‘ನಟರು ಊಟಕ್ಕಾಗಿ ಬಣ್ಣಹಚ್ಚಿದ್ರೆ, ರಾಜಕಾರಣಿಗಳು ಓಟಿಗಾಗಿ ಬಣ್ಣ ಹಚ್ತಾರೆ’

ರಾಯಚೂರು: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನವರಸ ನಾಯಕ ಜಗ್ಗೇಶ್, ಮಂತ್ರಾಲಯಕ್ಕೆ ಭೇಟಿ ನೀಡಿ ಇಷ್ಟದೈವ ರಾಯ ರಾಘವೇದ್ರ ಸ್ವಾಮಿಗಳ ದರ್ಶನ ಪಡೆದರು.

ಇದೇ ವೇಳೆ ರಾಜಕೀಯದ ಬಗ್ಗೆ ಮಾತನಾಡಿದ ಜಗ್ಗೇಶ್, ರಾಜಕೀಯ ಹೊರತುಪಡಿಸಿ ಅಂಬರೀಶ್ ಅವರ ಜೊತೆ 30 ವರ್ಷಗಳ ಸಂಬಂಧವಿದೆ. ಯಾವತ್ತೂ ಕೂಡ ಅವರ ಕುಟುಂಬಕ್ಕೆ ಒಳಿತನ್ನೇ ಬಯಸುತ್ತೇನೆ ಎಂದು ಹೇಳಿದ್ದಾರೆ.

ಅಲ್ಲದೇ ಸುಮಲತಾ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ನಂಬಿಕೆಯಿದೆ. ಅಂಬರೀಶ್ ಸಾಧನೆ, ಜನರ ಪ್ರೀತಿ ಸುಮಲತಾ ಅವರ ಕೈ ಹಿಡಿಯುತ್ತೆ ಎಂದು ಹೇಳಿದ್ದಾರೆ.

ನಟರು ಊಟಕ್ಕಾಗಿ ಬಣ್ಣಹಚ್ಚಿದ್ರೆ ರಾಜಕಾರಣಿಗಳು ಓಟಿಗಾಗಿ ಬಣ್ಣ ಹಚ್ತಾರೆ. ಬಣ್ಣ ಹಾಕಿಕೊಳ್ಳುವ ರಾಜಕಾರಣಿಗಳ ಬಣ್ಣ ಜನ ತೆಗಿತಾರೆ. ರಾಜಕಾರಣಿಗಳು ಮಾನ ,ಮರ್ಯಾದೆ ಕೆಡಿಸಿಕೊಂಡಿದ್ದೇವೆ. ಅದರಲ್ಲಿ ಯಾರೂ ಉತ್ತಮರು ಅನ್ನೋದನ್ನ ಜನ ನಿರ್ಣಯ ಮಾಡುತ್ತಾರೆ. ಸ್ವಹಿತಾಸ್ತಕಿಗೆ ಮಹಾಘಟಬಂಧನ ಮಾಡಿಕೊಳ್ಳಲಾಗಿದೆ. ಅಭಿವೃದ್ಧಿ ಭಾರತವನ್ನ ನೋಡಬೇಕು ಅಂದ್ರೆ ಮೋದಿಗೆ ಅಧಿಕಾರ ಕೊಡಬೇಕು ಎಂದು ಹೇಳಿದ್ದಾರೆ.