ಮೈ ನೇಮ್‌ ಈಸ್ ಆಂಜಿ ಚಿತ್ರದ ನಾಯಕಿ ಯಾರು ಗೊತ್ತಾ..?

ಸ್ಯಾಂಡಲ್​ವುಡ್​ನ ಸ್ಟಾರ್ ಕೊರಿಯೊಗ್ರಫರ್ ಕಂ ಡೈರೆಕ್ಟರ್ ಹರ್ಷ ಮತ್ತು ಹ್ಯಾಟ್ರಿಕ್ ಹೀರೋ ಶಿವಣ್ಣನ ಹ್ಯಾಟ್ರಿಕ್​ ಕಾಂಬಿನೇಷನ್​ ಮೈ ನೇಮ್​ ಈಸ್ ಆಂಜಿ. ಇಷ್ಟು ದಿನ ಆಂಜಿಗೆ ಜೋಡಿಯನ್ನ ಹುಡುಕ್ತಾ ಇದ್ದ ನಿರ್ದೇಶಕರಿಗೆ ಇದೀಗ ನಾಯಕಿ ಸಿಕ್ಕಿದ್ದಾಗಿದೆ…ಸಾಕಷ್ಟು ಹೆಸ್ರುಗಳ ನಡುವೆಯೇ ಇದೀಗ ಈ ಹೆಸ್ರು ಫೈನಲ್ ಆಗಿದೆ..

ಎ. ಹರ್ಷ-ಶಿವಣ್ಣನ ಹ್ಯಾಟ್ರಿಕ್​ ಕಾಂಬಿನೇಷನ್​ ಚಿತ್ರ
ಮೈ ನೇಮ್ ಈಸ್ ಆಂಜಿಗೆ ಜೊತೆಯಾದ ಟಗರು ಪಂಚಮಿ
ಮೈ ನೇಮ್​ ಆಂಜಿ..ಸೆಂಚೂರಿ ಸ್ಟಾರ್ ಶಿವರಾಜ್​ಕುಮಾರ್​ , ಡೈರೆಕ್ಟರ್ ಹರ್ಷ ಕಾಂಬಿನೇಷನ್​ನ 3 ನೇ ಚಿತ್ರ..ಈಗಾಗ್ಲೇ ಇವರಿಬ್ಬರ ಜುಗಲ್​ಬಂದಿಯಲ್ಲಿ ಭಜರಂಗಿ, ವಜ್ರಕಾಯ ಸಿನಿಮಾಗಳು ಹಿಟ್ ಲಿಸ್ಟ್ ಸೇರಿದ್ದು, ಇದೀಗ ಹ್ಯಾಟ್ರಿಕ್​ ಹಿಟ್ ಕೊಡೋಕ್ಕೆ ಮತ್ತೆ ಈ ಜೋಡಿ ಒಂದಾಗಿದೆ..ಗೊತ್ತಿರೋ ಹಾಗೇ ನಿರ್ದೇಶಕ ಎ ಹರ್ಷ ಆಂಜನೇಯನ ಪರಮಭಕ್ತ..ಹಾಗಾಗಿ ಅವ್ರ ಎಲ್ಲಾ ಟೈಟಲ್​ಗಳಲ್ಲಿ,ಸಿನಿಮಾಗಳಲ್ಲಿ ಹನುಮಂತನ ಛಾಯೆ ಇದ್ದೇ ಇರುತ್ತೆ..

ಇದೀಗ ಮೈ ನೇಮ್​ ಈಸ್ ಆಂಜಿ ಕೂಡ ಟೈಟಲ್​ ಮೂಲಕವೇ ಕುತೂಹಲ ಕೆರಳಿಸಿದ್ದು, ಶಿವಣ್ಣನಿಗೆ ನಾಯಕಿ ಯಾರಾಗ್ತಾರೆ ಅನ್ನೋ ಕ್ಯೂರಿಯಾಸಿಟಿ ಕೂಡ ಇದ್ದೇ ಇತ್ತು..ಅಷ್ಟೇ ಅಲ್ಲಾ ಈ ಪಾತ್ರಕ್ಕೆ ಕಬಾಲಿ ಖ್ಯಾತಿಯ ಸಾಯಿ ಧನ್ಸಿಕಾ,ಆಯ್ಕೆಯಾಗ್ತಾರೆ ಅನ್ನೋ ಸುದ್ದಿ ಕೂಡ ಇತ್ತು..ಆದ್ರೀಗ ಶಿವಣ್ಣನಿಗೆ ನಾಯಕಿಯಾಗಿ ಜಾಕಿ ಭಾವನಾ ಆಯ್ಕೆಯಾಗಿದ್ದಾರೆ..ಯೆಸ್ ಈ ಹಿಂದೆ ಟಗರು ಸಿನಿಮಾದಲ್ಲಿ ಪಂಚಮಿ ಪಾತ್ರದಲ್ಲಿ ಶಿವಣ್ಣನಿಗೆ ಜೊತೆಯಾಗಿದ್ದ ಭಾವನಾ 2 ನೇ ಬಾರಿ ಶಿವಣ್ಣನ ಜೊತೆ ಸ್ಕ್ರೀನ್​ ಶೇರ್ ಮಾಡ್ತಿದ್ದಾರೆ.

ಮೈ ನೇಮ್​ ಆಂಜಿ ಚಿತ್ರದಲ್ಲಿ ಶಿವಣ್ಣ ಲುಕ್​ ಗೆಟಪ್​ ಎಷ್ಟು ಡಿಫ್ರೆಂಟಾಗಿರುತ್ತೋ,ಅಷ್ಟೇ ವಿಭಿನ್ನವಾಗಿ ಭಾವನಾ ಕೂಡ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರಂತೆ.. ಈ ಹಿಂದೆ ಇನೋಸೆಂಟ್ ಹುಡುಗಿಯಾಗಿ ,ಗ್ಲಾಮರಸ್ ಲುಕ್​ಗಳಲ್ಲಿ ಮಿಂಚಿದ್ದ ಭಾವನಾ ಮೈ ನೇಮ್​ ಆಂಜಿಯಲ್ಲಿ ಹಿಂದೆಂದೂ ನೋಡಿರದ ಪಾತ್ರ ಮತ್ತು ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.ಕಂಪ್ಲೀಟ್ ಪರ್ಫಾಮೆನ್ಸ್​ ಓರಿಯಂಟೆಡ್​ ಪಾತ್ರ ಇದಾಗಿದೆ..ಅಷ್ಟೇ ಭಾವನಾರ ಲುಕ್​ ಜೊತೆಗೆ ಔಟ್ ಫಿಟ್, ಕೂಡ ಕಂಪ್ಲೀಟ್ ಡಿಫ್ರೆಂಟ್ ಆಗಿ ಇರಲಿದ್ಯಂತೆ.

ಯಾರಿಗೆ ಸಿಗಲಿದೆ ಶಿವಣ್ಣನ ಎದುರು ಖಳನಾಯಕನಾಗೋ ಅವಕಾಶ ?
ಹೊಸ ಪ್ರತಿಭೆಗಳಿಗೆ ಭರ್ಜರಿ ಆಫರ್ ಕೊಡ್ತಿರೋ ನಿರ್ದೇಶಕ ಹರ್ಷ..
ಈಗಾಗ್ಲೇ ಶಿವಣ್ಣನ ಲುಕ್,ಗೆಟಪ್​ ಬಗ್ಗೆ ಸಾಕಷ್ಟು ತಯಾರಿಗಳು ನಡೀತಿದ್ದು,ಚಿತ್ರಕ್ಕೆ ಉಳಿದ ಕಲಾವಿದರ ಆಯ್ಕೆ ನಡೀತಿದೆ..ಭಜರಂಗಿ ಚಿತ್ರದ ಮೂಲಕ ಸಾಕಷ್ಟು ಹೊಸ ಪ್ರತಿಭೆಗಳನ್ನು ಪರಿಚಯಿಸಿದ ನಿರ್ದೇಶಕ ಹರ್ಷ, ಈ ಚಿತ್ರದಲ್ಲೂ ಒಂದಷ್ಟು ಹೊಸ ಕಲಾವಿದರನ್ನ ಕರೆತರೋ ಪ್ರಯತ್ನದಲ್ಲಿದ್ದಾರೆ..ಅದ್ರಲ್ಲೂ ಶಿವಣ್ಣನ ಎದುರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳೋಕ್ಕೆ ಖಡಕ್ ವಿಲನ್ ಹುಡುಕಾಟದಲ್ಲಿದ್ದಾರೆ.ಈಗಾಗ್ಲೇ ಆಡಿಶನ್ ಶುರುವಾಗಿದ್ದು, ಸುಮಾರು 18 ವರ್ಷದಿಂದ, 70 ವಯಸ್ಸಿನ ವಯೋಮಿತಿಯಲ್ಲಿ ಕಲಾವಿದರು ಚಿತ್ರಕ್ಕೆ ಬೇಕಾಗಿದ್ದಾರಂತೆ..

ಇನ್ನು ಟೆಕ್ನಿಶಿಯನ್ಸ್​ ಬಗ್ಗೆ ಹೇಳೋದಾದ್ರೆ ಭಜರಂಗಿ ಮತ್ತು ವಜ್ರಕಾಯ ಸಿನಿಮಾ ಟೀಮ್​ ಇಲ್ಲಿಯೂ ಕಂಟಿನ್ಯೂ ಆಗಲಿದೆ..ಸ್ವಾಮಿ ಕ್ಯಾಮರಾವರ್ಕ್​, ಅರ್ಜುನ್​ ಜನ್ಯಾ ಸಂಗೀತ ಚಿತ್ರಕ್ಕಿದೆ..ಜಯಣ್ ಬೋಗೇಂದ್ರ ಮೈ ನೇಮ್​ ಈಸ್ ಆಂಜಿಗೆ ಬಂಡವಾಳ ಹಾಕ್ತಿದ್ದು, ಜೂನ್​ ತಿಂಗಳಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದೆ..
ಅರ್ಚನಾಶರ್ಮಾ, ಎಂಟರ್​ಟೈನ್ಮೆಂಟ್​ ಬ್ಯುರೋ, ಟಿವಿ5

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.