‘ರಸ್ತೆ ಸರಿಯಿಲ್ಲ ಅಂದ್ರೆ ಕುಮಾರಸ್ವಾಮಿ ಬೇಕು ಆದ್ರೆ, ವೋಟು ಮಾತ್ರ ಮೋದಿಗಾ?’- ಸಿಎಂ ಪ್ರಶ್ನೆ

ಬೆಂಗಳೂರು: ತಿಳುವಳಿಕೆ ಇಲ್ಲದ ಜನರಿದ್ದಾರೆ ವೋಟು ಮಾತ್ರ ಮೋದಿಗೆ, ಶಾಲೆ-ಕಾಲೇಜುಗಳಿಗೆ ಮಾತ್ರ ಈ ಕುಮಾರಸ್ವಾಮಿ, ರೇವಣ್ಣ ಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನ ಜೆಪಿ ಭವನದಲ್ಲಿ ಮಾತನಾಡಿದ ಸಿಎಂ, ಪ್ರಧಾನಿ ಮೋದಿ ಯುವ ಜನಾಂಗವನ್ನ ದಾರಿ ತಪ್ಪಿಸುವಂತಹ ಕೆಲಸ ಮಾಡಿದ್ದಾರೆ. ಈ ದೇಶದ ಗಡಿಯನ್ನ ರಕ್ಷಣೆ ಮಾಡುವವರು ಅಲ್ಲಿನ  ಸೈನಿಕರು, ಮೋದಿ ಅಲ್ಲ. ಚೌಕಿದಾರ ಅಂತ ಯಾರ್ ಅಂದ್ರೆ ನಮಗೇನು? ರಸ್ತೆ ಸರಿಯಿಲ್ಲ ಅಂದ್ರೆ ಕುಮಾರಸ್ವಾಮಿ ಬೇಕು ಆದ್ರೆ, ವೋಟು ಮಾತ್ರ ಮೋದಿಗಾ? ಎಂದು ಮೋದಿಪರ ಇರುವವರನ್ನು ಪ್ರಶ್ನಿಸಿದ್ದಾರೆ.

ಇನ್ನು, ಕಾಂಗ್ರೆಸ್ ನಾಯಕರು ನಮಗೆ 8 ಸ್ಥಾನ ಕೊಟ್ಟಿದ್ದಾರೆ. ಆ 8 ಸ್ಥಾನಗಳನ್ನ ನಾವು ತುಂಬಿಸಿಕೊಟ್ರೆ ದೇವೇಗೌಡರಿಗೆ ಒಂದು ಬಲ ಬರುತ್ತೆ,  ಎಂಟಕ್ಕೆ ಎಂಟು ಲೋಕಸಭಾ ಕ್ಷೇತ್ರಗಳನ್ನ  ಗೆದ್ದುಕೊಟ್ರೆ, ದೇವೇಗೌಡರಿಗೆ ಶಕ್ತಿ ಬರುತ್ತದೆ. ಕೊಡಿ ಈ ಪಕ್ಷಕ್ಕೆ ಮತವನ್ನ ಹೊಸ ರಾಜಕೀಯ ಬೆಳವಣಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ.

ಅಲ್ಲದೇ ಅಭಿವೃದ್ಧಿಯ ಮೇಲೆ ಮತ ಕೇಳುತ್ತಿದ್ದೇನೆ. ರೈತರು ನೆಮ್ಮದಿಯಿಂದ ಆರ್ಥಿಕವಾಗಿ ಸದೃಢರಾಗಲು ಅನುಕೂಲ ಮಾಡಿದ್ದೇನೆ. ನನಗೆ ಎರಡು ವರ್ಷ ಸಮಯ ಕೊಡಿ, ನಾನು ಮೋದಿಯಂತೆ  ಸಮಯ ಕೇಳಿಲ್ಲ. ರಾಹುಲ್ ಗಾಂಧಿ ನಂಬಿಕೆ ಇಟ್ಟು  ಕೊಟ್ಟಿದ್ದಾರೆ ಎಂದು ನುಡಿದರು.

ಸದ್ಯ ಈ ಚುನಾವಣೆಯಲ್ಲಿ ಮೈತ್ರಿ ರಚನೆಯ ಉದ್ದೇಶ, ೨೮ ಕ್ಷೇತ್ರ ಗೆಲ್ಲುವುದು. ಕಾರ್ಯಕರ್ತರಿಗೂ ಹಾಗೂ ಮಾಧ್ಯಮ ಮಿತ್ರರಿಗೂ ಕೈ ಮುಗಿದು ಅಭಿನಂದಿಸುತ್ತೇನೆ. ಚಿಕ್ಕಬಳ್ಳಾಪುರ, ಮೈಸೂರಲ್ಲಿ ಶಕ್ತಿ ಇಲ್ವೇ..? ಕಾರ್ಯಕರ್ತರು ನಂಬಿ ಒಗ್ಗಟ್ಟಾಗಿ ಹೊರಟ್ಟಿದ್ದಾರೆ ಅವರನ್ನ ಅಭಿನಂದಿಸುತ್ತೇನೆ. ಕೆಲ ಕ್ಷೇತ್ರದಲ್ಲಿ ಭಿನ್ನಮತ ಇದೆ ಅವನ್ನ ನಾನು ಅಷ್ಟಾಗಿ ಪರಿಣಿಸಲ್ಲ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಸಿದ್ದಾರೆ.

Recommended For You

Leave a Reply

Your email address will not be published. Required fields are marked *