ಹುಟ್ಟು ಹಬ್ಬದ ದಿನ ಪುನೀತ್ ರಾಜ್​ಕುಮಾರ್ ಹೇಳಿದ್ದೇನು..?

ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳ ಮಹಾಪೂರವೇ ದೊಡ್ಮನೆ ಬಳಿ ನೆರದಿದೆ. ಅಪ್ಪು ಮಾತನ್ನು ಪಾಲಿಸಿರುವ ಅಭಿಮಾನಿ ವಲಯ, ಕೇಕ್, ಹಾರ, ಬ್ಯಾನರ್ ಅಂತ ದುಂದು ವೆಚ್ಚ ಮಾಡದೇ ಪುನೀತ್ ಗೆ ವಿಶ್ ಮಾಡೋಕೆ ಕಾಯುತ್ತಿದ್ದಾರೆ.

ಅಭಿನಿಗಳನ್ನು ಭೇಟಿ ಮಾಡಿದ ಅಪ್ಪು, ಸಂತಸ ಹಂಚಿಕೊಂಡರು ಅಭಿಮಾಗಳ ಆಶೀರ್ವಾದಕ್ಕಿಂತ ದೊಡ್ಡ ಗಿಫ್ಟ್ ಇಲ್ಲ, ಪ್ರತೀ ಬಾರಿ ರಾತ್ರಿ ಮನೆಹತ್ರ ಬಂದು ಕಷ್ಟ ಪಡ್ತಿದ್ರು ಹಾಗಾಗಿ ರಾತ್ರಿ ಸೆಲೆಬ್ರೇಷನ್ ಬೇಡ ಅಂದುಕೊಂಡೆ ಅದಕ್ಕೆ ಅಭಿಮಾನಿಗಳು ಸಹಕರಿಸಿದ್ದಾರೆ ಎಂದು ನಟ ಪುನೀತ್ ರಾಜ್‍ಕುಮಾರ್ ಹೇಳಿದರು.

ಧಾರವಾಡ ಕಾಲೇಜ್ ನಲ್ಲಿ ಶೂಟಿಂಗ್ ಮಾಡಿದ್ವಿ ಸಾಕಷ್ಡು ಕಲಿತಿದ್ದೇನೆ. ಇನ್ನೂ ಇವತ್ತು ಜೇಮ್ಸ್ ಚಿತ್ರದ ಟೀಸರ್ ಕೂಡ ರಿಲೀಸ್ ಆಗ್ತಿದೆ. ಚಿಕ್ಕ ವಯಸ್ಸಿಂದಲೂ ಗಿಫ್ಟ್ ಅಂದ್ರೆ ಇಷ್ಟ, 18 ವರ್ಷದವನಿದ್ದಾಗ ಅಪ್ಪ ಅಮ್ಮ ನನಗೆ ಕಾರ್ ಗಿಫ್ಟ್ ಕೊಟ್ಟಿದರು. ಅದೇ ನಾನು ಮರೆಯಲಾಗದ ಗಿಫ್ಟ್ ಎಂದರು.

ಇನ್ನೂ ಈಗ ಬೇಸಿಗೆ ಬಂದಿದೆ ನಾವುಗಳೆಲ್ಲಾ ಕಾಡು ಕಡಿದು ಮನೆ ಮಾಡಿಕೊಂಡಿದ್ದೇವೆ ಎಲ್ಲರೂ ಮನೆ ಮುಂದೆ ನೀರಿಟ್ಟು ಪ್ರಾಣಿ ಪಕ್ಷಿಗಳಿಗೆ ಸಹಾಯ ಮಾಡಿ ಎಂದು ಪುನೀತ್ ರಾಜ್​ಕುಮಾರ್ ಮನವಿ ಮಾಡಿದರು.

ಸ್ಯಾಂಡಲ್ ವುಡ್ ಯುವರತ್ನ ಪುನೀತ್ ರಾಜ್‍ಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 44 ನೇ ವಸಂತಕ್ಕೆ ಕಾಲಿಟ್ಟಿರೋ ಅಪ್ಪು ಅಭಿಮಾನಿಗಳ ಜೊತೆ ಬರ್ತ್ ಡೇ ಆಚರಿಸಿಕೊಳ್ಳಲಿದ್ದಾರೆ ಅವರಿಗೆ ದೇವರು ಇನ್ನಷ್ಟು ಯಶಸ್ಸು ನೀಡಲಿ