ರಾಘಣ್ಣ ಸಿಲ್ವರ್ ಜ್ಯೂಬಿಲಿ ಚಿತ್ರಕ್ಕೆ ಅಪ್ಪು ಕ್ಲಾಪ್

ಚಿತ್ರರಂಗದ ದೊಡ್ಮನೆ ಅಂಗಳದಲ್ಲಿ, ದೊಡ್ಮನೆ ಅಭಿಮಾನಿ ಬಳಗದಲ್ಲಿ ಸಂತಸದ ಕ್ಷಣ ಉಂಟಾಗಿದೆ..ಇದಕ್ಕೆ ಕಾರಣ ರಾಘವೇಂದ್ರ ರಾಜ್​ಕುಮಾರ್. ಕಲೆಯೇ ನಮ್ಮ ಉಸಿರು ಎನ್ನೊ ದೊಡ್ಮನೆ  ಎರಡನೇ ಪುತ್ರ ರಾಘಣ್ಣ  25 ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆಡಿಸಿದಾತ ಚಿತ್ರದಲ್ಲಿ ರಾಘವೇಂದ್ರ ರಾಜ್​ ಕುಮಾರ್ ನಟಿಸೋ ಮೂಲಕ  ಕಲಾ ಬದುಕಿನ ಸಿಲ್ವರ್ ಜ್ಯೂಬಿಲಿ ಸಿನಿಮಾ ಸಂತಸ ಆಚರಿಸಿಕೊಳ್ಳುತ್ತಿದ್ದಾರೆ.

ಅಣ್ಣನೇ ನನಗೆ ಸ್ಫೂರ್ತಿ ಅಂದಿದ್ದೇಕೆ ಪವರ್ ಸ್ಟಾರ್..!

ಆಡಿಸಿದಾತ ಚಿತ್ರಕ್ಕೆ ಅಭಿಮಾನಿಗಳ ಪ್ರೀತಿಯ ರಾಜಕುಮಾರ, ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಕ್ಲ್ಯಾಪ್ ಮಾಡುವ ಮೂಲಕ ಅಣ್ಣನಿಗೆ ಶುಭ ಹಾರೈಸಿದ್ದಾರೆ..ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ರಾಘಣ್ಣ ಬ್ಯುಸಿಯಾಗಿರೋದನ್ನ ಕಂಡು ಅಪ್ಪು ಕೂಡ ಖುಷಿಯಾಗಿದ್ದು, ತಮ್ಮ ಫಿಟ್ನೆಸ್​ ಹಾಗೂ ಎನರ್ಜಿಗೆ ರಾಘಣ್ಣನೇ ಇನ್ಸ್ ಪಿರೇಷನ್ ಅಂತ ಅಪ್ಪು ತಮ್ಮ ಫಿಟ್ನೆಸ್​ ಸೀಕ್ರೇಟ್​ ಬಿಚ್ಚಿಟ್ಟಿಡಿದ್ದಾರೆ.

ಥ್ರಿಲ್ಲರ್ ಸಿನಿಮಾದಲ್ಲಿ ರಾಘಣ್ಣನ ಹಾಡು- ಡಾನ್ಸ್..!

ಚಿರಯುವಕರನ್ನ ನಾಚಿಸುವಂತಿದೆ ರಾಘಣ್ಣನ ಲುಕ್

2004ರಲ್ಲಿ ತೆರೆಕಂಡ ಪಕ್ಕದ್ಮನೆ ಹುಡುಗಿ ಚಿತ್ರದ ನಂತರ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ..ಅಮ್ಮನ ಮನೆ ಚಿತ್ರದ ಮೂಲಕ ಕಂ ಬ್ಯಾಕ್​ ಮಾಡಿದ ರಾಘಣ್ಣ ತ್ರಯಂಬಕಂ, ಪೊಗರು ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ..ಇದೀಗ ಥ್ರಿಲ್ಲರ್ ಸಬ್ಜೆಕ್ಟ್ ಇರೋ ಆಡಿಸಿದಾತ ಚಿತ್ರದ ಮೂಲಕ ಭರ್ಜರಿಯಾಗಿ  ತಮ್ಮ ಸೆಕೆಂಡ್ ಇನ್ನಿಂಗ್ಸ್​ ಶುರು ಮಾಡಿದ್ದಾರೆ.. ಸಿಲ್ವರ್ ಜ್ಯುಬಿಲಿ ಚಿತ್ರವಾದ್ದರಿಂದ ಒಂದಷ್ಟು ಸ್ಪೆಷಲ್ ಎಲಿಮೆಂಟ್ ಚಿತ್ರತಂಡ ರೆಡಿಮಾಡಿದ್ದು, ರಾಘಣ್ಣನ ಕೈಯಲ್ಲಿ ಹಾಡನ್ನು ಹೇಳಿಸಿ ಡಾನ್ಸ್ ಕೂಡ ಮಾಡಿಸುತ್ತಿದ್ದಾರೆ.

ಆಡಿಸಿದಾತ ಚಿತ್ರದ ಇಂಟ್ರಸ್ಟಿಂಗ್ ವಿಷ್ಯಾ ಅಂದ್ರೆ ರಾಘಣ್ಣನ ಲುಕ್. ಎಸ್ ರಾಘಣ್ಣ ಸಖತ್ ಸ್ಟೈಲಿಷ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ..ಇವ್ರ ನ್ಯೂ ಗೆಟಪ್ ನೋಡ್ತಿದ್ರೆ ಸ್ವಸ್ತಿಕ್, ಟುವ್ವಿ ಟುವ್ವಿ ಚಿತ್ರದಲ್ಲಿನ ರಾಘಣ್ಣನೇ  ಕಣ್ಮುಂದೆ ಬಂದಂತಿದೆ.. ಅಷ್ಟು ಯಂಗ್ ಎಂಡ್ ಚಾರ್ಮ್​ ಆಗಿ  ರಾಘಣ್ಣ ಇಲ್ಲಿ ಕಾಣಸಿಗಲಿದ್ದಾರೆ..ಹೀಗೆ ಹತ್ತು ಹಲವು ವಿಶೇಷತೆ ಹೊಂದಿರೋ ರಾಘಣ್ಣ 25ನೇ ಚಿತ್ರಕ್ಕೆ ಫಣೀಶ್ ಭಾರಧ್ವಾಜ್ ನಿರ್ದೇಶಕ.. ಮಣಿಕಾಂತ್ ಖದ್ರಿ ಸಂಗೀತದಲ್ಲಿ ಆಡಿಸಿದಾತನ ಹಾಡುಗಳು ಮೂಡಿ ಬರಲಿದ್ದು ಚೇತನ್​​ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಬಹು ದಿನಗಳ ನಂತ್ರ ರಾಘಣ್ಣ ಸಿನಿಮಾದಲ್ಲಿ ಬ್ಯುಸಿಯಾಗಿರೋದು ಅಭಿಮಾನಿಗಳಲ್ಲಿ ಹಾಗೂ ಅಣ್ಣಾವ್ರ ಕುಟುಂಬದಲ್ಲಿ ಸಖತ್ ಸಂತಸ ತಂದಿದೆ. ರಾಘಣ್ಣ ಲುಕ್​​, ಪವರ್ ಸ್ಟಾರ್ ಸಾಥ್ ಸಿಲ್ವರ್ ಜ್ಯುಬಿಲಿ  ಸಿನಿಮಾಕ್ಕೆ ಸಖತ್ ಪವರ್ ನೀಡಿದ್ದು, ಸಿನಿಮಾದ ವಿಶೇಷತೆಗಳನ್ನ ಕೇಳ್ತಿದ್ರೆ ಈಗಲೇ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ.

Recommended For You

Leave a Reply

Your email address will not be published. Required fields are marked *