ರಾಜಾಹುಲಿ, ಐರಾವತ ಬಂದರೂ ಅಷ್ಟೇ, ಮಂಡ್ಯ ಬೇಧಿಸೋ ಅಭಿಮನ್ಯು ನಿಖಿಲ್​ ಅಂತೆ..!

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆ ವಾರ್ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಸುಮಲತಾಗೆ ಸ್ಯಾಂಡಲ್​ವುಡ್ ಸ್ಟಾರ್ ನಟರು ಬೆನ್ನಿಗೆ ನಿಂತ ಬೆನ್ನಲ್ಲೆ ಜೆಡೆಎಸ್ ಕಾರ್ಯಕರ್ತರ ಆಕ್ರೋಶ ಸಾಮಾಜಿಕ ಜಾಲತಾಣದಲ್ಲಿ ಹೊರಬರುತ್ತಿದೆ.

ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ಹಿನ್ನೆಲೆ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಾರೇ ಬಂದರೂ ನಾವೂ ಮರುಳಾಗೋಲ್ಲ,  ಪೂರ್ತಿ ಸಿನಿಮಾ ಇಂಡಸ್ಟ್ರಿ ಬಂದ್ರೂ ಗೆಲ್ಲೋದೆ ನಿಖಿಲ್. ಕಾವೇರಿ ಗಲಾಟೆ ಟೈಮಲ್ಲಿ ಮಲಗಿದ್ದ ನಟರನ್ನ,  ಮಂಡ್ಯ ರಾಜಕೀಯಕ್ಕೆ ಎದ್ದು ಬರುವಂತೆ ಮಾಡಿದವರಿಗೆ ಧನ್ಯವಾದ ಎಂದು ಟೀಕಿಸುತ್ತಿದ್ದಾರೆ.

ಇನ್ನು ರಾಜಾಹುಲಿ ಬಂದರೂ ಅಷ್ಟೇ, ಐರಾವತ ಬಂದರೂ ಅಷ್ಟೇ. ಮಂಡ್ಯ ಚಕ್ರವ್ಯೂಹ ಭೇದಿಸೋದು ಅಭಿಮನ್ಯು ನಿಖಿಲ್ ಕುಮಾರಸ್ವಾಮಿ ಎಂದು ದರ್ಶನ್, ಯಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಜೆಡಿಎಸ್ ಕಾರ್ಯಕರ್ತರು ಗುಡುಗಿದ್ದಾರೆ.

 

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.