BSNL​​ ಸೇವೆ ಇರುವ ಕಡೆ ವಿದ್ಯುತ್​ ಸಂಪರ್ಕ ಕಡಿತ ಬೇಡ – ರಾಜ್ಯಕ್ಕೆ ಟೆಲಿಕಾಂ ಇಲಾಖೆ ಪತ್ರ

ನವದೆಹಲಿ: ಕಠಿಣ ಆರ್ಥಿಕ ಒತ್ತಡವಿದ್ದರು ಮುಂಬರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ರಾಜ್ಯ ನಿರ್ವಾಹಕರು ಬಿಎಸ್​ಎನ್​ಎಲ್​/ಎಂಟಿಎನ್​ಎಲ್ ಟೆಲಿಕಾಮ್​ನ ವಿದ್ಯುತ್ ಸಂಪರ್ಕವನ್ನು ತೆಗೆಯಬಾರದು ಎಂದು ಟೆಲಿಕಾಂ ಇಲಾಖೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್​ಎನ್​ಎಲ್) ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದು, ಸಾಕಷ್ಟು ಟೆಲಿಕಾಮ್ ಕಂಪನಿಗಳಿಗೆ ಸ್ಪರ್ಧೆಯೊಡ್ಡುವ ಭರದಲ್ಲಿ ಸಂಸ್ಥೆಯು ನಷ್ಟಕ್ಕೆ ಒಳಗಾಗಿದ್ದು, ವಿದ್ಯುತ್ ಬಿಲ್​ ಕಟ್ಟಲು ಸಹ ತೊಂದರೆ ಉಂಟಾಗಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆಂದು ಟೆಲಿಕಾಂ ಇಲಾಖೆಯ ಕಚೇರಿಯ ಮೂಲಗಳು ತಿಳಿಸಿವೆ.

ಈ ವಿಚಾರವಾಗಿ ಬಿಎಸ್​ಎನ್​ಎಲ್​ಗೆ ಆರ್ಥಿಕವಾಗಿ ಬೆಂಬಲ ನೀಡಲು ಪ್ರತ್ಯೇಕ ಕಾರ್ಯ ನಿರ್ವಹಿಸಲು ಟೆಲಿಕಾಂ ಇಲಾಖೆ ನಿರ್ಧರಿಸಿದೆ. ಇಂತಹ ಸಮಯದಲ್ಲಿ  ರಾಜ್ಯ ವಿದ್ಯುತ್ ನಿಗಮ ಮಂಡಳಿ ಸರ್ಕಾರ ವಿವಿಧ ಇಲಾಖೆಯ ಟೆಲಿಕಾಂ ಸಂಪರ್ಕವನ್ನ ಕಡಿತ ಮಾಡದೆ ಅವರಿಗೆ ಸೇವೆಯನ್ನು ಒದಗಿಸಬೇಕು ಎಂದು ತಿಳಿಸಿದೆ.

ಎಲ್ಲದಕ್ಕಿಂತ ಹೆಚ್ಚಾಗಿ ಅತೀ ಹೆಚ್ಚು ಬಿಎಸ್​ಎನ್​ಎಲ್​/ಎಂಟಿಎನ್​ಎಲ್ ವಿದ್ಯುತ್ ಸಂಪರ್ಕ ಹೊಂದಿರುವಂತ ಹೆಚ್ಚು ಸಾಮರ್ಥ್ಯ ನೀಡುವಂತಹ ಇಲಾಖೆಗಳಲ್ಲಿ ಟೆಲಿಕಾಂ ಸೇವೆಯನ್ನು ಒದಗಿಸಬೇಕು ಎಂದು ಟೆಲಿಕಾಂ ಇಲಾಖೆಯು ತಿಳಿಸಿದೆ.

ಈಗಿರುವ ಸಂದರ್ಭದಲ್ಲಿ ದಯಮಾಡಿ ಎಲ್ಲ ರಾಜ್ಯ ವಿದ್ಯುತ್ ನಿಗಮ ಮಂಡಳಿಯು ರಾಜ್ಯಗಳಲ್ಲಿ ಇರುವ ಬಿಎಸ್​ಎನ್​ಎಲ್​ನ ಎಲ್ಲ ಟೆಲಿಕಾಂ ಸಂಪರ್ಕ ಹೊಂದಿರುವ ಇಲಾಖೆಗಳಲ್ಲಿ ತಕ್ಷಣವೇ ಯಾವುದೇ ರೀತಿ ತಡ ಮಾಡದೇ ಸೇವೆಯನ್ನು ಓದಗಿಸುವಂತೆ ಕೊನೆಯ ಪಕ್ಷ ಚುನಾವಣೆಯ ಮುಗಿಯುವ ತನಕ ಸೇವೆಯನ್ನು ನಿಡುವಂತೆ  ನಿರ್ದೇಶನ ನೀಡಬೇಕು ಎಂದು ತಿಳಿಸಿದೆ.

ಇತ್ತೀಚಿಗಷ್ಟೇ ಬಿಎಸ್​ಎನ್​ಎಲ್​ನಲ್ಲಿ ಕೆಲಸ ಮಾಡುತ್ತಿರುವಂತ ಉದ್ಯೋಗಿಗಳಿಗೆ ವೇತನ ನೀಡದೆ ಕೆಲವು ತಿಂಗಳ ಹಣವನ್ನು ಉಳಿಸಿಕೊಂಡಿತ್ತು ಅದನ್ನು ಕೂಡ ಕೆಲವುದಿನಗಳ ಹಿಂದೆಯಷ್ಟೇ ಆ ಸಮಸ್ಯೆ ಬಗೆಹರಿಸಿದೆ ಅದರ ಬೆನ್ನಲ್ಲೆ ಈಗ ಈ ಸಮಸ್ಯೆಯಲ್ಲಿ ಟೆಲಿಕಾಂ ಇಲಾಖೆ ಸಿಲುಕಿದೆ.

Recommended For You

Leave a Reply

Your email address will not be published. Required fields are marked *