‘ಆ ಭಾಗದಲ್ಲಿ ಅವರನ್ನು ನಾವು ಉಸಿರಾಡಲು ಬಿಡಲಿಲ್ಲ’ – ಅನಂತ್​ ಕುಮಾರ್​ ಹೆಗಡೆ

ಬೆಳಗಾವಿ: ಕಳೆದ 70 ವರ್ಷದ ಇತಿಹಾಸದಲ್ಲಿ ಕಾಂಗ್ರೆಸ್ ಬಾರಿ ಗಟ್ಟಿಯಾಗಿತ್ತು ಕಾಂಗ್ರೆಸ್ ಮುಕ್ತ ಭಾರತ ಮಾಡುವುದರ ಜೊತೆಗೆ, ಕಾಂಗ್ರೆಸ್ ಮುಕ್ತ ಉತ್ತರ ಕನ್ನಡ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್​ ಹೆಗಡೆ ಕಾಂಗ್ರೆಸ್ ವಿರುದ್ಧ ಕೀಡಿಕಾರಿದ್ದಾರೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾವು ಉಸಿರಾಡಲು ಕೊಡಲಿಲ್ಲ. ಈ ಚುಣಾವಣೆಯಲ್ಲಿ ನಾವು ಕಾಂಗ್ರೆಸ್ ಮುಕ್ತ ಮಾಡಿದ್ದೆ ಆದ್ರೆ, ಮುಂಬರುವ ವಿಧಾನಸಭೆಯಲ್ಲೂ ಕಾಂಗ್ರೆಸ್ ಮುಕ್ತ ಕರ್ನಾಟಕವನ್ನ ಮಾಡಬೇಕಿದೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ದೇಶದಲ್ಲಿ ಕಾಂಗ್ರೆಸ್ ಇರಬಾರದು ಬ್ರಿಟಿಷರಿಗಿಂತ ಹೆಚ್ಚು ಲೂಟಿ ಮಾಡಿದವರು ಕಾಂಗ್ರೆಸ್ ಪಕ್ಷ. ಭಾರತಕ್ಕೆ ಸ್ವಾತಂತ್ರ ಸಿಕ್ಕ ಬಳಿಕ ಕಾಂಗ್ರೆಸ್ ಸರಿಯಾದ ಆಡಳಿತ ನಡೆಸಿಲ್ಲ. ಇವತ್ತು ನಾವು ಬಡವರು ಕೆಲಸ ಆಗಿಲ್ಲ ಅಂತಾ ಹೇಳ್ತಿರಿಲ್ಲ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಆರೋಪ ಮಾಡಿದರು.

ಕಾಂಗ್ರೆಸ್ ಪಾಪದ ಫಲವಾಗಿ ನಾವು ಹಿಂದುಳಿದ ಪ್ರದೇಶ ಅಂತಾ ಹೇಳುವಂತಾಗಿದೆ. ಕಾಂಗ್ರೆಸ್ 70 ವರ್ಷದಲ್ಲಿ 6 ಕೋಟಿ ಸಿಲಿಂಡರ್ ಕೊಟ್ಟಿದೆ ಆದರೆ ಪ್ರಧಾನಿ ಮೋದಿ ಸರ್ಕಾರ 5 ವರ್ಷದಲ್ಲಿ 9 ವರೆ ಕೋಟಿ ಸಿಲಿಂಡರ್ ಕೊಟ್ಟಿದ್ದೇವೆ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದರು.

Recommended For You

Leave a Reply

Your email address will not be published. Required fields are marked *