ಮೋದಿಯವರು ತಮ್ಮ‌ ನಡವಳಿಕೆಯನ್ನು ಸುಧಾರಣೆ ಮಾಡಿಕೊಳ್ಳಬೇಕು: ಮಾಜಿ ಪ್ರಧಾನಿ ದೇವೇಗೌಡ

ಪ್ರಧಾನಿ ನರೇಂದ್ರ  ಮೋದಿಯವರು ತಮ್ಮ‌ ನಡವಳಿಕೆಯನ್ನು ಸುಧಾರಣೆ ಮಾಡಕೊಳ್ಳಬೇಕು. ಮೋದಿಯವರು ದೇಶವನ್ನು ಎಲ್ಲಿಗೆ ಕೊಂಡ್ಯುಯಲ್ಲಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ

ಶಿವಮೊಗ್ಗದಲ್ಲಿ ಭಾನುವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಕಳೆದ ಐದು ವರ್ಷಗಳಲ್ಲಿ ದೇಶದ ವ್ಯವಸ್ಥೆಯಲ್ಲಿ ಹಲವು ಮಾರ್ಪಾಡು ಗಳಾಗಿವೆ. ಮೋದಿ ಪ್ರಧಾನಿಯಾದ ಬಳಿಕ ಬಹುತೇಕ ಎಲ್ಲ ರಾಷ್ಟಗಳಿಗೆ ಹೋಗಿದ್ದಾರೆ. ಈ ಕಾರಣದಿಂದ ನಮ್ಮ ದೇಶದ ವೈರಿ ಯಾರು ಅಂತ ಗುರುತಿಸಲು ಕಷ್ಟವಾಗಿದೆ ಎಂದರು.

ಶಿವಸೇನಾ ಪಕ್ಷಗಳೊಂದಿಗೆ ಮೈತ್ರಿ

ಮೋದಿಯವರು ಮತ್ತೆ ಅಧಿಕಾರ ಪಡೆಯಲು ಹಪಹಪಿಸುತ್ತಿದ್ದಾರೆ. ತಮಿಳುನಾಡು, ಮಹರಾಷ್ಟ್ರ ರಾಜ್ಯಗಳಲ್ಲಿ ಮೋದಿ ಎಐಡಿಎಂಕೆ ಹಾಗೂ ಶಿವಸೇನಾ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ನನಗೆ ರಾಜಕೀಯ ವ್ಯಾಮೋಹವಿಲ್ಲ, ನಾನು ಜಾತಿ ವಿರೋಧಿ ಅಲ್ಲ ಎಂದು ನುಡಿದರು.

ದೇಶಕ್ಕೆ ಒಂದು ಸಂದೇಶ

ನಂತರ ಮಾತನಾಡಿದ ಅವರು ಉಪಚುನಾವಣೆಯಲ್ಲಿ ನಾವು ಸ್ವಲ್ಪ ಎಡವಿದ್ದೇವೆ. ಈಗ ನಡೆಯುತ್ತಿರುವ ಮಹಾ ಚುನಾವಣೆಯಲ್ಲಿ ಮಧು ಬಂಗಾರಪ್ಪ ಗೆಲ್ಲಬೇಕು. ಆ ಮೂಲಕ ದೇಶಕ್ಕೆ ಒಂದು ಸಂದೇಶ ರವಾನಿಸಬೇಕು. ಮಧುಬಂಗಾರಪ್ಪ ಪರ ಪ್ರಚಾರ ಮಾಡಲು ನಾನು ಬರುತ್ತೇನೆ. ಜನರ ಬಳಿ ನಾನು ಮತ ಭೀಕ್ಷೆ ಬೇಡುತ್ತೇನೆ ಎಂದು ಹೇಳಿದರು.

ನಾನು ಚುನಾವಣೆಗೆ ನಿಲ್ಲುವ ತೀರ್ಮಾನವನ್ನ ಮಾಡಿಲ್ಲ

ಎಲೆಕ್ಷನ್ ನ ಉಪಯೋಗ ಪಡೆದುಕೊಳ್ಳಲು ಕೆಂದ್ರ ಸರ್ಕಾರ 12 ಕೋಟಿ ರೈತರ ಖಾತೆಗೆ 2 ಸಾವಿರ ಹಣ ನೀಡುತ್ತಿದೆ. ದೇಶದ ಜನರು ನನ್ನನ್ನ ಚುನಾವಣೆಗೆ ನಿಲ್ಲಿಸಲು ತೀರ್ಮಾನ ಮಾಡಿದ್ದಾರೆ. ನಾನು ಚುನಾವಣೆಗೆ ನಿಲ್ಲುವ ತೀರ್ಮಾನವನ್ನು ಮಾಡಿಲ್ಲ ಎಂದು ದೇವೇಗೌಡರು ಇದೇ ವೇಳೆ ತಿಳಿಸಿದರು.