ರಾಯರ ಸನ್ನಿಧಿಯಲ್ಲಿ ನಟ ಜಗೇಶ್ ಜನ್ಮದಿನ ಆಚರಿಸಿದ್ದು ಯಾಕೆ ಗೊತ್ತಾ..?

ಆಡು ಮುಟ್ಟದ ಸಪ್ಪಿಲ್ಲ.. ಇವ್ರ ಮಾಡದ ಕೆಲಸವಿಲ್ಲ. ಕಲಾವಿದರಾಗಿ ಚಿತ್ರರಂಗಕ್ಕೆ ಬಂದವರು ಇಂದು ಕಲಾ ಸೇವೆಯ ಜೊತೆಗೆ ಜನ ಸೇವೆಯನ್ನು ಮಾಡುತ್ತಿರುವ ರಾಯರ ಆರಾಧಕ. ಇವ್ರ ಸಾಧನೆಯನ್ನು ನೋಡಕ್ಕೆ ಬಿಚ್ಚಿಡಬೇಕು ಕನ್ನಡ್ಕ. ಪಕ್ಕಾ ಹಳ್ಳಿ ಮುಖ, ಇವ್ರ ಪ್ರತಿಭೆ ಸಾಗಿದೆ ದಿಲ್ಲಿ ತನಕ. ಅಪ್ಪು ಹುಟಿದಬ್ಬದಿನವೇ ಇವ್ರುಗೆ ಒಂದೊಂದು ವರ್ಷ ಜಾಸ್ತಿ ಆಗುತ್ತೆ.

ರಾಯರ ಸನ್ನಿದಿಯಲ್ಲಿ ಜನ್ಮದಿನ ಆಚಾರಿಸಿದ್ರು ಜಗ್ಗಣ್ಣ..

37 ಸಂವತ್ಸರದಿಂದ ಸಾಗಿದೆ ಜಗೇಶ್​​​​ ಹಾಸ್ಯ ದಿಬ್ಬಣ್ಣ..!

ಐ ತೆರಿ ಲಕಡಿ ಪಕಡಿ ಜುಮ್ಮಾ; ಜಗಣ್ಣನ ಪದ್ಮಿನಿ ಕಾರ್ ನೋಡಮ್ಮ..!

ಜಗ್ಗೇಶ್​ ಬರ್ತ್​ಡೇಗೆ ಪ್ರೀಮಿಯರ್ ಪದ್ಮಿನಿ ಟೀಸರ್ ಬಂತಮ್ಮ !

ನವರಸ ನಾಯಕ ಜಗೇಶ್ ಬಣ್ಣದ ಅಂಗಳದಲ್ಲಿ ಕುಣಿದಾಡಲು ಶುರು ಹಚ್ಚಿಕೊಂಡು ಹತ್ತ್ ಹತ್ರಾ 37 ವರ್ಷವಾಯ್ತು , ಅವರ ದೇಹಕ್ಕೆ ಇವತ್ತಿಗೆ 55 ವರ್ಷವಾಯ್ತು.. ಅದ್ಯಾವಾಗ ಐ ತೆರಿ ಲಕಡಿ ಪಕಡಿ ಜುಮ್ಮಾ ಅಂದ್ರೋ ಅವತ್ತೇ ಕನ್ನಡಿಗರ ಮನದಲ್ಲಿ ನವರಸ ನಾಯಕ ಭದ್ರ ಭೂನಾದಿ ಹಾಕಿದ್ರು. ನಗು ಬರದ ಮುಶುಂಡಿಗು ಜಗ್ಗಣ್ಣ ಕಾಮಿಡಿ ಕಡಲು ನಗೆಯ ಸುನಾಮಿಯನ್ನು ಹರಿಸಿ ಬಿಡುತ್ತೆ..

ಖಳ ನಟನಾಗಿ ಇಂಡಸ್ಟ್ರಿಗೆ ಬಲಗಾಲಿಟ್ಟು , ಕಾಮಿಡಿಯನ್,! ಅದ್ರಲ್ಲೂ ಹೀರೋ ಆಗಿ ಕಾಮಿಡಿಯನ್ ಆಗಿದ್ದು ಜಗ್ಗೇಶ್ ಫಸ್ಟು.. ಡಾ.ರಾಜ್ ಕಂಡ್ರೇ ಜಗ್ಗೇಶ್ ಅವರಿಗೆ ಆಕಾಶ, ಜಗ್ಗೇಶ್ ನಟನೆಯಂದ್ರೆ ಅಣ್ಣೋರಿಗೆ ಆನಂದವೋ ಆನಂದ..  ಒಂದೊದಾಗಿಯೇ ಕಷ್ಟಗಳ ಮೆಟ್ಟಿಲನ್ನು ಏರುತ್ತಾ ಸಾಧನೆಯ ಗೋಪುರದಲ್ಲಿ ಕುಳಿತವರು ಜಡೆ ಮಾಯಸಾಂದ್ರದ ಪೋರ ಜಗೇಶ್..

ನೂರಕ್ಕೂ ಹೆಚ್ಚು ಚಿತ್ರದಲ್ಲಿ ಬಣ್ಣ ಹಚ್ಚಿ ಕಚಗುಳಿಯನ್ನು ಇಟ್ಟವರು. ಈ ಗ್ಯಾಪ್​ನಲ್ಲೇ ಜನ ಸೇವೆಯನ್ನು ಮಾಡಿದ್ದಾರೆ.. ಎಮ್​ ಎಲ್​ ಎ . ಎಮ್​ ಎಲ್​​ ಸಿ ಆಗಿದ್ದಾರೆ.. ಸಿನಿರಂಗ ರಾಜಾಕೀಯ ರಂಗಗಳ ನಡುವೆ ರಿಯಲಿಟಿ ಶೋಗಳಲ್ಲಿ ತೀರ್ಪುಗಾರಾಗಿ ಉಪಯುಕ್ತ ಸಲಹೆಯ ಜೊತೆಗೆ ಹಾಸ್ಯದ ಹೊನಲನ್ನು ಹರಿಸುತ್ತಿದ್ದಾರೆ.. ಸಿನಿಮಾ ನಿರ್ಮಾಣ ಮಾಡಿದ್ದಾರೆ , ನಿರ್ದೇಶನ ಮಾಡಿದ್ದಾರೆ.. ನಂಬಿ ಬಂದವರಿಗೆ ಸಹಾಯದ ಹಸ್ತವನ್ನು ಚಾಚಿದ್ದಾರೆ..

ಸದ್ಯ ಜಗ್ಗೇಶ ನಟನೆಯ ಪ್ರೀಮಿಯರ್ ಪದ್ಮಿನಿ ಸಿನಿಮಾ ಬೆಳ್ಳಿತೆರೆಯ ಮೇಲೆ ಟ್ರಾವಲಿಂಗ್ ಮಾಡಲು ಸಜ್ಜಾಗಿದೆ.. ಕಿರುತೆರೆಯ ನಿರ್ಮಾಪಕಿ ಶೃತಿ ನಾಯ್ಡು ಪ್ರೀಮಿಯರ್ ಪದ್ಮನಿಗೆ ಬಂಡವಾಳದ ಪೇಟ್ರೋಲ್ ಹಾಕಿದ್ದಾರೆ.. ಇನ್ನೇನು ಕೆಲವೇ ದಿನಗಳಲ್ಲಿ ಜಗ್ಗಣ್ಣ ಪ್ರೀಮಿಯರ್ ಪದ್ಮಿನಿ ಕಾರ್ ಪ್ರೇಕ್ಷಕರ ಮುಂದೆ ಬರಲಿದೆ.. ಈ ಗ್ಯಾಪ್​​ನಲ್ಲೇ ಪ್ರೀಮಿಯರ್ ಪದ್ಮನಿ ತಂಡದವರು ಜಗ್ಗಣ್ಣನ ಮೇಲಿ ಪ್ರೀತಿಗಾಗಿ ಹೊಸ ಟೀಸರ್​ನ ಬಿಡುಗಡೆ ಮಾಡಿದ್ದಾರೆ..

ಪ್ರೀಮಿಯರ್ ಪದ್ಮನಿ ಆದ್ಮೆಲೆ ಜಗ್ಗಣ್ಣನ ಕೈಯಲ್ಲಿ ತೋತಾಪುರಿ..!

ಕಾಳಿದಾಸ ಕನ್ನಡ ಮೇಷ್ಟು ಆಗಲಿದ್ದಾರೆ ನವರಸ ನಾಯಕ..!

ಸದ್ಯ ಪ್ರೀಮಿಯರ್ ಪದ್ಮನಿ ಚಿತ್ರದ ನಂತರ ಜಗ್ಗಣ್ಣ ಬಣ್ಣ ಹಚ್ಚಿರೋ ಸಿನಿಮಾ ತೋತಾಪುರಿ.. ಈ ಚಿತ್ರದ ನೀರ್ ದೋಸೆ ಖ್ಯಾತಿಯ ವಿಜಯ ಪ್ರಸಾಸ್ ನಿರ್ದೇಶನ ಮಾಡಿದ್ದಾರೆ.. ತೋತಪುರಿ ಚಿತ್ರದ ನಂತರ ಕವಿರಾಜ್ ಕಲ್ಪನೆಯ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ಜಗ್ಗೇಶ್ ಕಾಣಿಸಿಕೊಳ್ಳಿದ್ದಾರೆ..

ಮೊದಲೇಲ್ಲ ಜಗ್ಗೇಶ್ ಅವರು ಅಭಿಮಾನಿಗಳೊಟ್ಟಿಗೆ ಬರ್ತ್​​ಡೇಯನ್ನು ಆಚಾರಿಸುತ್ತಿದ್ರು. ಕಳೆದು ಮೂರ್ನಾಲ್ಕು ವರ್ಷದಿಂದ ಮಂತ್ರಾಲಯದಲ್ಲಿ ತಮ್ಮ ಜನ್ಮದಿನವನ್ನು ಆಚಾರಿಸಿಕೊಳ್ಳುತ್ತಿದ್ದಾರೆ.. ಶ್ರೀ ರಾಘವೇಂಧ್ರ ಸ್ವಾಮಿಗಳ ಮುಂದೆ ಕುತ್ತು ತಮ್ಮನ ತಾವೇ ಮರಿಯುತ್ತಾರೆ.

ಇಂತಿಪ್ಪ ಜಗ್ಗಣ್ಣನಿಗೆ ಶ್ರೀ ಗುರು ಸಾರ್ವಭೌಮರು ಆಯುರ್ ಆಶಸ್ಸು ಯಶಸ್ಸು ಕೊಡುವುದ್ರ ಜೊತೆಗೆ ಮತ್ತಷ್ಟು ಕನ್ನಡಿಗರನ್ನು ರಂಜಿಸೋ ಶಕ್ತಿಕೊಡಲೆಂದು ಪ್ರತಿಸೋಣ.