ರಾಜಕೀಯಕ್ಕಾಗಿ ನನ್ನ ಅಭಿ ಸಂಬಂಧ ಹಾಳಾಗಲು ಬಿಡಲ್ಲ- ನಿಖಿಲ್

ಮೈಸೂರು: ಚುನಾವಣೆಗಾಗಿ ಭರ್ಜರಿ ತಯಾರಿ ನಡೆಸಿರುವ ನಿಖಿಲ್ ಕುಮಾರ್, ನಿನ್ನೆ ಅಮ್ಮನೊಂದಿಗೆ ಮಾಜಿ ಸ್ಪೀಕರ್ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದರು.

ಮೈಸೂರಿನ ಕುವೆಂಪುನಗರದ ನಿವಾಸಕ್ಕೆ ಭೇಟಿ ನೀಡಿದ ನಿಖಿಲ್ ಮತ್ತು ಅನಿತಾ ಕುಮಾರಸ್ವಾಮಿ, ಲೋಕಸಭಾ ಚುನಾವಣೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಕೆ.ಆರ್.ಪೇಟೆಯಲ್ಲಿ ಉತ್ತಮ ಹೆಸರು ಮಾಡಿರುವ ಕೃಷ್ಣ, ಕೆ.ಆರ್.ಪೇಟೆ ಕೃಷ್ಣ ಎಂದೇ ಖ್ಯಾತಿ ಪಡೆದಿದ್ದಾರೆ.

ಇನ್ನು ಸ್ನೇಹನೇ ಬೇರೆ ರಾಜಕೀಯನೇ ಬೇರೆ ಎಂಬ ಅಭಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಿಖಿಲ್, ನಾನು ಆ ಸಂಬಂಧವನ್ನ ಉಳಿಸಿಕೊಳ್ಳುತ್ತೇನೆ. ರಾಜಕೀಯಕ್ಕಾಗಿ ನಮ್ಮ ನಡುವಿನ ಸಂಬಂಧ ಹಾಳಾಗಲು ಬಿಡೋದಿಲ್ಲ ಎಂದು ಹೇಳಿದ್ದಾರೆ.

ಇನ್ನು ಸಚಿವ ಸಾ.ರಾ.ಮಹೇಶ್ ಕೈಗೆ ಎಚ್ಚರಿಕೆ ಕೊಟ್ಟ ವಿಚಾರದ ಬಗ್ಗೆ ಮಾತನಾಡಿದ ನಿಖಿಲ್, ಸಾರಾ ಮಹೇಶ್ ಅವ್ರು ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದು ನಮಗೆ ಗೊತ್ತಿಲ್ಲ. ಇದನ್ನ ಸಾರಾ ಅವ್ರಿಂದಲೇ ಪ್ರತಿಕ್ರಿಯೆ ಪಡೆಯಬೇಕು. ನಾನು ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದೇನೆ. ಈಗಾಗಲೇ ನಾನು ಎಲ್ಲ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಎಲ್ಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.