ಬಾಯಿ ಬಡಾಯಿ ಆದ್ರೆ ಸಾಧನೆ ಮಾತ್ರ ಶೂನ್ಯ ಮೋದಿ ವಿರುದ್ದ ಸಿದ್ದರಾಮಯ್ಯ ಗುಡುಗು

ಚಿತ್ರದುರ್ಗ: ಕರ್ನಾಟಕದ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ – ಜೆಡಿಎಸ್ ಗೆಲ್ಲುವ ಭರವಸೆ ನಮಗಿದೆ ಮೋದಿ ದೇಶದಲ್ಲಿ ದೊಡ್ಡ ಭ್ರಮೆ ಸೃಷ್ಟಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ದ ಗುಡುಗಿದ್ದಾರೆ.

ಚಿತ್ರದುರ್ಗದಲ್ಲಿಂದು ಅಭ್ಯರ್ಥಿ ಚಂದ್ರಪ್ಪಪರ ಪ್ರಚಾರದ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್-ಜೆಡಿಎಸ್ ಗೆಲ್ಲುವ ಭರವಸೆ ನಮಗಿದೆ. ಮೋದಿ ದೇಶದಲ್ಲಿ ದೊಡ್ಡ ಭ್ರಮೆ ಸೃಷ್ಟಿಸಿದ್ದಾರೆ ಅವರ ಬಾಯಿ ಬಡಾಯಿ ಆದ್ರೆ ಸಾಧನೆ ಶೂನ್ಯವಾಗಿದೆ ಎಂದು ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಅಷ್ಟೇ ಅಲ್ಲದೇ ಸುಳ್ಳು ಹೇಳುವುದೇ ಮೋದಿಯವರ ದೊಡ್ಡ ಸಾಧನೆಯಾಗಿ ಮಾರ್ಪಟ್ಟಿದ್ದ. ಸ್ವತಂತ್ರ ಬಂದ ನಂತರ ಈ ರೀತಿ ಸುಳ್ಳು ಹೇಳುವ ಪ್ರಧಾನಿಯನ್ನು ನಾವು ನೋಡಿಲ್ಲ. ಅವರು ಜನರಿಗೆ ಭರವಸೆ ಕೊಟ್ಟು ತಪ್ಪಿರುವುದು ದೇಶಕ್ಕೆ ದ್ರೋಹ ಮಾಡಿದ್ದಂತೆ ಎಂದಿದ್ದಾರೆ.

ಇನ್ನು ಬಡವರ, ಕಾರ್ಮಿಕರ, ಅಲ್ಪಸಂಖ್ಯಾತ, ದಲಿತರ ಪರವಾಗಿ ಯಾವ ಕೆಲಸ ಮಾಡಿಲ್ಲ, ರೈತರಿಗೆ ರಕ್ಷಣೆ ಇಲ್ಲ, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಹಾಗೂ ಮಹಿಳೆರಿಗಂತೂ ರಕ್ಷಣೆ ಇಲ್ವೇ ಇಲ್ಲ ರೈತರ ಸಾಲಮನ್ನ ಮಾಡಲಿಲ್ಲ, ದೇಶದ ರೈತರು ಕಂಗಾಲಾಗಿದ್ದಾರೆ ಎಂದರು.

ಸದ್ಯ ಎರಡು ಬಾರಿ ನಾನು ಮೋದಿ ಬಳಿ ಹೋಗಿದ್ದೆ, ಸಾಲಮನ್ನಾ ಮಾಡಿ ಎಂದು ಅವರು, ಮಾತ್ರ ಜಪ್ಪಯ್ಯ ಅಂದ್ರು ಸಾಲ‌ಮನ್ನಾ ಮಾಡಲಿಲ್ಲ. ಮೋದಿ ರೈತರ ವಿರೋಧಿಯಾಗಿದ್ದಾರೆ. ಸಂವಿಧಾನದ ಬದಲಾವಣೆ ಮಾಡಲು ನೋಡುತ್ತಿದ್ದವರು ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಅದಲ್ಲದೇ ಮಾತ್ತೇತ್ತಿದ್ದರೆ, ನಾನು ಚೌಕಿದಾರ್ ಅನ್ನುತ್ತಾರೇ ಆದ್ರೆ, ಅವರು ಬಡವರ ಚೌಕಿದಾರ ಅಲ್ಲ. ಶ್ರೀಮಂತರ ಚೌಕಿದಾರ್ ಆಗಿದ್ದಾರೆ. ಮೋದಿಯವರು ಹೇಳಿತ್ತಿದ್ರು, ಅಚ್ಛೇದಿನ್ ಬರುತ್ತಿದೆ ಎಂದು ಆದ್ರೆ, ಬರಲಿಲ್ಲ, ಈ ದೇಶದ ಶ್ರೀಮಂತರಾದ ಅಂಬಾನಿ ಅಧಾನಿಗೆ ಅಚ್ಛೇದಿನ್ ಬಂದಿವೆ ಎಂದು ಮಾತನಾಡಿದ್ದಾರೆ.

ಮನ್ ಕೀ ಬಾತ್​ನಲ್ಲಿ ಬರೀ ಮಾತು ಬಿಟ್ರೇ ಮತ್ತೇನು ಮಾಡಲಿಲ್ಲ. 15ಲಕ್ಷ ಪ್ರತಿಯೊಬ್ಬರ ಅಕೌಂಟ್ಗೆ ಹಾಕ್ತಿನಿ ಅಂದ್ರು ಅದೂ ಕೂಡ ಹಾಕದೇ ಜನರಿಗೆ ನಾಮ ಹಾಕಿದ್ದರು. ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದ್ದಾರೆ. ಡೋಂಗಿಗಳಿಗೆ ಮತ ನೀಡ್ಬೇಡಿ. ನಮ್ಮ ಅಭ್ಯರ್ಥಿ ಚಂದ್ರಪ್ಪನವರಿಗೆ ಮತ ನೀಡಿ ಎಂದು ಜನರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿಕೊಂಡರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.