ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿದ್ದಕ್ಕೆ ಸತೀಶ್ ಜಾರಕಿಹೊಳಿ ಈ ರೀತಿ ಹೇಳಿದ್ದೇಕೆ..?

ದೆಹಲಿಗೆ ಬೇರೆ ಬೇರೆ ಕೆಲಸದ ಪ್ರಯುಕ್ತ ರಮೇಶ್ ಜಾರಕಿಹೊಳಿ ಹೋಗಿರಬೇಕು.ಅದನ್ನು ಬಿಜೆಪಿ ಪರ ಹೋಗಿದ್ದಾರೆ ಅನ್ನಲು ಸಾಧ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಭಾನುವಾರ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ  ದೆಹಲಿಗೆ ಯಾಕೇ ಹೋಗಿದ್ದಾರೆ ಗೊತ್ತಿಲ್ಲ, ದೆಹಲಿ ಯಾರೇ ಹೋದ್ರು ರಾಜಕೀಯಕ್ಕೆ ಹೋಗಬೇಕು ಅಂತ ಏನು ಇಲ್ಲ ಅಲ್ವಾ ಎಂದರು.

ಗೋಕಾಕ ಮತಕ್ಷೇತ್ರದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡ್ತಾರೆ

ರಮೇಶ್ ಜಾರಕಿಹೊಳಿ ಪಕ್ಷದಿಂದ ಅಂತರ ಕಾಯ್ದುಕೊಂಡ ವಿಚಾರವಾಗಿ ಪ್ರತಿಕ್ರಿಯೇ ನೀಡಿದ ಅವರು ರಮೇಶ್ ಜಾರಕಿಹೊಳಿ 20 ವರ್ಷದಲ್ಲಿ ಯಾವುದೇ ಸಭೆಗೆ ಬಂದಿಲ್ಲ.ಮಂತ್ರಿ ಆಗಿದ್ದಾಗ ಸಭೆಗೆ ಹಾಜರಾಗಿದ್ದಾರೆ. ಈಗ ಲೋಕಸಭೆ ಚುನಾವಣೆಯಲ್ಲಿ ಗೋಕಾಕ ಮತಕ್ಷೇತ್ರದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡ್ತಾರೆ ಎಂದು ತಿಳಿಸಿದರು.

ನಿರ್ಧಾರ ಮಾತ್ರ ರಾಹುಲ್ ಗಾಂಧಿ ಅವರಿಗೆ ಬಿಟ್ಟದ್ದು

ಬೆಳಗಾವಿ, ಚಿಕ್ಕೋಡಿ ಲೋಕಸಭೆ ಅಭ್ಯರ್ಥಿ ಇನ್ನೂ ಅಂತಿಮ ಆಗಿಲ್ಲ. ಬೆಳಗಾವಿ ಲೋಕಸಭೆಗೆ ಸಿ.ಎಸ್. ಸಾಧುನವರು ಮತ್ತು ಶಿವಕಾಂತ ಸಿದ್ನಾಳ ಇಬ್ಬರೇ ಇದ್ದಾರೆ. ಚಿಕ್ಕೋಡಿಯಿಂದ ಸಂಸದ ಪ್ರಕಾಶ ಹುಕ್ಕೇರಿ ಮಾತ್ರ ಅಭ್ಯರ್ಥಿ.19 ರ ನಂತರ ಅಭ್ಯರ್ಥಿ ಫೈನಲ್ ಆಗ್ತಾರೆ. ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸುವ ಬಗ್ಗೆ ಸಿದ್ದರಾಮಯ್ಯ, ಗುಂಡೂರಾವ್ ಹೇಳಿದ್ದಾರೆ. ನಿರ್ಧಾರ ಮಾತ್ರ ರಾಹುಲ್ ಗಾಂಧಿ ಅವರಿಗೆ ಬಿಟ್ಟದ್ದು ಎಂದರು.