ನಯನತಾರ ಬಗ್ಗೆ ಕೀಳಾಗಿ ಮಾತನಾಡಿದ ನಟನಿಗೆ ತಕ್ಕ ಶಾಸ್ತಿ..!

ನಯನತಾರ. ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ. ಹೀರೋಗಳಿಗೆ ಸರಿಸಮನಾಗಿ ನಟಿಸಿ, ಲೇಡಿ ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿರೋ ಮಲಯಾಳಿ ಕುಟ್ಟಿ. ಸದ್ಯ ಕೊಲೈಯುತ್ತಿರ್ ಕಾಲಂ ಅನ್ನೋ ಮಿಸ್ಟ್ರಿ ಥ್ರಿಲ್ಲರ್ ಸಿನಿಮಾದಲ್ಲಿ ನಯನ್​ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಮತ್ತು ಟ್ರೈಲ್ ರಿಲೀಸ್​ ಆಗಿದೆ.. ಈ ಚಿತ್ರದಲ್ಲಿ ಮಾಲಿವುಡ್​ ಸುಂದ್ರಿ ದೆವ್ವದ   ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಲೇಡಿ ಸೂಪರ್ ಸ್ಟಾರ್​ಗೆ ಅವಮಾನ ಮಾಡಿದ ರಾಧಾರವಿ..!

ನಯನತಾರ ಬಗ್ಗೆ ಕೀಳಾಗಿ ಮಾತನಾಡಿದ ನಟನಿಗೆ ತಕ್ಕ ಶಾಸ್ತಿ..!

ಕೊಲೈಯುತ್ತಿರ್ ಕಾಲಂ ಸಿನಿಮಾ ಆಡಿಯೋ ಲಾಂಚ್​ ವೇದಿಕೆಯಲ್ಲಿ, ಹಿರಿಯ ನಟ, ರಾಜಕೀಯ ಮುಖಂಡ ರಾಧಾರವಿ, ನಯನತಾರಾ ಬಗ್ಗೆ ಮಾಡಿದ ಅಸಭ್ಯ ಕಾಮೆಂಟ್ ಈಗ ತಮಿಳುನಾಡಿನಲ್ಲಿ ದೊಡ್ಡ ಚರ್ಚೆ ಹುಟ್ಟಾಕ್ಕಿದೆ.. ಮಹಿಳೆಯ ಬಗ್ಗೆ ಬಹಳ ಹೀನವಾಗಿ ಮಾತನಾಡಿ ರಾಧಾರವಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರ ಹೇಳಿಕೆಗೆ ಖಂಡನೆ ವ್ಯಕ್ತವಾಗ್ತಿದ್ದು, ಎಲ್ಲರೂ ನಯನತಾರ ಬೆಂಬಲಕ್ಕೆ ನಿಂತಿದ್ದಾರೆ.

ನಯನತಾರ ದೆವ್ವವಾಗಿಯೂ ನಟಿಸ್ತಾರೆ. ಆ ಕಡೆ ಹೋಗಿ ಸೀತೆ ದೇವಿಯಾಗಿಯೂ ನಟಿಸ್ತಾರೆ. ಹಿಂದೆಯೆಲ್ಲಾ ದೇವರ ಪಾತ್ರ ಮಾಡ್ಬೇಕು ಅಂದ್ರೆ, ಕೆ. ಆರ್ ವಿಜಯಾ ಅವ್ರನ್ನ ಆಯ್ಕೆ ಮಾಡಿಕೊಳ್ತಿದ್ರು. ಆದ್ರೆ ಈಗ ಆ ರೀತಿಯಿಲ್ಲ. ಯಾರು ಬೇಕಾದ್ರೂ ದೇವರ ವೇಷ ಹಾಕ್ಬೋದು. ನೋಡಿದಾಕ್ಷಣ ಕೈಎತ್ತಿ ಮುಗಿಬೇಕು ಅನ್ನಿಸುವವರು ಹಾಕಬಹುದು. ನೋಡಿದಾಕ್ಷಣ ಕರೆಯಬೇಕು ಅನ್ನಿಸುವವರು ದೇವರ ಪಾತ್ರ ಮಾಡಬಹುದು. ಈಗ ಪರಿಸ್ಥಿತಿ ಆ ರೀತಿ ಆಗ್ಬಿಟ್ಟಿದೆ.

ಹೀಗೆ ರಾಧಾರವಿ ದಕ್ಷಿಣ ಭಾರತದ ಖ್ಯಾತ ನಟಿಯನ್ನ ಕೀಳು ಭಾಷೆಯಲ್ಲಿ ಟೀಕಿಸಿ, ವಿವಾದ ಸೃಷ್ಟಿಸಿದ್ದಾರೆ.. ಗಾಯಕಿ ಚಿನ್ಮಯಿ ಶ್ರೀಪಾದ, ನಟ ವಿಶಾಲ್, ಕಮಲ್ ಹಾಸನ್, ರಾಣಾ ದಗ್ಗುಬಾಟಿ ಹೀಗೆ ಸಾಕಷ್ಟು ಜನ ನಟನಟಿಯರು ರಾಧಾರವಿ ಹೇಳಿಕೆ ವಿರೋಧಿಸಿ, ನಯನತಾರ ಬೆಂಬಲಕ್ಕೆ ನಿಂತಿದ್ದಾರೆ.. ತಮಿಳು ಚಲನಚಿತ್ರಮಂಡಳಿ ಸಹ ಹಿರಿಯ ನಟನಿಗೆ ಛೀಮಾರಿ ಹಾಕಿದೆ. ತಮ್ಮ ಬಗ್ಗೆ ರಾಧಾರವಿ ಮಾಡಿರೋ ಕಾಮೆಂಟ್ ಬಗ್ಗೆ ಪ್ರತಿಕ್ರಿಯಿಸಿರೋ ನಯನತಾರಾ, ‘ಮಹಿಳೆಯರ ಪರ ಕೀಳಾಗಿ ಮಾತನಾಡೋ ರಾಧರವಿ ಅವರಿಗೂ ಮಹಿಳೆಯೇ ಜನ್ಮ ನೀಡಿದ್ದು ಅನ್ನೋದನ್ನ ಮರೆಯಬಾರದು’ ಅಂದಿದ್ದಾರೆ.

ಪಕ್ಷದ ಶಿಸ್ತು ಉಲ್ಲಂಘನೆ ಹಾಗೂ ಪಕ್ಷಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಹೇಳಿಕೆ ನೀಡಿದ ಕಾರಣ ರಾಧಾರವಿ ಅವರನ್ನು ಡಿಎಂಕೆ ಪಕ್ಷದಿಂದ ಅಮಾನತು ಮಾಡಲಾಗಿದೆ. ಒಟ್ಟಾರೆ ರಾಧಾರವಿ ಮಾಡಿರೋ ಕೆಟ್ಟ ಕಾಮೆಂಟ್ ಕಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದೆ. ಮುಂದೆ ಇದು ಯಾವ ಸ್ವರೂಪ ಪಡೆಯುತ್ತೋ ನೋಡ್ಬೇಕು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.