‘ವಿಕೆಂಡ್ ಮಸ್ತಿ’ ಚಿತ್ರತಂಡದಿಂದ ಸದ್ಯದಲ್ಲಿ ಆಡಿಯೋ ಬಿಡುಗಡೆ

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಹೊಸಬರ ಚಿತ್ರಗಳ ಪೈಕಿ ಸೈಲೆಂಟ್ ಆಗಿಯೇ ಶೂಟಿಂಗ್ ಮುಗಿಸಿರೋ ವೀಕೆಂಡ್ ಅನ್ನೋ ಕುತೂಹಲ ಶೀರ್ಷಿಕೆಯಲ್ಲಿ ಸಿನಿಮಾವೊಂದು ಸೈಲೆಂಟ್ ಆಗಿ ಹವಾ ಕ್ರಿಯೇಟ್ ಮಾಡಲು ರೆಡಿಯಾಗಿದೆ.

ಭಾರತ ಚಿತ್ರರಂದಲ್ಲಿ ಹವಾ ಸೃಷ್ಟಿಸಿ ಕನ್ನಡ ಚಿತ್ರಕ್ಕೆ ವಿಶ್ವಮಟ್ಟದಲ್ಲಿ ಖ್ಯಾತಿ ತಂದುಕೊಟ್ಟ ಕೆಜಿಎಫ್​ ಚಿತ್ರದಲ್ಲಿ ತಮ್ಮ ಧ್ವನಿ ಹಾಗೂ ನಟನೆ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದ ಹಿರಿಯ ನಟ ಅನಂತ್ ನಾಗ್, ಈ ಚಿತ್ರದಲ್ಲಿ ಮತ್ತೊಂದು ವಿಭಿನ್ನ ಹಾಗೂ ಯಂಗ್ ಅಂಡ್ ಎನರ್ಜೆಟಿಕ್ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಈ ಚಿತ್ರದ ವಿಶೇಷವಾಗಿದೆ.

ಅನಂತ್ ನಾಗ್ ಜೊತೆ ಮಿಲಿಂದ್, ಸಂಜನಾ ಬುರ್ಲಿ ಮುಂತಾದ ಯುವ ನಟ, ನಟಿಯರು ಕೂಡ ಚಿತ್ರದ ತಾರಾಗಣದಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನ ಕಥೆಯ ಮೂಲಕ ನಿರ್ದೇಶಕ ಶೃಂಗೇರಿ ಸುರೇಶ್ ನಿರ್ದೇಶಿನ ಮಾಡಿ, M/s ಮಯೂರ ಮೋಷನ್ ಪಿಕ್ಚರ್ ಅಡಿಯಲ್ಲಿ ಡಿ. ಮಂಜುನಾಥ್ ಎನ್ನುವವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸದ್ಯದಲ್ಲೇ ಆಡಿಯೋ ಅಬ್ಬರ 

ಹೌದು, ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರೋವ ವೀಕೆಂಡ್ ಚಿತ್ರತಂಡ, ಇದೀಗ ಸಖತ್ ಸೌಂಡಿನೊಂದಿಗೆ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಚಿತ್ ತಂಡ ನಿರ್ಧರಿಸಿದೆ.

ಇದೇ ಬುಧವಾರ ಮಾರ್ಚ್ 27ರಂದು ಸಂಜೆ ಚಿತ್ರತಂಡ ಆಡಿಯೋ ಬಿಡುಗಡೆಯಾಗಲಿದ್ದು, ಹೀಗಾಗಿ ಚಿತ್ರದ ನಿರ್ದೇಶಕರ ಹಾಗು ಚಿತ್ರತಂಡ ಸಖತ್ ಜೋಷ್​ನಲ್ಲಿದೆ. ಇನ್ನು ವಿಶೇಷ ಅಂದ್ರೆ, ಈ ಚಿತ್ರಕ್ಕೆ ಬೆಂಗಳೂರಿನಲ್ಲೇ ಬಹುಕಾಲದಿಂದ ವಾಸವಾಗಿರುವ ಶ್ರೀಲಂಕಾ ಮೂಲದ ಯುವ ಸಂಗೀತ ನಿರ್ದೇಶಕ ಮನೋಜ್ ವಿಕೆಂಡ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.