ಪವರ್ ಸ್ಟಾರ್ ಪುನೀತ್ ಬರ್ತ್​ಡೇಗೆ ಸಿಕ್ತು ಸ್ಪೇಷಲ್ ಗಿಫ್ಟ್..!

ಬೆಳಯುವ ಸಿರಿ ಮೊಳಕೆಯಲ್ಲೆ ಎಂಬುವಂತೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹುಟ್ಟು ಕಲಾವಿದ. ಬಾಲ್ಯದಲ್ಲಿಯೇ ರಾಷ್ಟ್ರ ಪ್ರಶಸ್ತಿಗೆ ಮುತ್ತಿಟ್ಟದ್ದ ಸನ್ನಾಫ್ ರಾಜಕುಮಾರ.. ಇಂತಿಪ್ಪ ಪವರ್ ಫುಲ್ ಮಹಾರಾಜನಿಗೆ 44ನೇ ಜನ್ಮದಿನದ ಸವಿ ಸಂಭ್ರಮ. ಅಪ್ಪುಗೆ ಜನ್ಮದಿನದ ಸಂಭ್ರಮವಾದ್ರೆ, ಅಭಿಮಾನಿಗಳಿಗೆ ಸಂಭ್ರಮದ ಜೊತೆಗೆ ಸಡಗರ. ಚಂದನವನಕ್ಕೆ ಹೊಸ ಉತ್ಸಾಹ.. ಹಾಗದ್ರೇ ದೊಡ್ಮನೆಯ ರಾಜರತ್ನೋತ್ಸವದ ಹೆಂಗಿತ್ತು..? ಏನೇನು ಸ್ಪೆಷಲ್ ಗಿಫ್ಟ್ ಅಪ್ಪು ಅವರಿಗೆ ಸಿಕ್ತು..?

ದೊಡ್ಮನೆ ರಾಜಕುಮಾರನ 44ನೇ ಪಟ್ಟಾಭೀಷೇಕ..! 

ಅಭಿಮಾನಿಗಳ ಸಡಗರ ಸಂಭ್ರಮಕ್ಕೆ ಪುನೀತ್​ ಪುಳಕ..!

ಕೇಕ್​ ಇಲ್ಲ, ಹಾರ ಆಡಂಭರವಿಲ್ಲ ಸರಳ ಸುಂದರ ಜನ್ಮದಿನ..!

ಅಪ್ಪು ಮನವಿಯನ್ನು ನೆರವೆರಿಸಿತು ಅಭಿಮಾನಿ ದೇವ್ರ ಮನ..!

ಈ ಮಾತನ್ನ ಸೂಪರ್ ಸ್ಟಾರ್ ರಜನಿಕಾಂತ್ ಈ ಮಾತು ಅಕ್ಷರಶಹ ಸತ್ಯ.. ಇದೊಂದು ಸಿಂಹದ ಮರಿ.. ಘರ್ನನೆ ಮಾಡ್ತಿದೆ.. ಇನೇನು ಮುಂದೆ ಮಾಡುತ್ತೋ..!!!! ಈ ಮಾತನ್ನು ಅಂದು ಅಪ್ಪು ಸಿನಿಮಾ ಶತದಿನ ಪೂರೈಸಿದಾಗ ಡಾ.ರಾಜ್ ಸಮೂಖದಲ್ಲಿ ಸಾವಿರಾರು ಜನರ ಮುಂದೆ ಹೇಳಿದ್ದರು.. ಆ ಮಾತು ಇಂದಿಗೂ ಚಾಲ್ತಿಯಲ್ಲಿದೆ.. ಡಾ.ರಾಜ್​​ಕುಮಾರ್ ಸನ್ ಅನ್ನೋದನ್ನು ಪಕ್ಕ ಇಟ್ಟು , ತಾನೇಂತ ಟ್ಯಾಲೆಂಟ್ ಅನ್ನೋದನ್ನು ಚಿಕ್ಕವರಾಗಿದಾಗಿಂದಲೇ ಪ್ರೋ ಮಾಡುತ್ತಲೇ ಬಂದಿದ್ದಾರೆ.

ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಒಂದು ವರ್ಷ ಪುಟ್ಟ ಕಂದನಾಗಿದಾಗಲೇ ಕ್ಯಾಮೆರಾಗೆ ಕಣ್ಣು ಹೊಡೆದಿದ್ರು ಅಪ್ಪು.. ಸನ್ನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ , ವಸಂತ ಗೀತ , ಭಾಗ್ಯವಂತ , ಬೆಟ್ಟದ ಹೂವು , ಚಲಿಸುವ ಮೋಡಗಳು , ಭಕ್ತ ಪ್ರಹ್ಲಾದ ಸೇರಿದಂತೆ ಅನೇಕ ಸೂಪರ್ ಡೂಪರ್ ಹಿಟ್ ಸಿನ್ಮಾಗಳಲ್ಲಿ ಸೂಪರ್ ಫರ್ಪಾರ್ಮೆನ್ಸ್ ಕೊಟ್ಟವರು.. ಅಪ್ಪು ಸಿನಿಮಾದ ಮೂಲಕ ಪವರ್ ಸ್ಟಾರ್ ಆಗಿ ಚಿತ್ರರಂಗಕ್ಕೆ ಜಿಗಿದು ಬಂದವರು.

28 ಸಿನಿಮಾಗಳಲ್ಲಿ ಈಗಾಗಲೇ ಹೀರೋ ಆಗಿ ಕನ್ನಡಿಗರ ಮನಗೆದ್ದಿರುವ ಪುನೀತ್​ರವರಿಗೆ 44ನೇಯ ಜನ್ಮದಿನದ ಸಂಭ್ರಮ. ಈ ಸಂಭ್ರಮಕ್ಕೆ ಸಾಕ್ಷಿಯಾದವರು ಸಾವಿರಾರು ಅಭಿಮಾನಿದೇವ್ರ ಗಣ. ಅಪ್ಪು ಮನವಿಯನ್ನ ಮನಸಾರೆ ಸ್ವೀಕರಿಸಿ ಅಪ್ಪು ಹೇಳಿದಂತೆ ರಾತ್ರಿ ಬರದೆ ಬೆಳ್ಳಂ ಬೆಳಗ್ಗೆನೆ ದೊಡ್ಮನೆಯ ಮುಂದೆ ಹಾಜರಾದ್ರು ಅಭಿಮಾನಿಗಳು.

ಪವರ್ ಸ್ಟಾರ್ ಬರ್ತ್​ಡೇಗೆ ಯುವರತ್ನ , ಜೇಮ್ಸ್ ಗಿಫ್ಟ್..!

ಯುವರತ್ನ ಚಿತ್ರತಂಡದಿಂದ ಫಸ್ಟ್ ಲುಕ್ ರಿವೀಲ್..

ಭರ್ಜರಿಯಾಗಿದೆ ಜೇಮ್ಸ್​​ ಮೋಷನ್ ಪೋಸ್ಟರ್.

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟಸಾರ್ವಭೌಮ ಚಿತ್ರದಲ್ಲಿ ಅದ್ಧೂರಿಯಾಗಿ ನರ್ತಿಸಿದ ನಂತರ ಈಗ ಕಾಲೇಜು ಹುಡ್ಗನಾಗಿ ಯುವರತ್ನ ಚಿತ್ರಕ್ಕಾಗಿ ಕೆಲಸ ಮಾಡ್ತಿದ್ದಾರೆ.. ಸಂತೋಷ್ ಆನಂದ್​​ರಾಮ್ ರಾಜಕುಮಾರ್ ಚಿತ್ರದ ನಂತರ ದೊಡ್ಮನೆಯ ಹುಡ್ಗನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.. ಈ ಜೋಡಿಯ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳು ಸಿನಿರಸಿಕರ ಕಂಗಳಲಿವೆ.. ಆ ನಿರೀಕ್ಷೆಯನ್ನು ಇನಷ್ಟು ಹೆಚ್ಚಿಸಲು ಯುವರತ್ನ ಚಿತ್ರದ ನಯಾ ಪೋಸ್ಟರ್ ಬಿಡುಗಡೆಯಾಗಿದೆ.. ಕಾಲೇಜು ಹುಡ್ಗನಾಗಿ ಪುನೀತ್ ಮಿಂಚಿದ್ದಾರೆ.

ಇನ್ನು ಜೇಮ್ಸ್. ಭರ್ಜರಿ ಸಿನಿಮಾದ ಡೈರೆಕ್ಟರ್ ಚೇತನ್ ಕುಮಾರ್ ನಿರ್ದೇಶಿಸಲು ಸಜ್ಜಾಗಿರುವ ಸಿನಿಮಾ.. ಈ ಮೊದಲೆ ಜೇಮ್ಸ್ ಶೂಟಿಂಗ್ ಅಕಾಡಕ್ಕೆ ಇಳಿಯ ಬೇಕಿತ್ತು. ಆದ್ರೆ ಕಾಲ ಕೂಡಿ ಬಂದಿರಲಿಲ್ಲ.. ಈ ಬಾರಿ ಪೋಸ್ಟರು , ಮೋಷನ್ ಪೋಸ್ಟರ್ ನೋಡಿದ್ರೆ ಶೂಟಿಂಗ್ ಹೋಗೋ ಸಾಧ್ಯತೆ ಧಟ್ಟವಾಗಿ ಗೋಚರವಾಗುತ್ತಿದೆ.. ಱಪ್ ಸ್ಟಾರ್ ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ಜೇಮ್ಸ್ ಮೋಷನ್ ಪೋಸ್ಟರ್ ಧಗಧಗಿಸಿದೆ.

ಅಪ್ಪು ಬರ್ತ್​ಡೇ ಪ್ರಯುಕ್ತವಾಗಿ ಅಭಿಮಾನಿಗಳು ರಾಜ್ಯಾದ ನಾನಾ ಭಾಗದಿಂದ ಸದಶೀವ ನಗರದಲ್ಲಿ ಬಿಡು ಬಿಟ್ಟು ಅಪ್ಪುಗೆ ಜೈ ಜೈ ಅಂದಿದ್ದಾರೆ. ಇನ್ನು ಕೆಲವರು ಸ್ಟಾರ್ ಸೆಲಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಪವರ್ ಸ್ಟಾರ್​ಗೆ ವಿಶ್ ಮಾಡುವುದ್ರ ಮೂಲಕ ರಾಜರತ್ನನಿಗೆ ಬಹುಪರಾಕ್ ಎಂದಿದ್ದಾರೆ. 44ನೇ ಜನ್ಮದಿನದ ಸಂಭ್ರಮದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಅವರಿಗೆ ಟಿವಿ5 ಕನ್ನಡ ಬಳಗದಿಂದ ಹ್ಯಾಪಿ ಹುಟ್ಟು ಹಬ್ಬ.. ಇನಷ್ಟು ಅದ್ಧೂರಿ ಸಿನಿಮಾಗಳು ಅಪ್ಪು ಕಡೆಯಿಂದ ಬರ್ಲಿ.. ಸದಾ ಅವರ ಮೊಗದಲ್ಲಿ ನಗು ಅರಳಿರಲಿ.