ಚುನಾವಣೆಯಲ್ಲಿ ಸುಮಲತಾ ಕಟ್ಟಿಹಾಕಲು ಆಪರೇಷನ್ ಎಂಎಲ್​ಎಗೆ ಮುಂದಾದ ಸಿಎಂ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಮಂಡ್ಯ ಶಾಸಕರೊಟ್ಟಿಗೆ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಲು ಮುಂದಾಗಿದ್ದಾರೆ.

ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ‌ನಡೆಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಡ್ಯದಿಂದ ಸುಮಲತಾ ಸ್ಪರ್ಧೆಯಿಂದ ಆಗುವ ಪರಿಣಾಮಗಳೇನು? ಪುತ್ರ ನಿಖಿಲ್ ಗೆಲುವಿಗೆ ಕ್ಷೇತ್ರದಲ್ಲಿ ಮಾಡಿಕೊಳ್ಳಬೇಕಾದ ತಂತ್ರಗಳ ಬಗ್ಗೆ ಚರ್ಚೆ, ಸ್ಪರ್ಧೆ ಕುರಿತು ಸುಮಲತಾ ಹೇಳಿಕೆಗಳು ಬಗ್ಗೆ ಚರ್ಚೆ ನಡೆಸಲು ಚಿಂತನೆ ನಡೆಸಿದ್ದಾರೆ.

ಸಿನಿಮಾ ನಟರ ಪ್ರಚಾರದಿಂದ ಸುಮಲತಾ ಪರ ವ್ಯಕ್ತವಾಗುವ ಜನರ ಒಲವೇನು? ಆ ಜನರನ್ನು ತಮ್ಮತ್ತ ಸೆಳೆಯುವುದಕ್ಕೆ ಏನು ತಂತ್ರಗಳು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ಹೀಗೆ ಮತ್ತಿತ್ತರ ತಂತ್ರಗಳ ಬಗ್ಗೆ ಮಂಡ್ಯದ ಜೆಡಿಎಸ್ ಶಾಸಕರು ಹಾಗೂ ಸಚಿವರ ಜೊತೆ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಲು ತೀರ್ಮಾನ ಮಾಡಿದ್ದಾರೆ.

ಸದ್ಯ ಸ್ಯಾಂಡಲ್​ವುಡ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಸಮಲತಾ ಅಂಬರೀಶ್ ಬಹಿರಂಗವಾಗಿ ಬೆಂಬಲ ಸೂಚಿಸಿರುವ ಹಿನ್ನೆಲೆ ಸಿಎಂ ಕುಮಾರಸ್ವಾಮಿ ಅದರ ಕುರಿತು ಹೆಚ್ಚು ಚರ್ಚೆ ನಡೆಸಿ ಹೇಗೆ ಗೆಲ್ಲಬಹುದು ಎಂಬ ಆಲೋಚನೆಯಲ್ಲಿದ್ದಾರೆ.

Recommended For You

Leave a Reply

Your email address will not be published. Required fields are marked *