ಪ್ರೀತಿಗಾಗಿ ಪೀಠತ್ಯಾಗ ಮಾಡಿದ್ದ ಸ್ವಾಮೀಜಿ ಧಿಡೀರ್ ಪ್ರತ್ಯಕ್ಷ..!

ಕೊಪ್ಪಳ: ಪ್ರೀತಿಗಾಗಿ ಪೀಠತ್ಯಾಗ ಮಾಡಿ ನಾಪತ್ತೆಯಾಗಿದ್ದ ಸ್ವಾಮೀಜಿಯೊಬ್ಬರು ಪ್ರೀತಿಸಿದ ಹುಡಗಿಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇಬ್ಬರು ಹುಟ್ಟು ಹಬ್ಬ ಆಚರಣೆ ಮಾಡುತ್ತಿರೋ ಫೋಟೋ ವೈರಲ್ ಆಗಿದೆ.

ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ಸಿದ್ದೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರೀತಿಗಾಗಿ ಪೀಠತ್ಯಾಗ ಮಾಡಿದ್ದರು. ಕಳೆದ ಜನವರಿಯಲ್ಲಿ ಪೀಠತ್ಯಾಗ ಮಾಡಿ ನಾಪತ್ತೆಯಾಗಿದ್ದ ಸಿದ್ದಲಿಂಗ ಸ್ವಾಮೀಜಿ ಇದೀಗ ಸಾಮಾಜಿಕ ಜಾಲತಾಣದ ಮೂಲಕ ಪತ್ತೆಯಾಗಿದ್ದಾರೆ.

ಮುಂಡರಗಿ ಕಾಲೇಜಿನಲ್ಲಿ ಸ್ವಾಮೀಜಿ ಪಾಠ ಮಾಡಲು ಹೋಗುತ್ತಿದ್ದರು. ಆಗ ಕಾಲೇಜಿಗೆ ಬರುತ್ತಿದ್ದ ಹುಡಗಿಯೊಬ್ಬಳ ಮೇಲೆ ಸ್ವಾಮೀಜಿಗೆ ಪ್ರೇಮಾಂಕುರವಾಗಿದೆ. ಬಳಿಕ ಹೇಗೋ ಇಬ್ಬರ ನಡುವೆ ಪ್ರೀತಿ ಹುಟ್ಟಿ, ಕೊನೆಗೆ ಸ್ವಾಮೀಜಿ ಹುಡುಗಿಗಾಗಿ ಪೀಠವನ್ನ ತ್ಯಾಗ ಮಾಡಿ ನಾಪತ್ತೆಯಾಗಿದ್ದರು.