ನಂತರ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್‌ಗೆ ಟಿಕೇಟ್ ಸಿಗಲಿದೆ ಎಂಬ ಮಾತು ಕೇಳಿಬಂದಿತ್ತು. ಇದೀಗ ತೇಜಸ್ವಿ ಸೂರ್ಯಗೆ ಟಿಕೇಟ್ ಫೈನಲ್ ಆಗಿದ್ದು, ಇಂದು ಸೂರ್ಯ ನಾಮಪತ್ರ ಸಲ್ಲಿಸಲಿದ್ದಾರೆ.

ಅಲ್ಲದೇ, ಮಲ್ಲೇಶ್ವರಂ ಶಾಸಕ ಅಶ್ವತ್ಥ್ ನಾರಾಯಣ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಇವರೂ ಕೂಡ ಇಂದೇ ನಾಮಪತ್ರ ಸಲ್ಲಿಸಲಿದ್ದಾರೆ.

ಯಾರು ತೇಜಸ್ವಿ ಸೂರ್ಯ ?
ವೃತ್ತಿಯಲ್ಲಿ ವಕೀಲರಾಗಿರುವ ತೇಜಸ್ವಿ ಸೂರ್ಯ, ಹಲವು ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಮಾತುಗಾರಿಕೆಯಿಂದಲೇ ಹೆಸರು ಮಾಡಿದ್ದಾರೆ.

ಈ‌ ಹಿಂದೆ ಕೂಡಾ ಬಿಜೆಪಿ ಪಾಳಯದಿಂದ ಲೋಕಸಭಾ ಅಭ್ಯರ್ಥಿಯಾಗುಲು ಫೈಟ್ ಮಾಡಿದ್ದು, ತೇಜಸ್ವಿ ಸೂರ್ಯಗೆ ಕೇಂದ್ರ ಸಚಿವರ ಜೊತೆ ಒಳ್ಳೆಯ ಒಡನಾಟವಿದೆ. ಅಲ್ಲದೇ, ತೇಜಸ್ವಿ ಮೋದಿ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ತೇಜಸ್ವಿ ಪ್ರಬಲ ಹಿಂದೂ ಧೋರಣೆಯ ಮೂಲಕವೇ ಗುರುತಿಸಿಕೊಂಡಿದ್ದು, ಈ ಹಿಂದೆ ಜಯನಗರ ವಿಧಾನಸಭಾ ಚುನಾವಣಾಯಲ್ಲಿಯೂ ಇವರ ಹೆಸರು ಕೇಳಿ ಬಂದಿತ್ತು.

Recommended For You

Leave a Reply

Your email address will not be published. Required fields are marked *