ನಿಖಿಲ್ ನನಗೆ ವಿರೋಧಿ ಅಲ್ಲ- ಸುಮಲತಾ ಅಂಬರೀಷ್

ಮಂಡ್ಯ: ಇಂದು ಸುಮಲತಾ ಅಂಬರೀಷ್ ಬೆಳ್ಳಂಬೆಳಿಗ್ಗೆ ಪ್ರಚಾರ ಆರಂಭಿಸಿದ್ದು, ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಚುನಾವಣೆ ಬಗ್ಗೆ ಮಾತನಾಡಿದ್ದಾರೆ.

ನಾಳೆ ನನ್ನ ಸ್ಪರ್ಧೆ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟಿಸುತ್ತೇನೆ. ನಾಳೆ ಬೆಂಗಳೂರಿನ ಏಟ್ರಿಯಾ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಕರೆದಿದ್ದೇನೆ. ಅಲ್ಲಿ ನಿರ್ಧಾರ ಪ್ರಕಟಿಸ್ತೇನೆ. ಸ್ಪರ್ಧೆ ಅಂತೂ ಖಚಿತ ಎಂದು ಹೇಳಿದ್ದಾರೆ.
ಅಲ್ಲದೇ, ಪ್ರವಾಸದಲ್ಲಿ ರೈತರ ಭೇಟಿ ಮಾಡಿದ್ದೇನೆ. ಹಲವು ಸಲಹೆ ಕೊಟ್ಟಿದ್ದಾರೆ. ನಾನು ಯಾರನ್ನು ಟೀಕೆ ಮಾಡಲ್ಲ. ಹಿರಿಯರಿಗೆ ಗೌರವ ಕೊಡ್ತೀನಿ ಎಂದು ಹೇಳಿದ್ದಾರೆ.

ಇನ್ನು ಕಾಂಗ್ರೆಸ್‌ನವರು ಕೈ ಕೊಟ್ರೆ ನಾವು ಕೈ ಕೊಡ್ತೇವೆ ಎಂಬ ಸಚಿವ ಸಾ.ರಾ.ಮಹೇಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸುಮಲತಾ, ಸಾ.ರಾ. ಮಹೇಶ್ ಹೇಳಿಕೆಗೆ ಏನು ಹೇಳಬೇಕೆಂದು ಗೊತ್ತಾಗ್ತಿಲ್ಲ. ನಿಖಿಲ್ ನನಗೆ ವಿರೋಧಿ ಅಲ್ಲ. ಅವ್ರು, ಅಭಿಷೇಕ್ ಫ್ರೆಂಡ್ಸ್ ಆಗಿ ಇರ್ತಾರೆ ಎಂದು ಹೇಳಿದ್ದಾರೆ.

ಅಭಿಷೇಕ್ ಹಾಗೂ ನಿಖಿಲ್ ಸ್ನೇಹಿತರು ಸುಮಲತಾ ನಿಖಿಲ್‌ಗೆ ಅವಕಾಶ ಮಾಡಿಕೊಡಬಹುದಿತ್ತೆಂಬ ಸಾ.ರಾ. ಮಹೇಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸುಮಲತಾ, ಮಹೇಶ್ ಹೇಳಿಕೆಯ ಲಾಜಿಕ್ ನನಗೆ ಗೊತ್ತಿಲ್ಲ. ನಾನು ಒಂಟಿಯಾಗಿಲ್ಲ. ನಮ್ಮ ಜೊತೆ ಅಭಿಮಾನಿಗಳು ಇದ್ದಾರೆ. ಬಿಜೆಪಿ ಬೆಂಬಲ ಕೊಡುವ ಬಗ್ಗೆ ಅಫಿಷಿಯಲ್ಲಾಗಿ ಏನು ಹೇಳಿಲ್ಲ. ಮಾಜಿ ಸಂಸದ ಜಿ.ಮಾದೇಗೌಡ ಬೆಂಬಲ ನೀಡೋ ವಿಶ್ವಾಸ ಇದೆ ಎಂದು ಹೇಳಿದ್ದಾರೆ.