ಚಾಲೆಂಜಿಂಗ್​ ಸ್ಟಾರ್ ದರ್ಶನ್​​​​ ಖಡಕ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ ಗೊತ್ತಾ…?

ಬೆಂಗಳೂರು: ನೇರ ನಿಷ್ಟುರವಾದಿ ಚಾಲೆಂಜಿಂಗ್ ಸ್ಟಾರ್ ದರ್ಶನ್. ತನಗನಿಸಿದ್ದನ್ನು ಹಿಂದೆ ಮುಂದೆ ನೋಡದೆ ಆಡಿ ಬಿಡ್ತಾರೆ. ಒಂಥರ ಫಿಲ್ಟರ್ ಲೇಸ್ ಮ್ಯಾನ್. ಆ ದುಷ್ಟ ಶಕ್ತಿಗಳಿಗೆ ಈಗ ದಾಸ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇನ್ನೇನಿದ್ರು ಮಾತಲ್ಲ , ಶಿಕ್ಷಿಸೋದೆ ಎಂದು ಘರ್ಜಿಸಿದ್ದಾರೆ. ಅಷ್ಟಕ್ಕು ಯಾರ ಮೇಲೆ ಯಜಮಾನ್ರು ಗರಂ ಆಗಿದ್ದಾರೆ. ಡಿ ಬಾಸ್ ದೃಷ್ಟಿಯಲ್ಲಿ ಯಾರಿಗೆ ಶಿಕ್ಷೆ ಆಗಬೇಕು.

ಚಾಲೆಂಜಿಂಗ್ ಸ್ಟಾರ್ ದಾಸ ದರ್ಶನ್ ನವರಿಗೆ ಬಣ್ಣದ ಮೇಲೆ ಎಷ್ಟು ಆಸಕ್ತಿ ಅಭಿಮಾನ ವಿದೆಯೋ ಅಷ್ಟೆ ಆಸಕ್ತಿ ಪ್ರಕೃತಿ , ವನ್ಯ ಜೀವಿಗಳ ಮೇಲೆ ಇದೆ. ಪ್ರಸ್ತುತ ದರ್ಶನ್ ಕರ್ನಾಟಕ ಅರಣ್ಯ ವನ್ಯ ಜೀವಿ ಇಲಾಖೆಯ ಗೌರವ ರಾಯಭಾರಿ. ಬಿಡುವಿದ್ದಾಗ ಅರಣ್ಯ ಗಳಿಗೆ ಭೇಟಿ ಕೊಟ್ಟು ಸುಂದರ ಕಾಡು ಮೇಡಗಳ ಸೊಬಗನ್ನು , ಪ್ರಾಣಿ ಪಕ್ಷಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಸಂತೋಷ ಪಡುತ್ತಿರುತ್ತಾರೆ.

ದಚ್ಚು ತೆಗೆದ ಫೋಟೋದಿಂದ ಅರಣ್ಯ ಇಲಾಖೆಗೆ ಆದಾಯ..!?

ತಮ್ಮ ಮೈಸೂರಿನ ಫಾರ್ಮ್ ಹೌಸ್​​​ನಲ್ಲಿ ಸಾಕಷ್ಟು ಮರಗಿಡ ಪ್ರಾಣಿ ಪಕ್ಷಿಗಳನ್ನು ಸಾಕಿ ಸಲುಗುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬಂಡಿಪುರ ಅಭಯಾರಣ್ಯ ಕಾಡ್ಗಿಚ್ಚಿನ ಕೆನ್ನಾಲಿಗೆ ಬಲಿಯಾಗಿತ್ತು. ಸಾವಿರಾರು ಎಕ್ಕೆರೆ ಕಾಡು ಹಾಗೂ ಮೃಗ ಖಗಗಳು ಬೆಂಕಿಗೆ ಆಹುತಿಯಾಗಿತ್ತು. ಈ ಬಗ್ಗೆ ದರ್ಶನ್ ಕೂಡ ಪ್ರತಿಕ್ರಿಯೆಸಿದ್ರು. ತಮ್ಮ ಅಭಿಮಾನಿಗಳಿಗೆ ಕಾಡಿನ ಸಮಸ್ಯೆಗೆ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ರು.

ಅರಣ್ಯರಕ್ಷಣೆಗೆ ಸ್ಯಾಂಡಲ್​​ವುಡ್​​ ಯಜಮಾನನ ಸಹಾಯ..!

ಅರಣ್ಯ ಬೆಂಕಿಗೆ ಬಲಿಯಾಗುತ್ತಿರುವುದ್ರ ಬಗ್ಗೆ ದರ್ಶನ್ ಈಗ ಮತ್ತೊಮ್ಮೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನ ಕಬ್ಬನ್ ಪಾರ್ಕನಲ್ಲಿ ಆಯೋಜಿಸಿದ್ದ ಮ್ಯಾರೆಥನ್ ಉದೇಶಿಸಿ ಮಾತನಾಡಿದ ದರ್ಶನ್ ಕಾಡಿಗೆ ಬೆಂಕಿ ಹಾಕೋರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಇಂಟರ್ನ್ಯಾಷನಲ್ ಫಾರೆಸ್ಟ್ ದಿನಾಚರಣೆ ಪ್ರಯುಕ್ತವಾಗಿ ಅರಣ್ಯದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದಕ್ಕೆ ರನ್ ಫಾರ್ ಗ್ರೀನ್ ಕರ್ನಾಟಕ ವಾಕ್ ಥಾನ ಏರ್ಪಡಿಸಲಾಗಿತ್ತು. ಈ ಅರಣ್ಯ ಜಾಗೃತಿ ಕಾರ್ಯಕ್ರಮಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ, ನಟ ದರ್ಶನ್ ಭಾಗವಹಿಸಿದ್ದರು. ನಟ ದರ್ಶನ ಸ್ವತಃ ತಾವೇ ಫೋಟೋಗ್ರಫಿ ಮಾಡಿ, ಅದ್ರಿಂದ ಬಂದಿರುವ ಮೊತ್ತವನ್ನು ಅರಣ್ಯ ರಕ್ಷಣೆಗೆ ನೀಡಿದ್ದಾರೆ.

ಆ ದುಷ್ಟರಿಗೆ ಚಾಲೆಂಜಿಂಗ್​ ಸ್ಟಾರ್​​​​ ಖಡಕ್ ವಾರ್ನಿಂಗ್ ..!

ಈ ವೇಳೆ ಮಾತನಾಡಿದ ದರ್ಶನ ಅರಣ್ಯವನ್ನು ಕಾಪಾಡುವುದು ನಮ್ಮ ಕೆಲಸ. ಯಾರೇ ಆಗಲಿ ಅರಣ್ಯಕ್ಕೆ ಬೆಂಕಿ ಹಚ್ಚುವ ದುಸ್ಸಾಹಸ ಮಾಡಬೇಡಿ ಎಂದು ಹೇಳುವ ಸ್ಥಿತಿ ಬಂದಿದೆ. ನಯವಾಗಿ ನಾಜೂಕಾಗಿ ಜನ್ರಿಗೆ ತಿಳಿ ಹೇಳಿದ್ರು ಪ್ರಯೋಜನ ಆಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.

ದೊಡ್ಡ ಲೆನ್ಸ್ ಹಿಡಿದು ಅರಣ್ಯಕ್ಕೆ ಇಳಿಯುವ ಐರವಾತ ಫೋಟೋ ತೆಗೆದು ಏನ್ ಮಡ್ತಾರೆ ಎಂದು ಕೆಲವರು ಯೋಚಿಸುತ್ತಿದ್ರು.. ಆ ಕುತೂಹಲದ ಯೋಚನೆಗೆ ಈಗ ಉತ್ತರ ಸಿಕ್ಕಿದೆ.. ಜೊತೆಗೆ ಪ್ರಕೃತಿ ಮಾತೆಯ ಒಡಲಿಗೆ ಬೆಂಕಿ ಇಡೋರಿಗೆ ಖಡಕ್ ವಾರ್ನಿಂಗ್ ಒಡೆಯನಿಂದ ಆಗಿದೆ.

ಶ್ರೀಧರ್ ಶಿವಮೊಗ್ಗ_ಎಂಟರ್​​ಟೈನ್ಮೆಂಟ್​​ ಬ್ಯೂರೋ_ಟಿವಿ5